ಇತ್ತೀಚೆಗೆ, ರೈಲ್ವೆ ಸಚಿವಾಲಯವು ಉತ್ತರಾಖಂಡದ ರೈಲ್ವೆ ನಿಲ್ದಾಣಗಳಲ್ಲಿನ ಎಲ್ಲಾ ಸೈನ್ಬೋರ್ಡ್ಗಳನ್ನು ಉರ್ದು ಭಾಷೆಯಿಂದ ಸಂಸ್ಕೃತ ಭಾಷೆಗೆ ಬದಲಾಯಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿತು. ಸಂಸ್ಕೃತವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ ಇದನ್ನು ನೋಡಲಾಯಿತು.
ಆದರೆ ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಕೋಮುವಾದೀಕರಣ ಎಂಬಂತೆ ನೋಡಲಾಗುತ್ತಿದೆ. ಈ ವಿಷಯವನ್ನು ರಾಜಕೀಯ ಮಾಡಲಾಗುತ್ತದೆ. ಪ್ರಾಚೀನ ಭಾರತೀಯ ಭಾಷೆಯನ್ನು ಪುನರುಜ್ಜೀವನಗೊಳಿಸುವ ಕಾರ್ಯದ ಬಗ್ಗೆ ಕೆಲವರು ವಿಚಿತ್ರ ಪ್ರಶ್ನೆಗಳನ್ನು ಎತ್ತಲು ಪ್ರಾರಂಭಿಸುತ್ತಾರೆ. ಕೋಮುವಾದೀಕರಣ ಮತ್ತು ಕೇಸರೀಕರಣ ಎಂಬಿತ್ಯಾದಿ ಟ್ಯಾಗ್ ಲೈನ್ ನೀಡುತ್ತಾರೆ. ಇಂತಹ ಆರೋಪಗಳು ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ.
ಈ ವಿಷಯದಲ್ಲಿ ಭಾರತ ಇಸ್ರೇಲ್ ಅನ್ನು ನೋಡಿ ಕಲಿಯಬೇಕಾದುದು ಬಹಳಷ್ಟಿದೆ. ಇಸ್ರೇಲ್ ತನ್ನ ಭಾಷೆ ಹಿಬ್ರೂವನ್ನು ಪುನರುಜ್ಜೀವನಗೊಂಡ ಬಗೆ ನಿಜಕ್ಕೂ ಮಾದರಿಯಾಗಿದೆ.
ಸಂಸ್ಕೃತದಂತೆಯೇ, ಹಿಬ್ರೂ ಕೂಡ ಸಾಮಾನ್ಯ ಬಳಕೆಯಿಂದ ಹೊರಗುಳಿದಿತ್ತು ಮತ್ತು ಕೇವಲ ಪ್ರಾರ್ಥನಾ ಭಾಷೆಯಾಗಿ ಮಾರ್ಪಟ್ಟಿತು. ಆದರೀಗ ಸುಮಾರು 2000 ವರ್ಷಗಳ ನಂತರ ಆ ಭಾಷೆ ಪುನರುಜ್ಜೀವನಗೊಂಡಿದೆ. ಕ್ರಿ.ಶ 400ರ ವೇಳೆಗೆಯೇ ಮಾತನಾಡುವ ಭಾಷೆಯಾಗಿ ಪ್ರಾಯೋಗಿಕವಾಗಿ ಹಿಬ್ರೂ ಸತ್ತುಹೋದರೂ, ಇದು ವಿಶ್ವದಾದ್ಯಂತದ ಯಹೂದಿಗಳಿಗೆ ಪ್ರಾರ್ಥನಾ ಭಾಷೆಯಾಗಿ ಸಂರಕ್ಷಿಸಲ್ಪಟ್ಟಿದೆ.
ಕ್ರಿ.ಪೂ 587ರಲ್ಲಿ ಬ್ಯಾಬಿಲೋನಿಯನ್ ದಾಳಿ ನಡೆದು ಜೆರುಸಲೇಮಿನ ಪತನವಾಗುವವರೆಗೂ ಯಹೂದಿಗಳು ಹಿಬ್ರೂ ಭಾಷೆಯಲ್ಲಿ ಬರೆಯುತ್ತಿದ್ದರು ಮತ್ತು ಮಾತನಾಡುತ್ತಿದ್ದರು. ನಂತರ ಈ ಭಾಷೆಯ ಪತನ ಪ್ರಾರಂಭಗೊಂಡಿತು.
19 ಮತ್ತು 20 ನೇ ಶತಮಾನಗಳಲ್ಲಿ ಯುರೋಪಿನಲ್ಲಿ ಯಹೂದಿ ವಿರೋಧಿ ಮನೋಭಾವದ ಹೆಚ್ಚಳದಿಂದಾಗಿ ಉದಯಿಸಲ್ಪಟ್ಟ ಝಿನೋಯಿಸಂನಿಂದ ಹಿಬ್ರೂ ಪ್ರಯೋಜನವನ್ನು ಪಡೆಯಿತು. ಪ್ರಾಚೀನ ಭಾಷೆಯ ಪುನರುಜ್ಜೀವನದ ಯಶೋಗಾಥೆಯು 1922 ರಲ್ಲಿ ಪ್ಯಾಲೆಸ್ಟೈನ್ ನ ಯಹೂದಿಗಳ ಅಧಿಕೃತ ಭಾಷೆಯಾಗಿ ಹಿಬ್ರೂವನ್ನು ಗುರುತಿಸಿ ಬ್ರಿಟಿಷರು ಆದೇಶ ಹೊರಡಿಸಲು ಪ್ರೇರಣೆಯಾಯಿತು.
ಆಧುನಿಕ ಹಿಬ್ರೂ ಭಾಷೆ ಬೈಬಲ್ ಆವೃತ್ತಿಯಲ್ಲಿರುವ ಹಿಬ್ರೂವಿಗಿಂತ ಭಿನ್ನವಾಗಿದೆ, ಆದರೆ ಇಂದು 8 ಮಿಲಿಯನ್ ಹಿಬ್ರೂ ಭಾಷಿಕರು ಹಳೆಯ ಒಡಂಬಡಿಕೆಯಲ್ಲಿ ಮತ್ತು ಅದರ ಸಂಪರ್ಕಿತ ಪಠ್ಯಗಳಲ್ಲಿ ಸಂಪೂರ್ಣವಾಗಿ ಏನು ಬರೆಯಲ್ಪಟ್ಟಿದೆ ಎಂಬುದನ್ನು ತಿಳದುಕೊಳ್ಳಲು ಶಕ್ತರು.
ಹಿಬ್ರೂ ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯು ಯಹೂದಿ ವಿರೋಧಿ ಮನಸ್ಥಿತಿಯಿಂದ, ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಆಗಲೇ ಅಸ್ತಿತ್ವದಲ್ಲಿದ್ದ ಯಹೂದಿಗಳ ಜೊತೆಗೆ ಭಾಷಾ ವೈವಿಧ್ಯತೆ ಹೊಂದಿದ ಯಹೂದಿಗಳ ವಸಾಹತು ಸ್ಥಾಪನೆಯಿಂದ ಮತ್ತು ಯಹೂದಿ ಹಸ್ಕಲಾ (ಜ್ಞಾನೋದಯ)ದಿಂದ ಸಾಂಸ್ಥೀಕರಣಗೊಂಡಿದೆ ಎಂಬುದು ಇಲ್ಲಿ ಉಲ್ಲೇಖನೀಯ.
ಪ್ಯಾಲೆಸ್ಟೈನ್ ಪ್ರದೇಶದ ಯಹೂದಿಗಳು ಅರೇಬಿಕ್, ಲ್ಯಾಡಿನೋ, ಯಿಡ್ಡಿಷ್ ಮತ್ತು ಫ್ರೆಂಚ್ ಮುಂತಾದ ವಿವಿಧ ಭಾಷೆಗಳನ್ನು ಮಾತನಾಡುತ್ತಿದ್ದರು. ತಮ್ಮ ನಡುವೆ ಸಂವಹನ ನಡೆಸಲು, ಭಾಷಾ ವೈವಿಧ್ಯಮಯ ಯಹೂದಿಗಳು ಮಧ್ಯಯುಗದಿಂದಲೂ ಹಿಬ್ರೂ ಭಾಷೆಯನ್ನು ಬಳಸುತ್ತಿದ್ದರು.
ಪ್ರಪಂಚದ ಇತರ ಭಾಗಗಳಿಂದ ಬಂದ ಯಹೂದಿ ನಿರಾಶ್ರಿತರ ವಸಾಹತಿನೊಂದಿಗೆ, ಹೊಸದಾಗಿ ಆಗಮಿಸಿದ ಯಹೂದಿಗಳು ಮತ್ತು ಪ್ಯಾಲೆಸ್ಟೈನ್ ಪ್ರದೇಶದ ಸ್ಥಳೀಯ ಯಹೂದಿಗಳು ಮಾತನಾಡುವ ಭಾಷೆಯಾಗಿ ಹಿಬ್ರೂವನ್ನು ಬಳಸಿದರು.
ಯಹೂದಿ ರಾಷ್ಟ್ರೀಯತೆಯ ಉದಯ ಮತ್ತು ಭಾಷಾ ವೈವಿಧ್ಯತೆಯ ಯಹೂದಿ ನಿರಾಶ್ರಿತರಿಗೆ ಹಲವಾರು ಅಲಿಯಾಗಳ ಅಡಿಯಲ್ಲಿ ವಸಾಹತು ನೀಡಿದ್ದು ಹಿಬ್ರೂ ಪುನರುಜ್ಜೀವನಕ್ಕೆ ಕಾರಣವಾಯಿತು.ಯಹೂದಿ ಹತ್ಯಾಕಾಂಡ ಮತ್ತು ಅಲಿಯಾಹ್ ಬೆಟ್ನ ಭೀಕರತೆಯು ಯಹೂದಿ ರಾಷ್ಟ್ರೀಯತೆಗೆ ಸಹಕಾರಿಯಾಯಿತು ಮತ್ತು ಹಿಬ್ರೂ ಇಸ್ರೇಲ್ನ ರಾಷ್ಟ್ರೀಯ ಭಾಷೆಯಾಗಿ ಮತ್ತು ಯಹೂದಿ ರಾಷ್ಟ್ರದ ಭಾಷೆಯಾಗಿ ಹೊರಹೊಮ್ಮಿದಂತೆ ಅದನ್ನು ಮತ್ತಷ್ಟು ಪುನರುಜ್ಜೀವನಗೊಳಿಸುವ ಅವಶ್ಯಕತೆಯೂ ಇತ್ತು..
ಯಹೂದಿ ಹತ್ಯಾಕಾಂಡದ ನಂತರದ ಅವಧಿಯಲ್ಲಿ ಆ ದೇಶದಲ್ಲಿ ಇನ್ನೂ 6,88,000 ಯಹೂದಿಗಳ ಒಳಹರಿವು ಕಂಡುಬಂದಿದೆ, ಇದು ಯಹೂದಿ ಜನಸಂಖ್ಯೆಯನ್ನು ದ್ವಿಗುಣಗೊಳಿಸಿತು. ನಿರಾಶ್ರಿತರ ಈ ಹೊಸ ಅಲೆಗೆ ಪ್ರಾಚೀನ ಭಾಷೆಯನ್ನು ಕಲಿಸಬೇಕಾಗಿತ್ತು ಮತ್ತು ಇದು ಇಸ್ರೇಲ್ನಲ್ಲಿ ಹಿಬ್ರೂ ಪುನರುಜ್ಜೀವನದ ಪ್ರಕ್ರಿಯೆಯನ್ನು ಮತ್ತಷ್ಟು ಸಾಂಸ್ಥೀಕರಣಗೊಳಿಸಲು ಉಲ್ಪಾನ್ (ಕ್ರಿಯಾಶೀಲ ಹಿಬ್ರೂ-ಕಲಿಕಾ ಸಂಸ್ಥೆ) ಸ್ಥಾಪನೆಗೆ ಕಾರಣವಾಯಿತು.
ಯಹೂದಿ ರಾಷ್ಟ್ರೀಯತೆಯ ಬಲವಾದ ಪ್ರಜ್ಞೆಯು ಖಂಡಿತವಾಗಿಯೂ ಹಿಬ್ರೂವನ್ನು ಮತ್ತೆ ಜೀವಂತವಾಗಿ ಬೆಳೆಸುವಲ್ಲಿ ದೊಡ್ಡ ಮಟ್ಟದ ಪಾತ್ರವಹಿಸಿದೆ, ಆದರೆ ವೈಯಕ್ತಿಕ ಮಟ್ಟದಲ್ಲಿ ಜನರ ಸಕ್ರಿಯ ಪ್ರಯತ್ನ ಕೂಡ ಇದಕ್ಕೆ ಕಾರಣವಾಯಿತು. ಎಲಿಯೆಜರ್ ಬೆನ್ ಯೆಹುಡಾ ಅವರನ್ನು ಹಿಬ್ರೂ ಪುನರುಜ್ಜೀವನದ ಪಿತಾಮಹ ಎಂದು ವರ್ಣಿಸಬಹುದು.
1881 ರಲ್ಲಿ, ಬೆನ್ ಯೆಹುಡಾ ಹಿಬ್ರೂ ಪುನರುಜ್ಜೀವನದ ಕಲ್ಪನೆಯನ್ನು ಮುಂದಿಟ್ಟರು. ಅವರು ಹೊಚ್ಚ ಹೊಸ ಮತ್ತು ಪ್ರಾಚೀನ ಹಿಬ್ರೂ ಪದಗಳನ್ನು ಒಳಗೊಂಡಿರುವ ಆಧುನಿಕ ಹಿಬ್ರೂ ಶಬ್ದಕೋಶವನ್ನು ಅಭಿವೃದ್ಧಿಪಡಿಸಿದರು. ತನ್ನ ಪ್ರಯತ್ನಗಳನ್ನು ನಕಲಿಸುವಂತೆ ಮತ್ತು ದೈನಂದಿನ ವ್ಯವಹಾರಗಳಲ್ಲಿ ಭಾಷೆಯನ್ನು ಸಂಯೋಜಿಸುವಂತೆ ಅವರು ತನ್ನ ಸ್ನೇಹಿತರನ್ನು ಮನವೊಲಿಸಲು ಸಮರ್ಥರಾದರು.
ಹಿಬ್ರೂ ಪುನರುಜ್ಜೀವನದ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ಅವರು ಯಹೂದಿ ಶಿಕ್ಷಕರನ್ನು ಮಂಡಳಿಯಲ್ಲಿ ಸೇರಿಸುವಲ್ಲಿಯೂ ಯಶಸ್ವಿಯಾದರು. ಬೆನ್ ಯೆಹುಡಾ ಅವರ ಯೋಜನೆಯಲ್ಲಿ ಶಿಕ್ಷಕರು ಹೆಚ್ಚಿನ ಪ್ರಯೋಜನವನ್ನು ಕಂಡರು, ಏಕೆಂದರೆ ಆ ಸಮಯದಲ್ಲಿ ವೈವಿಧ್ಯಮಯ ಮತ್ತು ಬಹುಸಾಂಸ್ಕೃತಿಕ ತರಗತಿ ಕೋಣೆಗಳಲ್ಲಿ ಏಕೀಕೃತ ಪಾತ್ರವನ್ನು ವಹಿಸುವ ಪ್ರಾಯೋಗಿಕ ಪ್ರಯೋಜನಗಳನ್ನು ಇದು ಹೊಂದಿತ್ತು.
ಅವರು ಪತ್ನಿ ಡೆಬೊರಾ ಜೊನಸ್ ಜೊತೆಗೆ, ಬೆನ್ ಯೆಹುಡಾ ಮೊದಲ ಆಧುನಿಕ ಹಿಬ್ರೂ ಮಾತನಾಡುವ ಕುಟುಂಬವನ್ನು ರೂಪುಗೊಳಿಸಿದರು. ತಮ್ಮ ಮಗು ಬೆನ್-ಝಿಯಾನ್ ಬೆನ್-ಯೆಹುಡಾವನ್ನು ಆಧುನಿಕ ಹಿಬ್ರೂ ಮಾತನಾಡುವ ಮಗುವಾಗಿ ಬೆಳೆಸಿದರು. ಇದು ಬೆನ್ ಯೆಹುಡಾ ಅವರ ಸಾಮಾನ್ಯ ಪ್ರಯತ್ನಗಳಾಗಿತ್ತು, ಆದರೆ ಅಂತಿಮವಾಗಿ ಬೃಹತ್ ಪುನರುಜ್ಜೀವನದ ಆಕಾರವನ್ನು ಪಡೆದುಕೊಂಡಿತು, ಇದು ಈಗಿನ ಹಿಬ್ರೂ ಭಾಷೆಗೆ ವಿಶಿಷ್ಟವಾಗಿದೆ.
ಆರು ದಶಕಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ಹಿಬ್ರೂ ಪುನರುಜ್ಜೀವನದ ಪ್ರಕ್ರಿಯೆಯು ಬಹುಮಟ್ಟಿಗೆ ಪರಾಕಾಷ್ಠೆಗೆ ತಲುಪಿತು ಮತ್ತು ಭಾಷೆಯನ್ನು ಇಸ್ರೇಲಿನ ರಾಷ್ಟ್ರೀಯ ಭಾಷೆಯಾಗಿ ಅಳವಡಿಸಿಕೊಳ್ಳಲು ಕಾರಣವಾಯಿತು.
ಇಸ್ರೇಲಿನಲ್ಲಿ ಹಿಬ್ರೂ ಭಾಷೆಯ ವೃದ್ಧಿ ಮತ್ತು ಅದರ ವಾಸ್ತವಿಕ ಜೀವನಕ್ಕೆ ಮರಳುವಿಕೆಯ ಪ್ರಕ್ರಿಯೆಯು ಭಾರತದಲ್ಲಿ ಸಂಸ್ಕೃತ ಪುನರುಜ್ಜೀವನಕ್ಕೆ ಒಂದು ಅಮೂಲ್ಯವಾದ ಪಾಠವಾಗಿದೆ. ಕ್ರಿ.ಪೂ 587 ರ ಹೊತ್ತಿಗೆ ಕ್ಷೀಣಿಸಲು ಪ್ರಾರಂಭಿಸಿದ ಮತ್ತು ಕ್ರಿ.ಶ 400 ರಲ್ಲಿ ಸಾಮಾನ್ಯ ಬಳಕೆಯಿಂದ ಹೊರಗುಳಿದಿದ್ದ ಹಿಬ್ರೂವಿನ ಬೆಳವಣಿಗೆಯನ್ನು ನೋಡಿದರೆ, ಸಂಸ್ಕೃತವನ್ನು ಇದೇ ರೀತಿಯಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವಿದೆ ಎಂಬ ಭರವಸೆ ಮೂಡುತ್ತದೆ.
ಹಿಬ್ರೂ ಪುನರುಜ್ಜೀವನದ ಹಿಂದಿನ ದೊಡ್ಡ ಕಾರಣವೆಂದರೆ ಅದು ರಾಷ್ಟ್ರೀಯತೆಯ ಬಲವಾದ ಪ್ರಜ್ಞೆ. ಸಂಸ್ಕೃತವನ್ನು ತನ್ನ ಹಳೆಯ ವೈಭವಕ್ಕೆ ಪುನಃಸ್ಥಾಪಿಸಬೇಕಾದರೆ ಭಾರತದಲ್ಲಿಯೂ ರಾಷ್ಟ್ರೀಯತೆಯ ಬಲವಾದ ಪ್ರಜ್ಞೆ ಮೂಡಬೇಕು. ಸಹಜವಾಗಿ, ಹಿಬ್ರೂ ಪುನರುಜ್ಜೀವನಕ್ಕೆ ಕಾರಣವಾದ ಯಹೂದಿ ವಿರೋಧಿ ಮನಸ್ಥಿತಿಯು ಭಾರತದಲ್ಲಿ ಹಿಂದೂ ವಿರೋಧಿ ರೂಪದಲ್ಲಿದೆ. ಆದರೆ ಭಾರತದಲ್ಲಿ, ಸಂಸ್ಕೃತವನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಾವು ಪ್ರಾಚೀನ ಭಾಷೆಯ ಬಗೆಗಿನ ನಮ್ಮ ಗತಕಾಲ ಬೆಸುಗೆಯನ್ನು ಗಟ್ಟಿಗೊಳಿಸಬೇಕಾಗಿದೆ.
ಸಂಸ್ಕೃತವು ಜನಪ್ರಿಯ ಬಳಕೆಯಿಂದ ಹೊರಗುಳಿದಿದೆ, ಆದರೆ ಇದು ಜೀವಂತ ಭಾಷೆಯಾಗಿ ಉಳಿದಿದೆ. ಇದು ಇನ್ನೂ ಸತ್ತಿಲ್ಲ ಮತ್ತು ಹಿಬ್ರೂ ಒಂದು ಕಾಲದಲ್ಲಿ ಇದ್ದಂತೆ ಇದು ಸಂಪೂರ್ಣವಾಗಿ ಪ್ರಾರ್ಥನಾ ಭಾಷೆಯಾಗಿ ಮಾರ್ಪಟ್ಟಿಲ್ಲ. ಇದು ಭಾರತದಲ್ಲಿ ಕಡಿಮೆ ಮಾತನಾಡುವ ಭಾಷೆಯಾಗಿರಬಹುದು, ಆದರೆ ಇದು ಖಂಡಿತವಾಗಿಯೂ ನಾಶವಾಗಿಲ್ಲ, ಆದರೆ ಹಿನ್ನಲೆಗೆ ಸರಿದಿಲ್ಲ. 2001 ಮತ್ತು 2011 ರ ಜನಗಣತಿಯ ನಡುವೆ ಈ ಭಾಷೆಯು 10,000 ಹೊಸ ಭಾಷಿಕರನ್ನು ಸೇರಿಸಿಕೊಂಡಿದೆ, ಇದು ಭಾರತದಂತಹ ದೊಡ್ಡ ಜನಸಂಖ್ಯೆ ಹೊಂದಿರುವ ದೇಶಕ್ಕೆ ದೊಡ್ಡ ಸಾಧನೆಯಾಗಿದೆ. ಅದೇನೇ ಇದ್ದರೂ, ಹಿಬ್ರೂವಿನಂತೆ ಸಂಸ್ಕೃತವನ್ನು ನಮಗೆ ಪುನರ್ನಿರ್ಮಾಣ ಮಾಡುವ ಅಗತ್ಯವಿಲ್ಲ.
ಹಿಬ್ರೂ ಪುನರುತ್ಥಾನದಿಂದ ಭಾರತವು ಕಲಿಯಬಹುದಾದ ಸಂಗತಿಯೆಂದರೆ, ಈ ಪ್ರಯತ್ನವನ್ನು ಸಮರ್ಥವಾಗಿ ಸಾಂಸ್ಥೀಕರಣಗೊಳಿಸಬೇಕು ಎಂಬುದು. ಎಲ್ಲಾ ಭಾಷೆಗಳ ತಾಯಿ ಮತ್ತು ಭಾರತೀಯ ಭಾಷೆಗಳೊಂದಿಗೆ ಬಹಳ ನಿಕಟ ಸಂಬಂಧ ಹೊಂದಿರುವ ಸಂಸ್ಕೃತವು ಭಾಷಾಶಾಸ್ತ್ರೀಯವಾಗಿ ಅನೇಕ ಸಂಸ್ಕೃತಿಗಳಿಗೆ ಒಂದುಗೂಡಿಸುವ ಅಂಶವಾಗಿದೆ. ದೇಶದ ಉದ್ದ ಮತ್ತು ಅಗಲ ಸೇರಿದಂತೆ. ಸುಧಾರಣೆಗಳು ಮತ್ತು ಪ್ರಗತಿಶೀಲತೆಯಿಂದ ಕೂಡಿದ ಹಿಂದೂ ರಾಷ್ಟ್ರೀಯತೆಯ ಉದಯವು ಈ ಪುನರುಜ್ಜೀವನಕ್ಕೆ ಅನುಕೂಲವಾಗಬಲ್ಲದು.
ಸಂಸ್ಕೃತವು ಜೀವಂತವಾಗಿದೆ, ಆದರೂ ಇದು ಇನ್ನಷ್ಟು ಹೆಚ್ಚು ಜನಪ್ರಿಯವಾಗಲು ಅರ್ಹವಾಗಿದೆ. ಈ ಸಮಯದಲ್ಲಿ ಭಾಷೆಯನ್ನು ಹಳೆಯ ವೈಭವಕ್ಕೆ ಮರುಸ್ಥಾಪಿಸುವ ಬಗ್ಗೆ ನಾವು ನಿರಾಶಾವಾದಿಗಳಾಗಿರಬಾರದು, ಹಿಬ್ರೂ ನವೋದಯವು ಸಂಸ್ಕೃತ ಪುನರುಜ್ಜೀವನಕ್ಕೆ ಬಲವಾದ ಪ್ರೇರಣೆಯಾಗಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.