ನವದೆಹಲಿ: ಫೆಬ್ರವರಿ 24-25 ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಗೂ ಮುಂಚಿತವಾಗಿ, ಕೇಂದ್ರ ಸರ್ಕಾರವು ಅಮೆರಿಕಾದೊಂದಿಗೆ ಹೆವಿ ಡ್ಯೂಟಿ ಆರ್ಮ್ಡ್ ಹೆಲಿಕಾಪ್ಟರ್ಗಳಿಗಾಗಿ 3.5 ಬಿಲಿಯನ್ ಡಾಲರ್ (25,000 ಕೋಟಿ ರೂ.) ಮೌಲ್ಯದ ಎರಡು ಮೆಗಾ ರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸಿದೆ.
ಈ ಒಪ್ಪಂದಗಳು 2007 ರಿಂದ ಯುಎಸ್ನೊಂದಿಗೆ ಭಾರತ ಮಾಡಿಕೊಂಡಿರುವ ರಕ್ಷಣಾ ಒಪ್ಪಂದಗಳ ಒಟ್ಟು ಮೌಲ್ಯವನ್ನು 20 ಬಿಲಿಯನ್ ಡಾಲರ್ ಗಡಿ ದಾಟಿಸಿದೆ. ನೌಕಾಪಡೆಗೆ 24 MH-60 `ರೋಮಿಯೋ ‘ಮಲ್ಟಿ-ಮಿಷನ್ ಹೆಲಿಕಾಪ್ಟರ್ಗಳಿಗೆ $ 2.6 ಬಿಲಿಯನ್ ಒಪ್ಪಂದ ಮತ್ತು ಸೇನೆಗಾಗಿ ಆರು ಎಹೆಚ್ -64 ಇ ಅಪಾಚೆ ಅಟ್ಯಾಕ್ ಚಾಪರ್ಗಳಿಗೆ $930 ಮಿಲಿಯನ್ ಒಪ್ಪಂದ. ರಕ್ಷಣೆಯ ಮೇಳಿನ ಸಂಪುಟ ಸಮಿತಿಯು (ಸಿಸಿಎಸ್) ಈ ಒಪ್ಪಂದಕ್ಕೆ ಮುಂದಿನ ವಾರ ಅನುಮೋದನೆಯನ್ನು ನೀಡಲಾಗಿದೆ.
“ಯುಎಸ್ ವಿದೇಶಿ ಮಿಲಿಟರಿ ಮಾರಾಟ (ಎಫ್ಎಂಎಸ್) ಸರ್ಕಾರದಿಂದ ಸರ್ಕಾರಕ್ಕೆ ಒಪ್ಪಂದದಡಿಯಲ್ಲಿ MH-60R ಹೆಲಿಕಾಪ್ಟರ್ಗಳ ಖರೀದಿಗೆ ಭಾರತವು ಆರಂಭಿಕ 15% ಕಂತು ಪಾವತಿಸಲಿದೆ. ಒಪ್ಪಂದಕ್ಕೆ ಸಹಿ ಮಾಡಿದ ನಂತರ, ಎರಡು ವರ್ಷಗಳಲ್ಲಿ ಮೊದಲ ಹೆಲಿಕಾಫ್ಟರ್ಗಳನ್ನು ಪಡೆಯಲಿದೆ. ಎಲ್ಲಾ 24 ಹೆಲಿಕಾಫ್ಟರ್ಗಳು ನಾಲ್ಕರಿಂದ ಐದು ವರ್ಷಗಳಲ್ಲಿ ಪೂರೈಕೆಯಾಗಲಿದೆ” ಎಂದು ಮೂಲವೊಂದು ತಿಳಿಸಿದೆ.
ಭಾರತ ಮತ್ತು ಯುಎಸ್ ದ್ವಿಪಕ್ಷೀಯ ರಕ್ಷಣಾ ತಂತ್ರಜ್ಞಾನ ಮತ್ತು ವ್ಯಾಪಾರ ಉಪಕ್ರಮ (ಡಿಟಿಟಿಐ) ಅಡಿಯಲ್ಲಿ ಜಂಟಿ ಅಭಿವೃದ್ಧಿ ಮತ್ತು ಜಂಟಿ ಉತ್ಪಾದನೆಗಾಗಿ ಏಳು ರಕ್ಷಣಾ ಯೋಜನೆಗಳನ್ನು ಗುರುತಿಸಿವೆ. ಇವುಗಳಲ್ಲಿ ವಾಯು-ಉಡಾವಣಾ ಸಣ್ಣ ವೈಮಾನಿಕ ವ್ಯವಸ್ಥೆಗಳು (ಡ್ರೋನ್ಗಳು), ಕಡಿಮೆ ತೂಕದ ಸಣ್ಣ ಶಸ್ತ್ರಾಸ್ತ್ರ ತಂತ್ರಜ್ಞಾನ, ISTAR (ಗುಪ್ತಚರ, ಕಣ್ಗಾವಲು, ಗುರಿ ಮತ್ತು ವಿಚಕ್ಷಣ) ವ್ಯವಸ್ಥೆಗಳು ಮತ್ತು “ಕೌಂಟರ್-ಯುಎಎಸ್ ರಾಕೆಟ್, ಆರ್ಟಿಲರಿ ಆ್ಯಂಡ್ ಮಾರ್ಟರ್ ಸಿಸ್ಟಮ್” ಎಂದು ಕರೆಯಲ್ಪಡುವ ಡ್ರೋನ್ ವಿರೋಧಿ ತಂತ್ರಜ್ಞಾನಗಳು ಇದರಲ್ಲಿ ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.