ಪಾಕಿಸ್ಥಾನ ಧರ್ಮಾಂಧ ದೇಶ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮುಸ್ಲಿಮರನ್ನು ಹೊರತುಪಡಿಸಿ ಉಳಿದವರನ್ನು ಅಲ್ಲಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡಿಕೊಳ್ಳಲಾಗುತ್ತದೆ, ಧಾರ್ಮಿಕ ಕಿರುಕುಳಕ್ಕೆ ಒಳಪಡಿಸಲಾಗುತ್ತದೆ ಎಂಬುದು ರಹಸ್ಯವಾಗಿಯೇನೂ ಉಳಿದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ವರ್ಣೀಯರ ವಿರುದ್ಧ ಯಾವ ರೀತಿಯ ತಾರತಮ್ಯ ನಡೆಯುತ್ತಿತ್ತೋ ಅದೇ ರೀತಿಯ ತಾರತಮ್ಯ, ದೌರ್ಜನ್ಯ ಪಾಕಿಸ್ಥಾನದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿದೆ.
ಎಲ್ಲರಿಗೂ ಗೊತ್ತಿರುವ ಈ ಸತ್ಯವನ್ನು ಪಾಕಿಸ್ಥಾನದ ದಿಗ್ಗಜ ಕ್ರಿಕೆಟಿಗ ಶೋಯೆಬ್ ಅಖ್ತರ್ ಮತ್ತೊಮ್ಮೆ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಅಲ್ಲಿನ ಕ್ರಿಕೆಟ್ ತಂಡದಲ್ಲಿ ಇದ್ದ ಅಲ್ಪಸಂಖ್ಯಾತ ಆಟಗಾರರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎಂಬುದನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ‘ಗೇಮ್ ಆನ್ ಹೈ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಕ್ರಿಕೆಟಿಗನೊಬ್ಬ ತನ್ನ ಧರ್ಮದ ಕಾರಣಕ್ಕೆ ಅನುಭವಿಸಿದ ನೋವನ್ನು, ಸಹಿಸಿಕೊಂಡ ದೌರ್ಜನ್ಯವನ್ನು ಹೇಳಿಕೊಂಡಿದ್ದಾರೆ.
ದನಿಶ್ ಕನೇರಿಯಾ, ಪಾಕಿಸ್ಥಾನ ಕ್ರಿಕೆಟ್ ತಂಡ ಕಂಡ ಎರಡನೇ ಹಿಂದೂ ಆಟಗಾರ. ಇತರರಿಗಿಂತ ಅತ್ಯುತ್ತಮ ಆಟಗಾರನಾಗಿದ್ದರೂ ಆತ ತನ್ನ ಸಹವರ್ತಿ ಆಟಗಾರರಿಂದ ಹೇಗೆ ತಾರತಮ್ಯಕ್ಕೆ ಒಳಗಾಗುತ್ತಿದ್ದ ಎಂಬುದನ್ನು ಶೋಯೆಬ್ ವಿವರಿಸಿದ್ದಾರೆ. ಕನೇರಿಯಾ ಅವರು ಪಾಕಿಸ್ಥಾನದ ಪರವಾಗಿ ಅತ್ಯಧಿಕ ವಿಕೆಟ್ ಕಬಳಿಸಿದ ಸ್ಪಿನ್ನರ್ ಆಗಿದ್ದಾರೆ. ಆದರೆ ಅಂತಿಮವಾಗಿ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಜೀವಮಾನದ ನಿಷೇಧಕ್ಕೆ ಒಳಪಡಿಸಲಾಗಿದೆ.
ಶೋಬೆಯ್ ಅವರು ಕನೇರಿಯಾ ಅವರು ಅನುಭವಿಸಿದ ತಾರತಮ್ಯವನ್ನು ವಿವರಿಸಿದ್ದಾರೆ. “ಡೈನಿಂಗ್ ಟೇಬಲ್ ಹತ್ತಿರ ಕನೇರಿಯಾ ಅವರನ್ನು ಕೂರಿಸಲು ಪಾಕ್ ಆಟಗಾರರು ಹಿಂದೇಟು ಹಾಕುತ್ತಿದ್ದರು. ಇದಕ್ಕಾಗಿ ನಾನು ಇಬ್ಬರು ಮೂವರು ಆಟಗಾರರ ಜೊತೆ ಜಗಳವನ್ನೂ ಮಾಡಿದ್ದೆ. ಆತ ಹಿಂದೂ ಆದರೂ ಕ್ರಿಕೆಟ್ ಆಡುತ್ತಾನೆ ಎಂದಿದ್ದೆ. ಅದೇ ಹಿಂದೂ ನಮ್ಮನ್ನು ಟೆಸ್ಟ್ ಸಿರೀಸ್ ಗೆಲ್ಲುವಂತೆ ಮಾಡಿದ್ದ. ಕೆಲವರು ಆತ ಯಾಕೆ ನಮ್ಮ ಜೊತೆ ಊಟ ಮಾಡುತ್ತಿದ್ದಾನೆ ಎಂದೂ ಕೇಳಿದ್ದರೂ. ಅವರಿಗೆ ನಿಮ್ಮನ್ನು ಇಲ್ಲಿಂದ ಎತ್ತಿ ಬಿಸಾಕುತ್ತೇನೆ ಎಂದು ನಾನು ಗದರಿಸಿದ್ದೆ. ಕ್ಯಾಪ್ಟನ್ ಆದವರೂ ಅವರದ್ದೇ ಮಿತಿಯಲ್ಲಿ ಇರಬೇಕು. ಇಂಗ್ಲೇಡಿನಲ್ಲಿ ದನಿಶ್ ಮತ್ತು ಶಮಿ ನಮಗೆ ಗೆಲುವನ್ನು ಧಕ್ಕಿಸಿಕೊಟ್ಟಿದ್ದು” ಎಂದಿದ್ದಾರೆ. ದನೀಶ್ ಕನೇರಿಯಾ 276 ಅಂತರರಾಷ್ಟ್ರೀಯ ವಿಕೆಟ್ಗಳನ್ನು ಮತ್ತು 1000 ಕ್ಕೂ ಹೆಚ್ಚು ಪ್ರಥಮ ದರ್ಜೆ ವಿಕೆಟ್ ಕಬಳಿಸಿದ್ದಾರೆ. ಆಡಿದ 61 ಟೆಸ್ಟ್ ಪಂದ್ಯಗಳಲ್ಲಿ ಕನೆರಿಯಾ 261 ವಿಕೆಟ್ ಪಡೆದುಕೊಂಡಿದ್ದಾರೆ. ಆದರೆ ಪಾಕಿಸ್ಥಾನ ಈ ಉದಯೋನ್ಮುಖ ಕ್ರಿಕೆಟ್ ತಾರೆಯ ವೃತ್ತಿಜೀವನವನ್ನು ಹಾಳುಮಾಡಿತು, ಧರ್ಮದ ಕಾರಣಕ್ಕಾಗಿ ಅವರನ್ನು ಕ್ರೂರವಾಗಿ ಅವಮಾನಿಸಿತು.
ಶೋಯೆಬ್ ಅಖ್ತರ್ ಯೋಸುಫ್ ಯೋಹಾನಾ (ಈಗ ಮೊಹಮ್ಮದ್ ಯೂಸುಫ್) ಬಗ್ಗೆಯೂ ಮಾತನಾಡಿದ್ದಾರೆ. ಮೂಲತಃ ಇವರು ಕ್ರಿಶ್ಚಿಯನ್. ಸಹವರ್ತಿ ಆಟಗಾರರಿಂದ, ಆಡಳಿತದಿಂದ ಮತ್ತು ಜನರಿಂದ ತೀವ್ರ ತಾರತಮ್ಯಕ್ಕೆ ಒಳಗಾದ ಬಳಿಕ ಇವರು ಇಸ್ಲಾಂಗೆ ಮತಾಂತರಗೊಂಡಿದ್ದರು. ಅವರ ನಿರ್ಧಾರವನ್ನು ಅವರ ಪೋಷಕರು ತೀವ್ರವಾಗಿ ವಿರೋಧಿಸಿದ್ದರು. ಆದರೆ ಅವರ ಬಳಿ ಮತಾಂತರವಾಗದೆ ಬೇರೆ ಆಯ್ಕೆಗಳು ಇರಲಿಲ್ಲ. ಕಾರ್ಯಕ್ರಮದಲ್ಲಿ ಇದ್ದ ಇನ್ನೊಬ್ಬ ಕ್ರಿಕೆಟಿಗ ರಶೀದ್ ಲತೀಫ್ ಮಾತನಾಡಿ, “ಯುಸೋಫ್ ಯೋಹಾನ ಅವರನ್ನು ತೀವ್ರವಾಗಿ ಪೀಡಿಸಲಾಗುತ್ತಿತ್ತು. ಅವರು ನಿಜಕ್ಕೂ ದೇವರು ಒಟ್ಟ ಆಟಗಾರನಾಗಿದ್ದರು” ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶೋಯೆಬ್, “ಯೂಸುಫ್ 12 ಸಾವಿರ ರನ್ ಗಳಿಸಿದ್ದಾರೆ. ಆದರೆ, ನಾವೆಂದೂ ಅವರನ್ನು ಗಾರ್ಡ್ ಮಾಡಲಿಲ್ಲ” ಎಂದಿದ್ದಾರೆ.
ಭಾರತದ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಪ್ರಶ್ನಿಸುವ ಎಲ್ಲರಿಗೂ ದನೀಶ್ ಕನೇರಿಯಾ ಪ್ರಕರಣವು ಜ್ಞಾಪನೆಯಾಗಿರಬೇಕು. ಭಾರತದಲ್ಲಿ ಅಪಾರ ಸಂಖ್ಯೆಯ ಅಲ್ಪಸಂಖ್ಯಾತ ಆಟಗಾರರು ಇದ್ದಾರೆ. ಅವರನ್ನು ಸಮಸ್ತ ಭಾರತೀಯರು ಉನ್ನತ ಮಟ್ಟದಲ್ಲಿ ಇಟ್ಟು ಗೌರವಿಸುತ್ತಾರೆ. ತಾರತಮ್ಯದ ಮಾತು ಈ ದೇಶದಲ್ಲಿ ಬರಲು ಸಾಧ್ಯವೇ ಇಲ್ಲ. ಖಂಡಿತವಾಗಿಯೂ, ಭಾರತವನ್ನು ಪಾಕಿಸ್ಥಾನದೊಂದಿಗೆ ಹೋಲಿಸುವುದು ನಾಚಿಕೆಗೇಡಿನ ಪ್ರತಿಪಾದನೆಯಾಗಿದೆ. ಸೈಯದ್ ಕಿರ್ಮಾನಿಯಿಂದ ಹಿಡಿದು ಮೊಹಮ್ಮದ್ ಶಮಿವರೆಗೆ, ಅಜರುದ್ದೀನ್ (ನಾಯಕನೂ ಆಗಿದ್ದರು), ಯೂಸುಫ್ ಮತ್ತು ಇರ್ಫಾನ್ ಪಠಾಣ್, ಜಹೀರ್ ಖಾನ್ ನಿಂದ ಮೊಹಮ್ಮದ್ ಕೈಫ್ ವರೆಗೆ, ಭಾರತವು ಎಂದಿಗೂ ತಮ್ಮ ಧರ್ಮದ ಆಧಾರದ ಮೇಲೆ ಆಟಗಾರರ ವಿರುದ್ಧ ತಾರತಮ್ಯ ಮಾಡಿಲ್ಲ. ಹರ್ಭಜನ್ ಸಿಂಗ್, ನವಜೋತ್ ಸಿಂಗ್ ಸಿಧು, ಯುವರಾಜ್ ಸಿಂಗ್, ಬಿಶನ್ ಸಿಂಗ್ ಬೇಡಿ ಮುಂತಾದವರು ಭಾರತೀಯ ತಂಡದ ಸಿಖ್ ಕ್ರಿಕೆಟಿಗರಾಗಿದ್ದಾರೆ. ತನ್ನ ಅಲ್ಪಸಂಖ್ಯಾತ ಆಟಗಾರರನ್ನು ಕಾಫಿರ್ ಎಂದು ಮೂದಲಿಸುವ ಪಾಕಿಸ್ಥಾನಿಯರು ಭಾರತಕ್ಕೆ ಯಾವ ರೀತಿಯಲ್ಲೂ ಹೋಲಿಕೆಯಲ್ಲ.
ಪಾಕಿಸ್ಥಾನಕ್ಕೆ ಹೋಲಿಸಿದರೆ ಬಾಂಗ್ಲಾದೇಶವೇ ಉತ್ತಮ. ಇಸ್ಲಾಂ ರಾಷ್ಟ್ರವಾದರೂ ಅಲ್ಲಿ ಪ್ರಸ್ತುತ ಸೌಮ್ಯ ಸರ್ಕಾರ್ ಮತ್ತು ಲಿತಾನ್ ದಾಸ್ ಎಂಬ ಇಬ್ಬರು ಬಂಗಾಳಿ ಹಿಂದೂ ಕ್ರಿಕೆಟ್ ಆಟಗಾರರು ಇದ್ದಾರೆ. ಈ ಹಿಂದೆ ಅಲ್ಲಿ ಅಲೋಕ್ ಕಪಾಲಿ ಮತ್ತು ತಪಸ್ ಬೈಸಾ ಎಂಬ ಆಟಗಾರರು ಇದ್ದರು. ಆದರೆ ಅವರು ಧರ್ಮದ ಕಾರಣಕ್ಕೆ ತಾರತಮ್ಯವನ್ನು ಎದುರಿಸಿಲ್ಲ.
ಅಂತಾರಾಷ್ಟ್ರೀಯ ಸಮುದಾಯ ಶೋಯೆಬ್ ಅಖ್ತರ್ ಮತ್ತು ರಶೀದ್ ಲತೀಫ್ ಹೇಳಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ದೇಶದೊಂದಿಗೆ ಕ್ರಿಕೆಟ್ ಆಡುವುದು ಬಹಿಷ್ಕರಿಸಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.