ನವದೆಹಲಿ: ವಾಯುಯಾನ ಕ್ಷೇತ್ರಕ್ಕೆ ಭಾರತವು $1.6 ಬಿಲಿಯನ್ ಮೌಲ್ಯದ ರೆಸ್ಕ್ಯೂ ಪ್ಯಾಕೇಜ್ ಅನ್ನು ನೀಡಲು ಯೋಜಿಸುತ್ತಿದೆ. ಕೊರೋನವೈರಸ್ ಹಿನ್ನಲೆಯಲ್ಲಿ ಹಲವು ದೇಶಗಳಲ್ಲಿ ವೈಮಾನಿಕ ಸೇವೆ ರದ್ದುಗೊಂಡಿದೆ. ಇದರಿಂದಾಗಿ ಈ ವಲಯವು ಭಾರೀ ನಷ್ಟವನ್ನು ಅನುಭವಿಸುತ್ತಿದೆ.
ವಾಯುಯಾನ ಇಂಧನ ತೆರಿಗೆಯನ್ನು ಮುಂದೂಡುವುದು ಸೇರಿದಂತೆ ಈ ವಲಯದ ಮೇಲೆ ವಿಧಿಸಲಾಗುವ ಹೆಚ್ಚಿನ ತೆರಿಗೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಪ್ರಸ್ತಾಪವನ್ನು ಹಣಕಾಸು ಸಚಿವಾಲಯ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು ಪ್ರಸ್ತಾಪಿಸಿರುವ ರೆಸ್ಕ್ಯೂ ಪ್ಯಾಕೇಜ್ 100-120 ಬಿಲಿಯನ್ ರೂಪಾಯಿ ($1.3-$1.6 billion) ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
“ಕೊರೋನವೈರಸ್ ಹರಡುವಿಕೆ ನಿಲ್ಲುವವರೆಗೆ ಮತ್ತು ವಾಯುಯಾನ ಕ್ಷೇತ್ರವು ಮತ್ತೆ ತನ್ನ ಸ್ಥಿತಿಗೆ ಬರುವವರೆಗೂ ತೆರಿಗೆಗಳನ್ನು ಮುಂದೂಡಬಹುದು” ಎಂದು ಮೂಲವೊಂದು ಹೇಳಿದೆ, ಮುಂದಿನ ತೆರಿಗೆ ಚಕ್ರದಲ್ಲಿ ತೆರಿಗೆಗಳನ್ನು ಬಡ್ಡಿರಹಿತವಾಗಿ ಪಾವತಿಸಲು ಕಂಪನಿಗಳಿಗೆ ಅನುಮತಿ ನೀಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.