ನವದೆಹಲಿ: ಸುಪ್ರೀಂಕೋರ್ಟ್ ಬುಧವಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬಿಟ್ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ವಹಿವಾಟಿನ ಮೇಲೆ ವಿಧಿಸಿದ್ದ ನಿಷೇಧವನ್ನು ತೆರವುಗೊಳಿಸಿದೆ. ಸಮುದಾಯದ ಹಿತಾಸಕ್ತಿಯನ್ನು ನಿಷೇಧಿಸಲು ಆರ್ಬಿಐಗೆ ಅನುಮತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2018 ರ ಏಪ್ರಿಲ್ನಲ್ಲಿ ಭಾರತೀಯ ಬ್ಯಾಂಕುಗಳಲ್ಲಿ ಬಿಟ್ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ವಹಿವಾಟನ್ನು ನಿಷೇಧಿಸಿತು. ಹೂಡಿಕೆದಾರರು ಮತ್ತು ವ್ಯಾಪಾರಿಗಳು ತಮ್ಮ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಕ್ರಿಪ್ಟೋಕರೆನ್ಸಿಗಳನ್ನು ನೇರವಾಗಿ ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಿಲ್ಲ ಎಂದಿತ್ತು. ಇದರಿಂದ ಜೆಬ್ಪೇಯಂತಹ ಅತಿದೊಡ್ಡ ಬಿಟ್ಕಾಯಿನ್ ವಿನಿಮಯ ಭಾರತೀಯ ಬಳಕೆದಾರರಿಗಾಗಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸಬೇಕಾಯಿತು.
ಸುಪ್ರೀಂ ನಿರ್ಧಾರದಿಂದಾಗಿ ಡಿಜಿಟಲ್ ಕರೆನ್ಸಿಯನ್ನು ಖರೀದಿಸಲು ಅಥವಾ ಅದರ ಮಾರಾಟದಿಂದ ಬರುವ ಹಣವನ್ನು ಖಾತೆಗೆ ಜಮೆ ಮಾಡುವ ಸೌಲಭ್ಯವನ್ನು ಬ್ಯಾಂಕುಗಳು ಒದಗಿಸಬೇಕಾಗುತ್ತದೆ.
ಹಲವು ಸಂಸ್ಥೆಗಳು ಡಿಜಿಟಲ್ ಕರೆನ್ಸಿ ಸೇವೆಯನ್ನು ವಿಶ್ವದಲ್ಲಿ ಒದಗಿಸುತ್ತಿವೆ ಅದರಲ್ಲಿ ಬಿಟ್ಕಾಯಿನ್ ಭಾರಿ ಜನಪ್ರಿಯವಾಗಿದೆ. ಗೂಢಲಿಪಿ ತಂತ್ರಜ್ಞಾನ ಆಧರಿಸಿ ಡಿಜಿಟಲ್ ಕರೆನ್ಸಿ ವರ್ಗಾವಣೆಯನ್ನು ನಿಯಂತ್ರಿಸಲಾಗುತ್ತದೆ. ಇದೀಗ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಭಾರತದಲ್ಲಿ ಡಿಜಿಟಲ್ ಕರೆನ್ಸಿ ವ್ಯವಹಾರಗಳಿಗೆ ಅನುಮತಿ ಸಿಕ್ಕಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.