ಸುಬ್ರಹ್ಮಣ್ಯ : ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳು ಲಭ್ಯವಾಗುತ್ತಿದೆ.ಇದನ್ನು ಸಮರ್ಪಕವಾಗಿ ಬಳಿಸಿಕೊಳ್ಳಲು ಕಾರ್ಮಿಕರು ಪ್ರಯತ್ನ ನಡೆಸಬೇಕು.ಈ ನಿಟ್ಟಿನಲ್ಲಿ ಆರಂಭದಲ್ಲಿ ಇಲಾಖೆಯಿಂದ ಗುರುತಿನಟಿ ಮಾಡಿಸಿಕೊಳ್ಳಬೇಕಾಗಿದೆ ಎಂದು ಪುತ್ತೂರು ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ರಾಮಚಂದ್ರ ಎಚ್ ಹೇಳಿದರು.
ಅವರು ಗುತ್ತಿಗಾರು ಕಟ್ಟಡ ಕಾರ್ಮಿಕರ ಸಂಘ ಹಾಗೂ ಯುವಕ ಮಂಡಲ ಆಶ್ರಯದಲ್ಲಿ ಗುತ್ತಿಗಾರಿನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಗುರುತು ಚೀಟಿ ವಿತರಿಸಿ ಮಾತನಾಡಿದರು.ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕ ಎಂದು ನೋಂದಾಯಿಸಿದ ತಕ್ಷಣವೇ ಗುರುತು ಚೀಟಿ ನೀಡುವ ವ್ಯವಸ್ಥೆ ಇದೀಗ ಇದೆ.ಇದಕ್ಕಾಗಿ ಯಾವುದೇ ಮದ್ಯವರ್ತಿಗಳ ಅವಶ್ಯಕತೆ ಇಲ್ಲ.ನೇರವಾಗಿ ಕಚೇರಿ ಬಂದು ಅಥವಾ ಸಂಘಟನೆಯ ಮೂಲಕ ಆಗಮಿಸಿ ನೋಂದಾವಣೆ ಮಾಡಿಸಿಕೊಳ್ಳಬಹುದು.ಈ ಮೂಲಕ ಗುರುತು ಚೀಟಿ ಪಡೆದು ಇಲಾಖೆಯಿಂದ ಲಭ್ಯವಾಗುವ ವಿವಿಧ ಸವಲತ್ತು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಿಬಂದಿ ಚಿದಾನಂದ ಕಾಮತ್ ಕಾಸರಗೋಡು, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಜಯರಾಮ ವಳಲಂಬೆ, ಗೌರವಾಧ್ಯಕ್ಷ ರವಿಪ್ರಕಾಶ್ ಬಿವಿ, ಯುವಕ ಮಂಡಲದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ, ಕೋಶಾಧಿಕಾರಿ ಲೋಕೇಶ್ವರ ಡಿಆರ್, ಸದಸ್ಯ ದಾಮೋದರ ನೂಜಾಡಿ ಮೊದಲಾದವರು ಉಪಸ್ಥಿತರಿದ್ದರು.ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಜಯರಾಮ ವಳಲಂಬೆ ಸ್ವಾಗತಿಸಿ ಯುವಕ ಮಂಡಲದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.