ಮನುಷ್ಯ ಜೀವನದ ಬಹುಮುಖ್ಯವಾದ ಭಾಗ ಸ್ನೇಹ. ನಮ್ಮ ಎಲ್ಲಾ ಭಾವನೆಗಳನ್ನು ಎಲ್ಲರೊಂದಿಗೂ ಹೇಳುವುದು ಅಸಾಧ್ಯ. ಹಾಗೆಯೇ ನಾವು ಹೇಳುವುದಕ್ಕೆ ಹೊರಟರೆ ಕೆಳುವುದಕ್ಕೆ ಸಿಗುವ ಕಿವಿಗಳ ಸಂಖ್ಯೆಯೂ ಕಡಿಮೆ. ನಾವು ಹೇಳಿದ್ದೆಲ್ಲವನ್ನೂ ಕೇಳುವ, ನಮ್ಮ ಭಾವನೆಗಳೆಲ್ಲಕ್ಕೂ ಕಿವಿಯಾಗುವ, ನಮ್ಮ ಕಷ್ಟ ಸುಖಗಳೆರಡರಲ್ಲಿಯೂ ಸಾಥ್ ನೀಡುವ ಗೆಳೆಯರು ಹೆಚ್ಚಿನವರ ಜೀವನದಲ್ಲಿ ಇದ್ದೇ ಇರುತ್ತಾರೆ. ಕೆಲವೊಮ್ಮೆ ಸಂಬಂಧಗಳೇ ಕೈ ಬಿಟ್ಟು ನಡೆದ ಹೊತ್ತಿನಲ್ಲಿ, ನಾನಿದ್ದೇನೆ, ಡೋಂಟ್ ವರೀ ಎಂದು ಹೇಳುವ ಮೂಲಕ ನಮ್ಮ ಜೊತೆ ಹೆಜ್ಜೆ ಹಾಕುವ, ನಮ್ಮ ನೋವಿನಲ್ಲಿ ಪಾಲು ಪಡೆಯುವ, ನಮ್ಮ ನಗುವಿಗಾಗಿ ಶ್ರಮಿಸುವ ಫ್ರೆಂಡ್ಶಿಪ್ ಅದೆಷ್ಟು ಗ್ರೇಟ್ ಅಲ್ವಾ..
ಹೀಗೆ ಗೆಳೆತನ ಸೌಂದರ್ಯವನ್ನು, ಅದರ ವೈಶಾಲ್ಯತೆಯನ್ನು ಸಮಾಜಕ್ಕೆ ಸಾರುವ ಒಂದು ಕಥೆ ಇಲ್ಲಿದೆ. ಇದು ಕಟ್ಟುಕತೆಯಲ್ಲ. ಪುಟಾಣಿ ಮಕ್ಕಳಾದರೂ ತಮ್ಮ ಪೋಲಿಯೋ ಪೀಡಿತ ಗೆಳೆಯನ ಸೇವೆಯಲ್ಲಿ ತೊಡಗಿಕೊಂಡಿರುವ ಈ ಕಥೆ ನಿಜಕ್ಕೂ ಆನಂದಭಾಷ್ಪ ತರಿಸುತ್ತದೆ. ಮುದ್ದು ಮಕ್ಕಳ ನಿಸ್ವಾರ್ಥ ಸ್ನೇಹ ತಮ್ಮ ಗೆಳೆಯನ ಶಿಕ್ಷಣಕ್ಕೆ ಸಹಾಯ ಮಾಡುತ್ತಿದೆ ಎಂದರೆ ನೀವು ನಂಬಲೇ ಬೇಕು. ಹೇಗೆ ಎಂದಿರಾ. ಅದಕ್ಕೆ ಉತ್ತರ ಇಲ್ಲಿದೆ.
ಬೆಂಗಳೂರಿನ ಈ ಹುಡುಗನ ಹೆಸರು ಲಕ್ಷೀಶ ನಾಯಕ್. ಪೋಲಿಯೋ ಪೀಡಿತನಾಗಿರುವುದರಿಂದ ನಡೆಯುವುದಕ್ಕೆ ಅಸಾಧ್ಯವಾದ ಸ್ಥಿತಿ. ನಗರದ ಈಸ್ಟ್ ವೆಸ್ಟ್ ಪಬ್ಲಿಕ್ ಸ್ಕೂಲ್ನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನಡೆದಾಡುವುದಕ್ಕೂ ಕಷ್ಟ ಪಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವ ಹುಡುಗನಿಗೆ ಕಾಲುಗಳಾಗಿ ಶಾಲೆ ಸೇರುವುದಕ್ಕೆ ಸಹಕರಿಸುತ್ತಿರುವುದು ಅವನ ಗೆಳೆಯರು. ನರ್ಸರಿ ಇಂದ ಹಿಡಿದು ಇಲ್ಲಿಯ ವರೆಗೂ ಪ್ರತಿನಿತ್ಯ ಆತನನ್ನು ಶಾಲೆಗೆ ಕರೆ ತರುವ ಮತ್ತು ಮನೆಗೆ ಬಿಡುವ ದೊಡ್ಡ ಜವಬ್ದಾರಿಯನ್ನು ಈತನ ಪುಟಾಣಿ ಗೆಳೆಯರು ಮಾಡುತ್ತಿದ್ದಾರೆ. ವೀಲ್ಚೇರ್, ತೋಳಿನ ಸಹಾಯದಿಂದ ಎತ್ತಿಕೊಂಡು ಬರುವ ಈ ಮಕ್ಕಳು ಆ ಮೂಲಕ ತಮ್ಮ ಸ್ನೇಹಿತನಿಗೆ ತನ್ನ ಉಜ್ವಲ ಭವಿಷ್ಯ ರೂಪೀಸಿಕೊಳ್ಳುವಲ್ಲಿ ಕೈಜೋಡಿಸಿದ್ದಾರೆ. ಅಲ್ಲದೆ ಶಾಲಾ ಆವರಣದಲ್ಲಿ ವೀಲ್ ಚೇರ್ ಸಹಾಯದಿಂದ ಚಲಿಸುವುದಕ್ಕೂ ಸಹಕಾರವನ್ನು ನೀಡುತ್ತಿದ್ದಾರೆ,
ಇವನ ಗೆಳೆಯ ಸಿದ್ಧಾರ್ಥ ಹೇಳುವಂತೆ, ನಾವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಲಕ್ಷೀಶನೂ ಸೇರಿಕೊಳ್ಳುತ್ತಾನೆ. ಅವನನ್ನು ಒಳಗೊಂಡೇ ನಾವು ಎಲ್ಲಾ ಕೆಲಸಗಳನ್ನು ನಿರ್ವಹಿಸುವುದು. ಆ ಮೂಲಕ ಅವನಲ್ಲಿ ತಾನು ಅಂಗವಿಕಲ ಎನ್ನುವ ಭಾವನೆ ಬರದಂತೆ ನೋಡಿಕೊಳ್ಳುತ್ತಿದ್ದೇವೆ. ಆದರೆ ಈ ವರ್ಷ ಮುಗಿದ ಮೇಲೆ ನಮ್ಮ ಶಿಕ್ಷಣದ ದಾರಿಗಳು ಬೇರೆ ಬೇರೆಯಾಗಲಿವೆ. ಆ ಸಂದರ್ಭದಲ್ಲಿ ಅವನ ಬಗ್ಗೆ ಕಾಳಜಿ ತೆಗೆದುಕೊಳ್ಳುವವರಾರು ಎಂಬ ಚಿಂತೆ ನಮ್ಮಲ್ಲಿದೆ ಎಂಬುದಾಗಿ ತಿಳಿಸುತ್ತಾನೆ. ಅಲ್ಲದೆ ಗೆಳೆಯ ಮಯೂರ್ ಪ್ರಕಾರ ಲಕ್ಷೀಶ ಆತನಿಗೆ ಶೈಕ್ಷಣಿಕ ಅದ್ಯಯನಕ್ಕೆ ಹೆಚ್ಚು ಸಹಾಯ ಮಾಡುವ ವ್ಯಕ್ತಿ. ಈ ವರ್ಷ ಕಳೆದ ಮೇಲೆ ತಾನು ಖಂಡಿತವಗಿಯೂ ತನ್ನ ಪ್ರಾಣ ಸ್ನೇಹಿತನ್ನು ಮಿಸ್ ಮಡಿಕೊಳ್ಳುತ್ತೇನೆ ಎಂಬುದಾಗಿ ನುಡಿಯುತ್ತಾನೆ.
ಬದುಕು ಅಂದ ಮೇಲೆ ಜೊತೆಗಿರಬೇಕು ಎನಿಸಿದವರೆಲ್ಲಾ ಸದಾ ಕಾಲ ಜೊತೆಗಿರುವುದು ಸಾಧ್ಯವಿಲ್ಲ. ಎಲ್ಲರ ಬದುಕಿನ ದಾರಿಗಳೂ ಬೇರೆ ಬೇರೆ. ಎಲ್ಲಾ ಸಮಯದಲ್ಲಿಯೂ ನಮ್ಮ ನೆರಳೇ ನಮ್ಮ ಜೊತೆಯಲ್ಲಿರುವುದು ಸಾಧ್ಯವಿರದೇ ಇರುವಾಗ ಅವರಿವರು ಬರುತ್ತಾರೆ ಎಂಬ ನಂಬಿಕೆ ಇಟ್ಟುಕೊಳ್ಳುವುದೂ ತಪ್ಪು. ಅದೇನೇ ಇದ್ದರೂ ಈ ಪುಟಾಣಿ ಸ್ನೇಹಿತರು ತಮ್ಮ ಸ್ನೇಹಕ್ಕೆ ಉಸಿರು ನೀಡಿದ, ಅದನ್ನು ಹೆಮ್ಮರವಾಗಿ ಬೆಳೆಸಿದ ಪರಿಯಂತೂ ನಿಜಕ್ಕೂ ಗ್ರೇಟ್. ಈ ನಡೆ ಎಲ್ಲರಿಗೂ ಮಾದರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.