ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಗಗನಯಾತ್ರೆಗೆ ಇಸ್ರೋ ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮುನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೊದಲು ‘ವ್ಯೋಮ ಮಿತ್ರ’ ಎಂಬ ಹೆಸರಿನ ಲೇಡಿ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಿದೆ. ಈಗಾಗಲೇ ವ್ಯೋಮ ಮಿತ್ರ ಸಿದ್ಧಗೊಂಡಿದೆ.
ಬೆಂಗಳೂರಿನಲ್ಲಿ ಬುಧವಾರ ನಡೆದ “ಮಾನವ ಬಾಹ್ಯಾಕಾಶ ಹಾರಾಟ ಮತ್ತು ಪರಿಶೋಧನೆ – ಪ್ರಸ್ತುತ ಸವಾಲುಗಳು ಮತ್ತು ಭವಿಷ್ಯದ ಪ್ರವೃತ್ತಿಗಳು” ಸೆಮಿನಾರ್ನ ಉದ್ಘಾಟನಾ ಅಧಿವೇಶನದಲ್ಲಿ ವ್ಯೋಮ್ ಮಿತ್ರಾವನ್ನು ಪ್ರದರ್ಶಿಸಲಾಗಿದ್ದು, ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.
“ಎಲ್ಲರಿಗೂ ನಮಸ್ಕಾರ. ನಾನು ಸೆಮಿ-ಹ್ಯುಮನಾಯ್ಡ್ನ ಮೂಲಮಾದರಿಯ ವ್ಯೋಮ್ ಮಿತ್ರ, ಮೊದಲ ಮಾನವರಹಿತ ಗಗನಯಾನ ಮಿಷನ್ಗಾಗಿ ತಯಾರಿಸಲ್ಪಟ್ಟಿದ್ದೇನೆ” ಎಂದು ರೋಬೋಟ್ ತನ್ನನ್ನು ತಾನು ಪರಿಚಯಿಸಿಕೊಂಡಿದೆ.
ಮಾಡ್ಯೂಲ್ ನಿಯತಾಂಕಗಳನ್ನು ಮೇಲ್ವಿಚಾರಣೆ ಮಾಡುವುದು, ಗಗನಯಾತ್ರಿಗಳನ್ನು ಎಚ್ಚರಿಸುವುದು ಮತ್ತು ಲೈಫ್ ಸಪೋರ್ಟ್ ಕಾರ್ಯಾಚರಣೆಗಳನ್ನು ನಿರ್ವಹಿಸುವುದು ಇತ್ಯಾದಿ ಅನೇಕ ಕಾರ್ಯಗಳನ್ನು ಇದು ಮಾಡಲಿದೆ.
ವ್ಯೋಮ ಮಿತ್ರ ಮಾನವ ಕಾರ್ಯಗಳನ್ನು ಅನುಕರಿಸಲಿದ್ದಾಳೆ ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ಹೇಳಿದ್ದಾರೆ.
“ಇದು ಬಾಹ್ಯಾಕಾಶದಲ್ಲಿ ಮಾನವ ಕಾರ್ಯಗಳನ್ನು ನಿಖರವಾಗಿ ಅನುಕರಿಸುತ್ತದೆ. ಇದು ವ್ಯವಸ್ಥೆಯು ಸರಿಯಾಗಿದೆಯೇ ಎಂದು ಪರಿಶೀಲಿಸುತ್ತದೆ. ಮನುಷ್ಯನು ಹಾರುತ್ತಿರುವುದನ್ನು ಅನುಕರಿಸಲು ಇದು ತುಂಬಾ ಉಪಯುಕ್ತವಾಗಿದೆ” ಎಂದು ಎಂದಿದ್ದಾರೆ.
ಗಗನಯಾನ ಕಾರ್ಯಾಚರಣೆಗೆಗೂ ಮೊದಲು ಇಸ್ರೋ ಎರಡು ಮಾನವರಹಿತ ಕಾರ್ಯಾಚರಣೆಗಳನ್ನು ಕಳುಹಿಸುತ್ತದೆ. ಪರಿಸರ ನಿಯಂತ್ರಣ ಜೀವನ ಬೆಂಬಲ ವ್ಯವಸ್ಥೆಯಲ್ಲಿ ಮಾನವ ವ್ಯವಸ್ಥೆಯು ಹೇಗೆ ವರ್ತಿಸುತ್ತದೆ ಎಂಬುದನ್ನು ಇದು ಮೇಲ್ವಿಚಾರಣೆ ಮಾಡುತ್ತದೆ.
ನಾಲ್ಕು ಭಾರತೀಯ ವಾಯುಪಡೆಯ ಪೈಲಟ್ಗಳನ್ನು ಮಾನವಸಹಿತ ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿದೆ. ಅವರು ಪ್ರಸ್ತುತ ರಷ್ಯಾದಲ್ಲಿ 11 ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ಒಳಗಾಗುತ್ತಿದ್ದಾರೆ.
In the run up to the first Human Space Mission by India at @isro … ‘Vyommitra’, the humanoid for #Gaganyaan unveiled. This prototype of humanoid will go as trial before Gaganyaan goes with Astronauts. #ISRO pic.twitter.com/pnzklgSfqu
— Dr Jitendra Singh (@DrJitendraSingh) January 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.