ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಏಳು ಮಂದಿ ಮಹಿಳಾ ಸಾಧಕಿಯರಿಗೆ ಹಸ್ತಾಂತರ ಮಾಡಿದ್ದಾರೆ.
ಈ ಖಾತೆಗಳ ಮೂಲಕ ಏಳು ಮಂದಿ ಮಹಿಳಾ ಸಾಧಕಿಯರು ತಮ್ಮ ಜೀವನ ಪಯಣದ ಬಗ್ಗೆ ವಿವರಿಸಲಿದ್ದಾರೆ.
ಇಂದು ಖಾತೆಗಳನ್ನು ಹಸ್ತಾಂತರಿಸುವ ಬಗ್ಗೆ ಟ್ವೀಟ್ ಮಾಡಿದ ಮೋದಿ, ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ನಮ್ಮ ನಾರಿ ಶಕ್ತಿಯ ಸ್ಫೂರ್ತಿ ಮತ್ತು ಸಾಧನೆಗೆ ನಮ್ಮ ಸೆಲ್ಯೂಟ್. ಸಾಮಾಜಿಕ ಜಾಲತಾಣಗಳಿಂದ ಇಂದು ವಿರಾಮ ಪಡೆಯಲಿದ್ದೇನೆ ಎಂದು ಕೆಲ ದಿನಗಳ ಹಿಂದೆಯಷ್ಟೇ ನಾನು ಘೋಷಿಸಿದ್ದೆ. ಅದರಂತೆ ಇಂದು ನನ್ನ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳಾ ಸಾಧಕಿಯರು ತಮ್ಮ ಜೀವನ ಪಯಣವನ್ನು ವಿವರಿಸಲಿದ್ದಾರೆ” ಎಂದಿದ್ದಾರೆ.
Greetings on International Women’s Day! We salute the spirit and accomplishments of our Nari Shakti.
As I’d said a few days ago, I’m signing off. Through the day, seven women achievers will share their life journeys and perhaps interact with you through my social media accounts.— Narendra Modi (@narendramodi) March 8, 2020
“ದೇಶದ ಪ್ರತಿ ಭಾಗದಲ್ಲೂ ಪ್ರಥಮ ಮಹಿಳಾ ಸಾಧಕರನ್ನು ಭಾರತವು ಹೊಂದಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಅದ್ಭುತವಾದ ಕಾರ್ಯಗಳನ್ನು ಮಾಡಿದ್ದಾರೆ. ಅವರ ಹೋರಾಟಗಳು ಮತ್ತು ಆಕಾಂಕ್ಷೆಗಳು ಲಕ್ಷಾಂತರ ಜನರಿಗೆ ಪ್ರೇರಣೆ ನೀಡುತ್ತದೆ. ಅಂತಹ ಮಹಿಳೆಯರ ಸಾಧನೆಯನ್ನು ಸಂಭ್ರಮಿಸೋಣ ಮತ್ತು ಅವರಿಂದ ಕಲಿಯೋಣ”ಎಂದಿದ್ದಾರೆ.
India has outstanding women achievers in all parts of the nation. These women have done great work in a wide range of sectors. Their struggles and aspirations motivate millions. Let us keep celebrating the achievements of such women and learning from them. #SheInspiresUs
— Narendra Modi (@narendramodi) March 8, 2020
ಪ್ರಧಾನಿ ನರೇಂದ್ರ ಮೋದಿಯ ಟ್ವಿಟರ್ ಖಾತೆಯ ಮೂಲಕ ಇಂದು 7 ಸಾಧಕಿಯರು ತಮ್ಮ ಜೀವನ ಪಯಣದ ಕುರಿತು ಟ್ವೀಟ್ ಮಾಡುತ್ತಾರೆ. ಈಗಾಗಲೇ ಫುಡ್ ಬ್ಯಾಂಕ್ ಇಂಡಿಯಾ ಸ್ಥಾಪಕಿ ಸ್ನೇಹ ಮೋಹನ್ ದಾಸ್ ಮತ್ತು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತೆ ಡಾ. ಮಾಳವಿಕ ಅಯ್ಯರ್ ಅವರು ತಮ್ಮ ಜೀವನ ಪಯಣದ ಕುರಿತು ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ.
ಕಳೆದ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರು ತಾನು ಈ ಭಾನುವಾರ ತನ್ನ ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಕೊಡುವುದಾಗಿ ಹೇಳಿದ್ದರು. ಇಡೀ ದೇಶಕ್ಕೆ ಐದು ದೊಡ್ಡ ಆಘಾತವನ್ನು ನೀಡಿತ್ತು. ಮರುದಿನ ಮತ್ತೊಂದು ಟ್ವೀಟ್ ಮೂಲಕ ಅವರು ಎಲ್ಲಾ ಕುತೂಹಲಗಳಿಗೆ ತೆರೆ ಎಳೆದು, ಮಹಿಳಾ ದಿನದಂದು ನಾನು ಮಹಿಳಾ ಸಾಧಕರಿಗೆ ನನ್ನ ಸಾಮಾಜಿಕ ಜಾಲತಾಣಗಳ ಕಥೆಯನ್ನು ಬಿಟ್ಟು ಕೊಡಲಿದ್ದೇನೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.