ಸುಬ್ರಹ್ಮಣ್ಯ: ಭಾರತವು ಸಂಸ್ಕೃತಿ, ಸಂಪ್ರದಾಯದ ಮೂಲಕ ಇಡೀ ವಿಶ್ವಕ್ಕೆ ಗುರು ಎನಿಸಿಕೊಂಡಿದೆ. ಆದರೆ ಭಾರತದಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದೆ. ಗುರು ಪರಂಪರೆ ಈಗಲೂ ಉಳಿದುಕೊಂಡಿರುವುದರಿಂದಲೇ ದೇಶದಲ್ಲಿ ಉನ್ನತಿ, ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ಸುಧಾಕರ್ ಜೀ ಹೇಳಿದರು.
ಅವರು ಭಾನುವಾರ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆದ ಗುರುಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಗುರುಕುಲಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಹೇಳುವ ಕೆಲಸ ಮಾಡಲಾಗಿತ್ತು. ಹೀಗಾಗಿ ಇಲ್ಲಿ ಗುರು ಮುಖ್ಯ ಸ್ಥಾನವನ್ನು ಪಡೆದಿದ್ದ. ಇಂದಿಗೂ ಈ ಪರಂಪರೆ ಮುಂದಿವರಿದಿದೆ. ವ್ಯಕ್ತಿಗೆ ಗುರಿ ಮುಖ್ಯ. ಈ ಗುರಿಯನ್ನು ತಲುಪಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದರು. ಹಿಂದೂ ಸಂಸ್ಕೃತಿಯ ಪ್ರತೀಕ ಭಗವಧ್ವಜ, ಅದಕ್ಕಾಗಿಯೇ ಈಗ ಭಗವಧ್ವಜವನ್ನು ಗುರುವಾಗಿ ಸ್ವೀಕರಿಸಲಾಗಿದೆ. ಅದರ ಅಡಿಯಲ್ಲಿ ಸಮಾಜದ ಕೆಲಸ ಮಾಡಲಾಗುತ್ತಿದೆ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಗುತ್ತಿಗಾರು ಪ್ರಾಥಮಿಕ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಆರ್. ರಾಧಾಕೃಷ್ಣ ಮಾತನಾಡಿ, ದೇಶದ ನಾಗರಿಕತೆ ಆರಂಭವಾಗುವ ವೇಳೆಯೇ ಭಾರತದಲ್ಲಿನ ಸಂಸ್ಕೃತಿ, ಸಂಪ್ರದಾಯಗಳು ಜಗತ್ತಿನ ಗಮನ ಸೆಳೆದಿತ್ತು. ಹೀಗಾಗಿ ಇಂದಿಗೂ ದೇಶದ ಆಚಾರ ವಿಚಾರಗಳಿಗೆ ಆದ್ಯತೆ ಇದೆ. ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ವಳಲಂಬೆ ಹಾಗೂ ಗುತ್ತಿಗಾರು ಪ್ರದೇಶದ ಸ್ವಯಂಸೇವಕರು, ಸಾರ್ವಜನಿಕರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.