ನವದೆಹಲಿ: 26/11 ಮುಂಬೈ ಭಯೋತ್ಪಾದನಾ ದಾಳಿಯ ಕರಾಳ ನೆನಪಿಗೆ ಇಂದು 16 ನೇ ವರ್ಷ. ದಾಳಿಯ ವೇಳೆ ಅಪ್ರತಿಮ ಶೌರ್ಯ ಪ್ರದರ್ಶಸಿದ ಮತ್ತು ಪ್ರಾಣತೆತ್ತ ವೀರ ಯೋಧರನ್ನು ದೇಶ ಇಂದು ಸ್ಮರಿಸುತ್ತಿದೆ.
ಭಾರತದೊಳಗೆ ಅಕ್ರಮವಾಗಿ ನುಸುಳಿದ್ದ ಪಾಕಿಸ್ಥಾನದ ಲಷ್ಕರ್ ಇ ತೋಯ್ಬಾದ ಉಗ್ರರು 2008ರ ನವೆಂಬರ್ 26ರಂದು ಮುಂಬಯಿಯ ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ಮುಂಬೈ ಚಾಬಾದ್ ಹೌಸ್, ನಾರಿಮನ್ ಹೌಸ್, ಕ್ಯಾಮಾ ಹಾಸ್ಪಿಟಲ್ ಸೇರಿದಂತೆ ಹಲವೆಡೆ ಸರಣಿ ದಾಳಿಗಳನ್ನು ನಡೆಸಿದ್ದರು.
ಈ ದಾಳಿಯಲ್ಲಿ 20 ಭದ್ರತಾ ಪಡೆ ಸಿಬ್ಬಂದಿ ಮತ್ತು 26 ವಿದೇಶಿಯರು ಸೇರಿದಂತೆ ಕನಿಷ್ಠ 166 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡರು. ಹತ್ತು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರು ಪಾಕಿಸ್ತಾನದಿಂದ ಸಮುದ್ರ ಮಾರ್ಗವಾಗಿ ಮುಂಬೈಗೆ ಬಂದು ದಾಳಿಗಳನ್ನು ನಡೆಸಿದರು ಎಂಬುದು ನಂತರ ತನಿಖೆಯಿಂದ ಬಯಲಾಗಿದೆ.
26/11ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ 166 ಮಂದಿಗೆ ಭಾರತದ ರಾಷ್ಟ್ರಪತಿಯಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರವರೆಗೆ, ಸಮಾಜದ ಎಲ್ಲಾ ಕ್ಷೇತ್ರಗಳ ನಾಯಕರು ಮತ್ತು ನಾಗರಿಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.