ಕಳೆದ ವಾರ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ತನ್ನ ಅಧಿಕೃತ ಪೇಜ್ನಲ್ಲಿ ಭೂಲೋಕದ ಸ್ವರ್ಗ ಕಾಶ್ಮೀರದ ಬಗ್ಗೆ ಮನಮೋಹಕವಾದ ವೀಡಿಯೋವನ್ನು ಹರಿಬಿಟ್ಟಿತು. ಚಳಿಗಾಲದ ಸಂದರ್ಭದಲ್ಲಿ ಅಲ್ಲಿನ ಸುಂದರ ಮನೋಜ್ಞ ದೃಶ್ಯ, ಅಲ್ಲಿನ ಜನಜೀವನದ ಮೇಲೆ ಈ ವೀಡಿಯೋ ಬೆಳಕು ಚೆಲ್ಲಿದೆ. ಎಂತವರಿಗೂ ಒಂದು ಬಾರಿ ಜಮ್ಮು ಕಾಶ್ಮೀರಕ್ಕೆ ತೆರಳಿ ಭೂಲೋಕದ ಸ್ವರ್ಗವನ್ನು ಕಣ್ತುಂಬಿಸುವ, ಹಿಮಾ ತುಂಬಿದ ಭೂಮಿಯಲ್ಲಿ ಅಡ್ಡಾಡುವ ಆಸೆಯನ್ನು ಮೂಡಿಸುತ್ತದೆ.
ಚಳಿಗಾಲದಲ್ಲಿನ ಜಮ್ಮು ಕಾಶ್ಮೀರದ ಜೀವನದ ಬಗೆಗಿನ ವಿವಿಧ ಆಯಾಮಗಳನ್ನು ಈ ವೀಡಿಯೋ ತೋರಿಸುತ್ತದೆ, ಚಿತ್ತಾರದ ಕಾಶ್ಮೀರಿ ಕಾಂಗ್ರಿ, ಮಣ್ಣಿನ ಮಡಕೆಗಳೊಳಗೆ ಬಿಸಿ ಪದಾರ್ಥ ಹೀಗೆ ನಾನಾ ಬಗೆಯ ಕಾಶ್ಮೀರಿ ಜೀವನ ಶೈಲಿಯನ್ನು ವೀಡಿಯೋದಲ್ಲಿ ತೋರಿಸಲಾಗಿದೆ. ಕೊರೆವ ಚಳಿಯಿಂದ ರಕ್ಷಣೆಯನ್ನು ಪಡೆಯಲು ಕಾಶ್ಮೀರಿಗಳು ಬಳಸುವ ಮಾರ್ಗಗಳನ್ನು ಇದರಲ್ಲಿ ವಿವರಿಸಲಾಗಿದೆ.
ಭಾರತೀಯ ಸೇನೆಯು ಟ್ವೀಟ್ ಮಾಡಿದ ವೀಡಿಯೊವು, ಕಾಂಗ್ರಿ ಉತ್ಪಾದನೆಯ ಹಿಂದೆ ಕುಶಲಕರ್ಮಿಗಳ ಸಂಪೂರ್ಣ ಪ್ರಕ್ರಿಯೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿದೆ. ‘ಕುಂಡಲ್’ ಎಂದು ಕರೆಯಲ್ಪಡುವ ಮಣ್ಣಿನ ಮಡಕೆಯನ್ನು ಬಳ್ಳಿಗಳಿಂದ ಹೇಗೆ ನೇಯಲಾಗುತ್ತದೆ ಎಂಬ ಪ್ರಕ್ರಿಯೆಯನ್ನು ಅದು ತೋರಿಸಿದೆ. ಈ ಕಾಂಗ್ರಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಕುಟುಂಬದ ಸಾಂಪ್ರದಾಯಿಕ ಕಾಂಗ್ರಿ ಯಾವಾಗಲೂ ಕುಟುಂಬಕ್ಕೆ ಬರುವ ಹೊಸ ವಧುವಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಪೂರ್ವಜರಿಗೆ ಗೌರವ ಸಲ್ಲಿಸುವ ಸಮಯದಲ್ಲಿ ಕಾಂಗ್ರಿಯನ್ನು ಅರ್ಚಕರಿಗೆ ನೀಡಲಾಗುತ್ತದೆ. ಇದಲ್ಲದೆ ಇದು ಸಾಮಾನ್ಯ ಕಾಶ್ಮೀರಿಗಳ ಜೀವನದಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿದೆ, ಅವರು ಚಳಿಗಾಲದಲ್ಲಿ ಬೆಚ್ಚಗಿರಲು ಅದನ್ನು ತಮ್ಮೊಂದಿಗೆ ಒಯ್ಯುತ್ತಾರೆ.
“ಕೇಸರಿ ಮತ್ತು ವಾಲ್ನಟ್ನೊಂದಿಗೆ ಕೆಹ್ವಾದ ಬಿಸಿ ಕಪ್. ಫಿರಾನ್ ಕಂಬಳಿಗಳಲ್ಲಿ ಕಾಂಗ್ರಿಯ ಬಿಸಿ. ನಿಜಕ್ಕೂ ಚಳಿಗಾಲದ ವಂಡರ್ ಲ್ಯಾಂಡ್, ಕನಸುಗಳ ಭೂಮಿ ಕಾಶ್ಮೀರ. ಕಾಶ್ಮೀರದಲ್ಲಿ ಚಳಿಗಾಲದ ಬೆಳಿಗ್ಗೆ ಪ್ರಾರಂಭವಾಗುವುದು ಹೀಗೆ …” ಎಂದು ಒಕ್ಕಣೆಯನ್ನು ಬರೆದು ಸೇನೆ ವೀಡಿಯೋವನ್ನು ಹರಿ ಬಿಟ್ಟಿದೆ.
#KashmiriWayOfLife
“Ai kangri! ai kangri! Kurban tu Hour wu Peri!”
(Oh, kangri! oh, kangri! You are the gift of Fairies)
An earthen pot, woven around with wicker, filled with hot embers used to keep warm in winters. #KashmirCalling#Kashmir @adgpi @NorthernComd_IA @easterncomd pic.twitter.com/ij9uAyenYv— Chinar Corps – Indian Army (@ChinarcorpsIA) January 11, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.