ಭಾರತೀಯ ರೈಲ್ವೆ ವಿವಿಧ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಯೋಜನೆಯನ್ನು ಹೊಂದಿದೆ.
ಭಾರತೀಯ ರೈಲ್ವೆಯು ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುತ್ತಿದೆ. ಹೊಸ ಪ್ರೀಮಿಯಂ ರೈಲುಗಳು ಮತ್ತು ವಿಶ್ವ ದರ್ಜೆಯ ರೈಲ್ವೆ ನಿಲ್ದಾಣಗಳಲ್ಲದೆ, ಪಿಯೂಷ್ ಗೋಯಲ್ ನೇತೃತ್ವದ ಭಾರತೀಯ ರೈಲ್ವೆ ವಿವಿಧ ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಯೋಜನೆಯನ್ನು ಹೊಂದಿದೆ. ‘ಮೇಕ್ ಇನ್ ಇಂಡಿಯಾ’ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಎರಡು ಮಾರ್ಗಗಳಲ್ಲಿ ಪರಿಚಯಿಸಲಾಗಿದ್ದು, ಇನ್ನೂ 44 ಹೊಸ ಟ್ರೈನ್ 18 ರೈಲುಗಳ ಪ್ರವೇಶವನ್ನು ಪ್ರಾರಂಭಿಸಲಾಗಿದೆ.
ಪ್ರಮುಖ ಪ್ರವಾಸೋದ್ಯಮ ಮಾರ್ಗಗಳಲ್ಲಿ ಹೊಸ ತೇಜಸ್ ಎಕ್ಸ್ಪ್ರೆಸ್ ಶೈಲಿಯ ಪ್ರೀಮಿಯಂ ರೈಲುಗಳನ್ನು ಪರಿಚಯಿಸುವುದರಿಂದ ಹಿಡಿದು ರೈಲು ಹಳಿಗಳ ಜೊತೆಗೆ ದೊಡ್ಡ ಸೌರಶಕ್ತಿ ಸಾಮರ್ಥ್ಯವನ್ನು ಸ್ಥಾಪಿಸುವವರೆಗೆ, ರಾಷ್ಟ್ರೀಯ ಸಾರಿಗೆ ಪ್ರಮುಖ ಉತ್ತೇಜನವನ್ನು ಪಡೆಯುತ್ತಿದೆ. ಕೇಂದ್ರ ಬಜೆಟ್ 2020ರ ಭಾಷಣದಲ್ಲಿ ಒತ್ತಿ ಹೇಳಿದಂತೆ ಹೊಸ ತಂತ್ರಜ್ಞಾನಗಳ ಮೂಲಕ ಪ್ರಯಾಣಿಕರ ಅನುಭವವನ್ನು ಸುಧಾರಿಸಲು ತೆಗೆದುಕೊಳ್ಳುತ್ತಿರುವ ಕೆಲವು ಕ್ರಮಗಳು ಇಲ್ಲಿ:-
🔹 ಭಾರತೀಯ ರೈಲ್ವೆ ದೇಶಾದ್ಯಂತ 5,500 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ವೇಗದ ಮತ್ತು ಉಚಿತ ವೈಫೈ ಸೌಲಭ್ಯಗಳನ್ನು ಒದಗಿಸಿದ್ದು, ಸಾರ್ವಜನಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗಿದೆ.
🔹 ರಿಯಲ್ ಟೈಮ್ ರೈಲು ಮಾಹಿತಿ ವ್ಯವಸ್ಥೆಯ ಮೂಲಕ ರೈಲು ಸಮಯವನ್ನು ಸ್ವಯಂಚಾಲಿತವಾಗಿ ನವೀಕರಿಸುವುದು ಭಾರತೀಯ ರೈಲ್ವೆಯ ಸಮಯಪ್ರಜ್ಞೆಯನ್ನು ಸುಧಾರಿಸುತ್ತಿದೆ ಎಂದು ಬಜೆಟ್ ಹೇಳಿದೆ. ಇದಲ್ಲದೆ, ಈ ವ್ಯವಸ್ಥೆಯು ರೈಲು ಆಗಮನದ ನಿಖರವಾದ ಮಾಹಿತಿಯನ್ನು ಮತ್ತು ಪ್ರಯಾಣಿಕರಿಗೆ ರೈಲು ನಿರ್ಗಮನದ ನಿಖರವಾದ ಮಾಹಿತಿಯನ್ನು ನೀಡುತ್ತಿದೆ.
🔹 ಟಿಕೆಟ್ ದೃಢೀಕರಣದ ಸಾಧ್ಯತೆಯನ್ನು ಊಹಿಸಲು ಸಹಾಯ ಮಾಡುವ ಪ್ರಯತ್ನವಾಗಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ವ್ಯವಸ್ಥೆಯನ್ನು ರಾಷ್ಟ್ರೀಯ ಸಾರಿಗೆದಾರನಾದ ರೈಲ್ವೆ ಬಳಸುತ್ತಿದೆ.
🔹 ಐಆರ್ಸಿಟಿಸಿ ಬೇಸ್ ಕಿಚನ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಬಳಕೆಯ ಮೂಲಕ ಪಾರದರ್ಶಕತೆ ಮತ್ತು ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಉತ್ಕೃಷ್ಣತೆಯನ್ನು ಕಾಪಾಡಿಕೊಳ್ಳುತ್ತಿದೆ, ಈ ಅಡುಗೆಮನೆಗಳ ನೇರ ಪ್ರಸಾರವನ್ನು ನೋಡುವ ಅವಕಾಶ ಜನರಿಗೆ ಸಿಗಲಿದೆ. ಅಲ್ಲದೆ, ಕ್ಯೂಆರ್ ಕೋಡ್ಗಳನ್ನು ಹೊಂದಿರುವ ಆಹಾರ ಪ್ಯಾಕೆಟ್ಗಳನ್ನು ಅವುಗಳನ್ನು ತಯಾರಿಸಿದ ಅಡುಗೆ ಮನೆಗಳಿಗೆ ಸಂಪರ್ಕಿಸಲಾಗುತ್ತದೆ.
🔹 ಹ್ಯಾಂಡ್ ಹೆಲ್ಡ್ ಸಾಧನಗಳು ಮತ್ತು ಪಿಓಎಸ್ ಯಂತ್ರಗಳನ್ನು ಒದಗಿಸುವುದರೊಂದಿಗೆ, ಡಿಜಿಟಲ್ ಪಾವತಿಯು ಉತ್ತೇಜನವನ್ನು ಪಡೆಯುತ್ತಿದೆ.
ಈ ನಡುವೆ, ಹಣಕಾಸು ಸಚಿವರು ತಮ್ಮ ಕೇಂದ್ರ ಬಜೆಟ್ 2020 ರ ಭಾಷಣದಲ್ಲಿ ಮುಂದಿನ 5 ವರ್ಷಗಳ ಅವಧಿಯಲ್ಲಿ ಭಾರತದ ಮೂಲಸೌಕರ್ಯ ವಲಯದಲ್ಲಿ 100 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.