ನವದೆಹಲಿ: ದೆಹಲಿ ಗಲಭೆಯಲ್ಲಿ ಭಾಗಿಯಾದ ಯಾವೊಬ್ಬ ವ್ಯಕ್ತಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಲೋಕಸಭೆಯಲ್ಲಿ ಗುಡುಗಿದ್ದಾರೆ.
ಲೋಕಸಭೆಯಲ್ಲಿ ದೆಹಲಿ ಗಲಭೆ ಕುರಿತು ಚರ್ಚೆಗೆ ಗೃಹ ಸಚಿವ ಅಮಿತ್ ಶಾ ಬುಧವಾರ ಸಂಜೆ ಉತ್ತರ ನೀಡಿದ್ದು ”ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೆಹಲಿ ಗಲಭೆಗೆ ಕಾರಣರಾದ ಯಾರೊಬ್ಬರನ್ನೂ ಸುಮ್ಮನೆ ಬಿಡುವುದಿಲ್ಲ, ಗಲಭೆ ಸೃಷ್ಟಿಸಿದ ಎರಡೂ ಕಡೆಯವರನ್ನು ಖಂಡಿತ ಶಿಕ್ಷಿಸಲಿದೆ” ಎಂದು ಭರವಸೆ ನೀಡಿದರು.
ಗಲಭೆಯಲ್ಲಿ ಮೃತಪಟ್ಟವರ ಬಗ್ಗೆ ಶಾ ಸಂತಾಪವನ್ನು ವ್ಯಕ್ತಪಡಿಸಿದರು.
ಫೆಬ್ರವರಿ 25 ರ ನಂತರ ಯಾವುದೇ ಗಲಭೆ ಘಟನೆಗಳು ವರದಿಯಾಗಿಲ್ಲ ಎಂದು ಶಾ ಸದನಕ್ಕೆ ತಿಳಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಗಲಭೆ ಪೀಡಿತ ಪ್ರದೇಶಕ್ಕೆ ತೆರಳಿ ಪೊಲೀಸ್ ಪಡೆಗಳ ಸ್ಥೈರ್ಯವನ್ನು ಹೆಚ್ಚಿಸಲು ವೈಯಕ್ತಿಕವಾಗಿ ಪ್ರಯತ್ನಿಸಿದರು ಎಂದು ಶಾ ಹೇಳಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಒಟ್ಟು 700 ಎಫ್ಐಆರ್ ದಾಖಲಿಸಲಾಗಿದೆ ಮತ್ತು ಉತ್ತರ ಪ್ರದೇಶದಿಂದ ಸುಮಾರು 300 ಗಲಭೆಕೋರರು ಬಂದಿದ್ದರು ಎಂಬುದು ತಿಳಿದು ಬಂದಿದೆ. ಸರ್ಕಾರದ ಮಾಹಿತಿಯ ಆಧಾರದ ಮೇಲೆ ಗಲಭೆಕೋರರನ್ನು ಗುರುತಿಸಲು ದೆಹಲಿ ಪೊಲೀಸರು ತಮ್ಮ ಆಂತರಿಕ ಫೇಸ್ ರೆಕಗ್ನಿಶನ್ ಸಾಫ್ಟ್ವೇರ್ ಅನ್ನು ಬಳಸುತ್ತಿದ್ದಾರೆ ಎಂದು ಶಾ ಮಾಹಿತಿ ನೀಡಿದರು.
“ಒಂದು ದೊಡ್ಡ ಪಕ್ಷವು ಸಮಾವೇಶವನ್ನು ನಡೆಸಿತು. ಈ ಸಮಾವೇಶದಲ್ಲಿ ನಿಮ್ಮ ಮನೆಗಳಿಂದ ಹೊರಬನ್ನಿ ಎಂದು ಕರೆ ನೀಡಲಾಗಿತ್ತು, ಇವು ನಿಮಗೆ ದ್ವೇಷದ ಭಾಷಣಗಳಂತೆ ಕಾಣುವುದಿಲ್ಲವೇ” ಎಂದು ಶಾ ಪ್ರತಿಪಕ್ಷಗಳನ್ನು ಪ್ರಶ್ನಿಸಿದ್ದಾರೆ.
ಯೋಜಿತ ಪಿತೂರಿನಡೆಸದೆ ಇಂತಹ ಗಲಭೆಗಳು ನಡೆಯಲು ಸಾಧ್ಯವಿಲ್ಲ ಮತ್ತು ಪೊಲೀಸರು ಪ್ರಸ್ತುತ ಈ ಆಯಾವನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ದಂಗೆಗೆ ಹಣಕಾಸು ಒದಗಿಸಿದ್ದಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.