ನವದೆಹಲಿ: ಜಾಗತಿಕ ರಕ್ಷಣಾ ರಫ್ತುಗಳಲ್ಲಿ ಭಾರತದ ಪಾಲನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ, ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಾಲ್ಕು ವಿದೇಶಗಳಲ್ಲಿ ಲಾಜಿಸ್ಟಿಕ್ಸ್ ನೆಲೆಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.
ಎಚ್ಎಎಲ್ ನೆಲೆಗಳನ್ನು ಸ್ಥಾಪಿಸಲು ಯೋಜಿಸಿರುವ ನಾಲ್ಕು ರಾಷ್ಟ್ರಗಳೆಂದರೆ ಮಲೇಷ್ಯಾ, ವಿಯೆಟ್ನಾಂ, ಇಂಡೋನೇಷ್ಯಾ ಮತ್ತು ಶ್ರೀಲಂಕಾ. ಈ ಬೆಳವಣಿಗೆಯು ಭಾರತದ ಅತ್ಯಾಧುನಿಕ ಲಘು ಯುದ್ಧ ವಿಮಾನ ತೇಜಸ್ ಮತ್ತು ಇತರ ಮಿಲಿಟರಿ ಹೆಲಿಕಾಪ್ಟರ್ಗಳನ್ನು ಖರೀದಿಸಲು ಈ ರಾಷ್ಟ್ರಗಳಿಗೆ ಉತ್ತೇಜನವನ್ನು ನೀಡುವ ನಿರೀಕ್ಷೆ ಇದೆ.
ತನ್ನ ಪ್ರಮುಖ ಮಿಲಿಟರಿ ವಿಮಾನ ತೇಜಸ್ , ದಾಳಿ ಹೆಲಿಕಾಪ್ಟರ್ ರುದ್ರ ಮತ್ತು ಸುಧಾರಿತ ಲೈಟ್ ಹೆಲಿಕಾಪ್ಟರ್ ಧ್ರುವ್ ಅನ್ನು ರಫ್ತು ಮಾಡಲು ಎಚ್ಎಎಲ್ ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾವನ್ನು ಆದ್ಯತೆಯ ಪ್ರದೇಶಗಳಾಗಿ ಗುರುತಿಸಿದೆ ಎಂಬುದಾಗಿ ಎಚ್ಎಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್ ಮಾಧವನ್ ಅವರು ಹೇಳಿದ್ದಾರೆ.
ಈ ರಾಷ್ಟ್ರಗಳಲ್ಲಿ ಎಚ್ಎಎಲ್ ಸ್ಥಾಪಿಸಲು ಯೋಜಿಸುತ್ತಿರುವ ಲಾಜಿಸ್ಟಿಕ್ಸ್ ನೆಲೆಗಳು ರಷ್ಯಾದ ವಿಮಾನಗಳಿಗೆ ನಿರ್ವಹಣಾ ಸೇವೆಗಳನ್ನು ತಲುಪಿಸಲಿದೆ. ರಷ್ಯಾದ ಸೇವಾ ಸಾಮರ್ಥ್ಯದ ದಾಖಲೆ ತುಂಬಾ ಕಳಪೆಯಾಗಿದೆ, ಭಾರತ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಮುಂದಿನ ಐದು ವರ್ಷಗಳಲ್ಲಿ $5 ಬಿಲಿಯನ್ ರಕ್ಷಣಾ ವಲಯದ ರಫ್ತು ಸಾಧಿಸುವ ಗುರಿಗೆ ಈ ಬೆಳವಣಿಗೆಯು ಮಹತ್ವದ ಉತ್ತೇಜನವನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.