ನವದೆಹಲಿ: ಇಂದು ದೇಶದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ವಿಜ್ಞಾನಿಗಳ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ಟ್ವಿಟ್ ಮಾಡಿರುವ ಪ್ರಧಾನಿ ಮೋದಿ ಅವರು, ”ರಾಷ್ಟ್ರೀಯ ವಿಜ್ಞಾನ ದಿನ ನಮ್ಮ ವಿಜ್ಞಾನಿಗಳ ಪ್ರತಿಭೆ ಮತ್ತು ಸ್ಥಿರತೆಗೆ ನಮಸ್ಕರಿಸುವ ಸಂದರ್ಭವಾಗಿದೆ. ಅವರ ನವೀನ ಉತ್ಸಾಹ ಮತ್ತು ಪ್ರವರ್ತಕ ಸಂಶೋಧನೆಯು ಭಾರತ ಮತ್ತು ಜಗತ್ತಿಗೆ ಬಹಳಷ್ಟು ಸಹಾಯ ಮಾಡಿದೆ. ಭಾರತೀಯ ವಿಜ್ಞಾನವು ಪ್ರವರ್ಧಮಾನಕ್ಕೆ ಬರಲಿ ಮತ್ತು ನಮ್ಮ ಯುವ ಮನಸ್ಸುಗಳು ವಿಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ಕುತೂಹಲವನ್ನು ಬೆಳೆಸಿಕೊಳ್ಳಲಿ” ಎಂದಿದ್ದಾರೆ.
”ವಿಜ್ಞಾನಿಗಳ ನವೀನ ಉತ್ಸಾಹ ಮತ್ತು ಸಂಶೋಧನೆಯು ಭಾರತಕ್ಕೆ ಸಹಾಯ ಮಾಡಿದೆ. ಸಂಶೋಧನೆ ಮತ್ತು ನಾವೀನ್ಯತೆಗಾಗಿ ಇನ್ನೂ ಉತ್ತಮ ವಾತಾವರಣವನ್ನು ಸೃಷ್ಟಿಸಲು ಭಾರತ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ” ಎಂದಿದ್ದಾರೆ.
ಜನವರಿಯಲ್ಲಿ ಕರ್ನಾಟಕದಲ್ಲಿ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್ನ 107 ನೇ ಅಧಿವೇಶನ ಉದ್ಘಾಟನೆಯ ಸಂದರ್ಭದಲ್ಲಿ ನೀಡಿದ ಭಾಷಣದ ವಿಡಿಯೋವನ್ನು ಪ್ರಧಾನಿ ಮೋದಿ ಅವರು ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ.
‘ರಾಮನ್ ಎಫೆಕ್ಟ್’ ಆವಿಷ್ಕಾರದ ನೆನಪಿಗಾಗಿ ಪ್ರತಿ ವರ್ಷ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರ ಫೆಬ್ರವರಿ 28 ಅನ್ನು 1986 ರಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಎಂದು ಗೊತ್ತುಪಡಿಸಿತು. ಈ ದಿನ ಸರ್ ಸಿ. ವಿ. ರಾಮನ್ ಅವರು ‘ರಾಮನ್ ಎಫೆಕ್ಟ್’ ಆವಿಷ್ಕಾರವನ್ನು ಘೋಷಿಸಿದರು, ಇದಕ್ಕಾಗಿ ಅವರಿಗೆ 1930 ರಲ್ಲಿ ನೊಬೆಲ್ ಪ್ರಶಸ್ತಿ ದೊರೆತಿತ್ತು.
National Science Day is an occasion to salute the talent and tenacity of our scientists. Their innovative zeal and pioneering research has helped India and the world. May Indian science continue to thrive and may our young minds develop even greater curiosity towards science.
— Narendra Modi (@narendramodi) February 28, 2020
On our part, the Government of India is making numerous efforts to create an even better environment for research and innovation in India. I spoke about aspects relating to science during the Indian Science Congress earlier this year. Sharing it again…https://t.co/DjSl2SrwXB
— Narendra Modi (@narendramodi) February 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.