‘ತೀವ್ರಗಾಮಿ ಕೇಂದ್ರಿತ’ ಎಂದು ಹೇಳಿಕೊಳ್ಳುವ ಬ್ರಿಟಿಷ್ ನಿಯತಕಾಲಿಕೆ ದಿ ಎಕನಾಮಿಸ್ಟ್, ಮೋದಿ ಸರ್ಕಾರವನ್ನು, ಅದರ ಸಾಮಾಜಿಕ ಮತ್ತು ರಾಜಕೀಯ ಕಾರ್ಯಸೂಚಿಯನ್ನು ನಿರಂತರವಾಗಿ ಟೀಕಿಸುತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಜಾಗತೀಕರಣವನ್ನು ತೀವ್ರವಾಗಿ ಬೆಂಬಲಿಸುತ್ತಿರುವ ಪತ್ರಿಕೆ, ಪ್ರಧಾನಿ ಮೋದಿಯವರ ‘ರಾಷ್ಟ್ರೀಯವಾದಿ’ ಕಾರ್ಯಸೂಚಿಯನ್ನು ತೀವ್ರವಾಗಿ ಟೀಕಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ, ವಿಶ್ವದಾದ್ಯಂತ ರಾಷ್ಟ್ರೀಯವಾದಿ ಮತ್ತು ರಕ್ಷಣಾತ್ಮಕ ಸರ್ಕಾರಗಳ ಉದಯದಿಂದ, ದಿ ಎಕನಾಮಿಸ್ಟ್ನ ಉದಾರ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಸೂಚಿಯು ಮೂಲೆಗುಂಪಾಗಿದೆ. ರಾಷ್ಟ್ರವಾದಿ ಸರ್ಕಾರಗಳೂ ಅಭೂತಪೂರ್ವ ರೀತಿಯಲ್ಲಿ ಉದಯವಾಗುತ್ತಿರುವುದು ಅದರ ತಲೆಯನ್ನು ಪೆಡಿಸಿದೆ.
ಇಂಡಿಯಾ ಟುಡೆ ಗ್ರೂಪ್ನ ನಿರೂಪಕ ಮತ್ತು ಪತ್ರಕರ್ತ ರಾಜ್ದೀಪ್ ಸರ್ದೇಸಾಯಿ ಅವರು ಈ ನಿಯತಕಾಲಿಕೆಯ ಎರಡು ಕವರ್ಗಳನ್ನು ಟ್ವೀಟ್ ಮಾಡಿದ್ದಾರೆ, ಒಂದು 2010 ರ ಮುಖಪುಟ, ಇದರಲ್ಲಿ ‘ಭಾರತದ ಬೆಳವಣಿಗೆ ಚೀನಾವನ್ನು ಹೇಗೆ ಮೀರಿಸುತ್ತದೆ’ ಎಂಬ ಶೀರ್ಷಿಕೆ ಇದೆ ಮತ್ತು ಇನ್ನೊಂದು ಇತ್ತೀಚಿನ ಕವರ್ ಆಗಿದ್ದು, ‘ಅಸಹಿಷ್ಣುತ ಭಾರತ’ ಎಂದು ಶೀರ್ಷಿಕೆ ನೀಡಲಾಗಿದೆ.
A tale of two covers: 2010 and 2020.. say no more.. or risk being called ‘anti national’! Have a good Friday folks!! pic.twitter.com/rGOw9k1ss8
— Rajdeep Sardesai (@sardesairajdeep) January 24, 2020
2010 ರಲ್ಲಿ, ಭಾರತದ ಬೆಳವಣಿಗೆಯ ಪ್ರಯಾಣವು ಕೊನೆಯಾಗುತ್ತಿದ್ದ ವರ್ಷ, ಯುಪಿಎ II ರ ಜನಪ್ರಿಯ ಅಜೆಂಡಾಗಳಿಂದಾಗಿ ವಾಜಪೇಯಿ ಸರ್ಕಾರವು ತಂದ ಸುಧಾರಣೆಗಳು ಮಂಕಾಯಿತು, ಆದರೆ ದಿ ಎಕನಾಮಿಸ್ಟ್ ನಿಯತಕಾಲಿಕೆ ಚೀನಾವನ್ನು ಭಾರತದ ಆರ್ಥಿಕ ಬೆಳವಣಿಗೆಯು ಹಿಂದಿಕ್ಕುತ್ತದೆ ಎಂದು ವಿಶ್ಲೇಷಿಸಿತು.
ದಿ ಎಕನಾಮಿಸ್ಟ್ ಯುಪಿಎ IIನಂತಹ ಅತೀ ಕೆಟ್ಟ ಸರ್ಕಾರವನ್ನು ಕೊಂಡಾಡಿತು. ಯುಪಿಯ ರಾಜಕೀಯ ಮತ್ತು ನೀತಿಗಳು ಅತೀ ಕೆಟ್ಟದ್ದಾಗಿತ್ತು ಎಂಬುದನ್ನು ಭಾರತದ ಜನರು ಈಗಲೂ ನೆನೆಪಿಸಿಕೊಳ್ಳುತ್ತಾರೆ. ಯುಪಿಎಯ ಎರಡನೇ ಅವಧಿಯು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮಹಿಳೆಯರ ಭದ್ರತೆಯ ಬಗ್ಗೆ ಸಾರ್ವಜನಿಕರ ಆಕ್ರೋಶ, ಭಯೋತ್ಪಾದಕ ದಾಳಿ, ಅತಿಯಾದ ಸಾಲ, ಆರ್ಥಿಕ ಬೆಳವಣಿಗೆಯ ಮಂದಗತಿ ಭಾರತದ ಜಾಗತಿಕ ಮಟ್ಟವನ್ನು ದುರ್ಬಲಗೊಳಿಸಿತು. ಆದರೆ, ಮನಮೋಹನ್ ಸಿಂಗ್ ಸರ್ಕಾರವನ್ನು ಅದರ ಸೈದ್ಧಾಂತಿಕ ಸ್ಥಾನಗಳನ್ನು ಈ ನಿಯತಕಾಲಿಕೆ ‘ಉದಾರವಾದಿ ಪ್ರಜಾಪ್ರಭುತ್ವ’ ಚೌಕಟ್ಟಿನಲ್ಲಿ ಹೊಂದಿಕೊಳ್ಳುತ್ತವೆ ಎಂದು ಹೊಗಳಿತ್ತು.
ಮೋದಿ ಸರ್ಕಾರದ ಕಳೆದ ಐದಾರು ವರ್ಷಗಳಲ್ಲಿ ಭಾರತವು ಪ್ರತಿಯೊಂದು ಸಾಮಾಜಿಕ-ಆರ್ಥಿಕ ಸೂಚಕಗಳಲ್ಲೂ ಸುಧಾರಣೆಯಾಗಿದೆ ಎಂಬುದನ್ನು ಗಮನಿಸುವುದು ಅತೀ ಮುಖ್ಯ. ಪ್ರತಿ ನಿಮಿಷ ಬಡತನದಿಂದ ಹೊರಬರುವ ಜನರ ಪ್ರಮಾಣ ಸಾರ್ವಕಾಲಿಕ ಹೆಚ್ಚಳವಾಗಿದೆ. ಶಿಶು ಮರಣ ಸಾರ್ವಕಾಲಿಕ ಕಡಿಮೆಯಾಗಿದೆ, ಹಣದುಬ್ಬರವು ಸಾರ್ವಕಾಲಿಕ ಕಡಿಮೆಯಾಗಿದೆ, ಭಾರತೀಯ ನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿಲ್ಲ, ಭಾರತದ ಜಾಗತಿಕ ಸ್ಥಿತಿ ವೃದ್ಧಿಯಾಗುತ್ತಿದೆ, ಭಾರತೀಯ ಪ್ರಧಾನಿ ವಿಶ್ವದಾದ್ಯಂತ ಅತ್ಯಂತ ಜನಪ್ರಿಯರಾಗಿದ್ದಾರೆ ಮತ್ತು ಭಾರತದ ಮೇಲಿನ ಗೌರವ ಸಾರ್ವಕಾಲಿಕ ಎತ್ತರದಲ್ಲಿದೆ.
ಮೋದಿ ಸರ್ಕಾರದ ಬಗ್ಗೆ ದಿ ಎಕನಾಮಿಸ್ಟ್ನ ದ್ವೇಷ ಹೊಸದೇನಲ್ಲ. ಈ ಹಿಂದೆ ಜಾಗತೀಕರಣದ ಮುಖವಾಣಿಯಾದ ಈ ನಿಯತಕಾಲಿಕೆ, 2019 ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಮೋದಿ ಸರ್ಕಾರದ ಮೇಲೆ ಟೀಕಾಪ್ರಹಾರ ನಡೆಸಿ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದೆ. ಮುಕ್ತ ವ್ಯಾಪಾರ, ಅನಿಯಂತ್ರಿತ ಜಾಗತೀಕರಣ, ಮಾದಕವಸ್ತು ಉದಾರೀಕರಣ, ಮುಕ್ತ ವಲಸೆ ಮತ್ತು ಸಾಂಸ್ಕೃತಿಕ ಉದಾರವಾದದಂತಹ ಎಲ್ಲಾ ತಪ್ಪುಗಳ ಪರವಾಗಿಯೂ ದಿ ಎಕನಾಮಿಸ್ಟ್ ನಿಂತಿದೆ.
ಈ ಪತ್ರಿಕೆ ಯುನೈಟೆಡ್ ಸ್ಟೇಟ್ಸ್ ನೇತೃತ್ವದ ಆಂಗ್ಲೋ-ಅಮೇರಿಕನ್ ಜಾಗತಿಕ ಆದೇಶದ ಬೆಂಬಲಿಗನಾಗಿದೆ. ಇದು ಪದೇ ಪದೇ ‘ಅಮೇರಿಕನ್ ಎಕ್ಸೆಪ್ಶನಲಿಸಂ’ ಅನ್ನು ಬೆಂಬಲಿಸಿದೆ ಮತ್ತು ಅನೇಕ ಸಂದರ್ಭಗಳಲ್ಲಿ ಅಮೆರಿಕದ ಹಸ್ತಕ್ಷೇಪವನ್ನು ಸಮರ್ಥಿಸಿದೆ. ಪಾಕಿಸ್ಥಾನ ಕೇಂದ್ರಿತ ಕಾಶ್ಮೀರದ ನಕ್ಷೆಯನ್ನು ಪತ್ರಿಕೆ ತೋರಿಸಿರುವ ಕಾರಣ ಇದನ್ನು ಭಾರತದಲ್ಲಿ ಸೆನ್ಸಾರ್ಶಿಪ್ಗೆ ಒಳಪಡಿಸಲಾಗಿದೆ. ಭಾರತ ಪಾಕಿಸ್ಥಾನದ ವಿರುದ್ಧ ನಡೆಸಿದ ವೈಮಾನಿಕ ದಾಳಿಯನ್ನು ಇದು ಖಂಡಿಸಿದೆ. ಒಟ್ಟಿನಲ್ಲಿ ಭಾರತದ ವಿರುದ್ಧ ಮಾತನಾಡುವುದು ಇದಕ್ಕೆ ಅಭ್ಯಾಸ.
ಭಾರತದ ಬಗ್ಗೆ ವಿಪರೀತ ಆಸಕ್ತಿ ವಿದೇಶಿ ಮಾಧ್ಯಮಗಳಿಗೆ ಹೊಸದಲ್ಲ. ಅವುಗಳು ಯಾವಾಗಲೂ ಭಾರತವನ್ನು ನಕಾರಾತ್ಮಕ ಬೆಳಕಿನಲ್ಲಿ ಚಿತ್ರಿಸುತ್ತಾರೆ ಮತ್ತು ಜಾಗತಿಕ ಮಟ್ಟದಲ್ಲಿ ತಮ್ಮ ಸುಳ್ಳು ಪ್ರಚಾರದಿಂದ ಭಾರತದ ಘನತೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ. ವಿದೇಶಿ ಮಾಧ್ಯಮವು ಭಾರತದ ಬಗ್ಗೆ ದ್ವೇಷವನ್ನು ಹೊಂದಿದೆ. ಸ್ವಾತಂತ್ರ್ಯ ಬಂದಾಗಿನಿಂದ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರೂ, ವಿದೇಶಿ ಮಾಧ್ಯಮಗಳು ಭಾರತವನ್ನು ಹಾವು ಹಿಡಿಯುವವರ ಹಿಂದುಳಿದ ಭೂಮಿಯಾಗಿ ಪ್ರಸ್ತುತಪಡಿಸುತ್ತಿವೆ ಮತ್ತು ಇನ್ನೂ ಅನೇಕ ಅವಹೇಳನಕಾರಿ ಟ್ಯಾಗ್ಗಳನ್ನು ಭಾರತಕ್ಕೆ ನೀಡಲಾಗಿದೆ. ಇದು ವಿದೇಶಿ ಮಾಧ್ಯಮಗಳ ಜನಾಂಗೀಯ ತಾರತಮ್ಯದ ಮನಸ್ಥಿತಿಯನ್ನು ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.