ಕಲ್ಲಡ್ಕ : ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರು ಸಂತೋಷವನ್ನು ಅನುಭವಿಸಿ ಮಕ್ಕಳಿಗೆ ಆನಂದದ ಕಲಿಕೆಗೆ ನೆರವಾಗಬೇಕು. ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು ಎಂದು ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾಧ್ಯಕ್ಷ, ತುಳುನಾಡ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿರುವ ಪ್ರೊ.ಎಂ. ಬಿ. ಪುರಾಣಿಕ್ ಹೇಳಿದರು. ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಭಾಂಗಣದಲ್ಲಿ ವಿದ್ಯಾಭಾರತಿ ದ.ಕ ಜಿಲ್ಲಾ ಶಿಕ್ಷಕರ ಶೈಕ್ಷಣಿಕ ಸಹಮಿಲನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಆಧುನಿಕ ಶಿಕ್ಷಣ ಕ್ರಮದಲ್ಲಿ ಮಕ್ಕಳುಗಳಿಸುವ ಅಂಕಕ್ಕೆ ಪ್ರಾಧ್ಯಾನ್ಯತೆ ಬಂದಿದೆ ವ್ಯಕ್ತಿತ್ವದ ಅರಳುವಿಕೆಗೆ ಬೇಕಾದ ಶಿಕ್ಷಣದ ಕೊರತೆ ಇದೆ. ವಿದ್ಯಾಭಾರತಿ ನಡೆಸುವ ಸಂಸ್ಥೆಗಳಲ್ಲಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಒತ್ತು ನೀಡಲಾಗಿದೆ. ಪಂಚಮುಖಿ ಶಿಕ್ಷಣದ ಮೂಲಕ ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ವಿದ್ಯಾಭಾರತಿ ಮಧ್ಯಕ್ಷೇತ್ರೀಯ ಅಧ್ಯಕ್ಷ ಶಿವಯ್ಯ ಮಠಪತಿ ಸೇಡಂ ಪ್ರಸ್ತಾವನಗೈದು ವಿದ್ಯಾಭಾರತಿ ಬೆಳೆದು ಬಂದ ಬಗೆ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು. ದೇಶದ ಪರಂಪರೆಯನ್ನು ತಿಳಿಸುವ ಸಂಸ್ಕಾರ ಭರಿತ ಶಿಕ್ಷಣವನ್ನು ವಿದ್ಯಾಭಾರತಿಯಿಂದ ಯೋಜಿಸಲಾಗಿದೆ. ಇಂದಿನ ಶಿಕ್ಷಣದ ಅವ್ಯವಸ್ಥೆಯ ಮಧ್ಯೆ ವಿದ್ಯಾಭಾರತಿ ಶಾಲೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ಪೋಷಕರ ಸಹಕಾರವು ಅಗತ್ಯ ಎಂದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ|| ಪ್ರಭಾಕರ ಭಟ್ ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಸಹಕಾರ್ಯದರ್ಶಿ ವಸಂತಮಾಧವ, ಮೈತ್ರೇಯಿ ಗುರುಕುಲದ ಉಮೇಶ ಹೆಗ್ಡೆ ವಿಶೇಷ ಉಪನ್ಯಾಸ ನೀಡಿದರು. ವಿದ್ಯಾಭಾರತಿ ಜಿಲ್ಲಾ ಉಪಾಧ್ಯಕ್ಷ ವೆಂಕಟರಮಣ ರಾವ್ ಕಡಬ ಸ್ವಾಗತಿಸಿ, ಕಾರ್ಯದರ್ಶಿ ಲೋಕಯ್ಯ ಡಿ. ವಂದಿಸಿದರು. ಶ್ರೀಮತಿ ಸೌಮ್ಯ ನಿರೂಪಿಸಿದರು.
ಆರಂಭದಲ್ಲಿ ಸರಸ್ವತಿ ವಂದನೆ, ದೀಪ ಪ್ರಜ್ವಲನ ಹಾಗೂ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಅತಿಥಿಗಳು ಉದ್ಘಾಟಿಸಿದರು. ದ.ಕ ಜಿಲ್ಲಾ 53 ಶಾಲೆಗಳಿಂದ 552 ಶಿಕ್ಷಕರು 90 ಶಿಕ್ಷಕೇತರರು ಮತ್ತು 52 ಆಡಳಿತ ಮಂಡಳಿ ಸದಸ್ಯರು ಒಟ್ಟು 594 ಜನರು ಭಾಗವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.