ನವದೆಹಲಿ: ಭಾರತದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಸದಾ ಪ್ರಯತ್ನಿಸುತ್ತಿರುವ ಪಾಕಿಸ್ಥಾನ, ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಹೋರಾಟವನ್ನು ಕೂಡ ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಸಿಎಎ ವಿರುದ್ಧ ನಕಲಿ ಸುದ್ದಿಗಳನ್ನು ಹರಡಲು ಕಳೆದ ಕೆಲವು ವಾರಗಳಲ್ಲಿ ಪಾಕಿಸ್ಥಾನದಲ್ಲಿ ಸುಮಾರು 1079 ಟ್ವಿಟರ್ ಖಾತೆಗಳು ಸೃಷ್ಟಿಯಾಗಿವೆ.
ಡಿಆರ್ಡಿಓ ಸೇರಿದಂತೆ ಸರ್ಕಾರದ ಜಾರಿ ನಿರ್ದೇಶನಾಲಯ ಏಜೆನ್ಸಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಸೈಬರ್ ಸೆಕ್ಯೂರಿಟಿ ಕಂಪನಿ ಇನ್ನೆಫು ಲ್ಯಾಬ್ಸ್ ಸಿದ್ಧಪಡಿಸಿರುವ ವರದಿಯ ಪ್ರಕಾರ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಜನರನ್ನು ಎತ್ತಿಕಟ್ಟಲು ಮತ್ತು ದ್ವೇಷವನ್ನು ಹರಡು ಪಾಕಿಸ್ಥಾನದಲ್ಲಿ 1079 ಟ್ವಿಟರ್ ಖಾತೆಗಳು ಸೃಷ್ಟಿಯಾಗಿವೆ.
ಭಾರತವನ್ನು ಭಯೋತ್ಪಾದಕ ರಾಷ್ಟ್ರ, ನಾಝೀ ರಾಷ್ಟ್ರ ಎಂದು ಕರೆಯುವ ಈ ಟ್ವಿಟರ್ ಖಾತೆಗಳು ಭಾರತದ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡವಲು ಪ್ರಯತ್ನಿಸುತ್ತಿದೆ ಎಂದು ವರದಿ ಹೇಳಿದೆ.
15 ದಿನಗಳಲ್ಲಿ, ಡಿಸೆಂಬರ್ 23ರವರೆಗೆ ಭಾರತ ವಿರೋಧಿ ವಿಷಯಗಳನ್ನು ಹರಡಲು ಹ್ಯಾಶ್ಟ್ಯಾಗ್, ಇನ್ಫ್ಲ್ಯೂಯನ್ಸರ್ ಮತ್ತು ಬೋಟ್ಗಳನ್ನು ಬಳಕೆ ಮಾಡಲಾಗಿದೆ.
#NaziIndiaRejected, #IndiaDiscriminatesMuslims, #IndiaToEndia ಮುಂತಾದ ಹ್ಯಾಶ್ಟ್ಯಾಗ್ಗಳನ್ನು ಬಳಸಿಕೊಳ್ಳಲಾಗಿದೆ. ಪಾಕಿಸ್ಥಾನ ಸೈಬರ್ ಫೋರ್ಸ್ ಮತ್ತು ಪಾಕಿಸ್ಥಾನ ಮೂಲದ ಪಿಟಿಐ ಸೋಶಲ್ ಮೀಡಿಯಾ ಆ್ಯಕ್ಟಿವಿಟಿ ಇವುಗಳನ್ನು ಸೃಷ್ಟಿಸಿದೆ ಎಂದು ವರದಿ ಹೇಳಿದೆ.
ಕೆಲವು ಹ್ಯಾಶ್ಟ್ಯಾಗ್ಗಳನ್ನು ದ್ವೇಷದ ವಿಷಯಗಳನ್ನು ಹುಟ್ಟುಹಾಕಲು ಬಳಸಲಾಗುತ್ತಿತ್ತು ಮತ್ತು ಇತರವುಗಳನ್ನು ಪ್ರಚಾರದ ವೀಡಿಯೊಗಳು, ತಪ್ಪು ಮಾಹಿತಿ ಮತ್ತು ಪೊಲೀಸ್ ಕ್ರೂರತೆಯನ್ನು ಪೋಸ್ಟ್ ಮಾಡಲು ಬಳಸಲಾಗುತ್ತಿತ್ತು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.