ನವದೆಹಲಿ: ಯುದ್ಧದಿಂದ ಬಳಲುತ್ತಿರುವ ಸಿರಿಯಾಗೆ ಭಾರತ ಹಲವು ವಿಧದಲ್ಲಿ ಸಹಾಯ ಹಸ್ತವನ್ನು ಚಾಚುತ್ತಿದೆ. ಈಗಾಲೇ ಔಷಧಿಗಳು ಮತ್ತು ಆಹಾರ ಸರಬರಾಜು ಮಾಡುತ್ತಿರುವ ಭಾರತ, ಈಗ ಅಲ್ಲಿನ ಶಿಕ್ಷಣ ಕ್ಷೇತ್ರಕ್ಕೂ ಮಹತ್ವ ಕೊಡುಗೆಗಳನ್ನು ನೀಡಲು ಮುಂದಾಗಿದೆ.
ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ, ಸ್ನಾತಕೋತ್ತರ ಕೋರ್ಸ್ಗಳನ್ನು ಮತ್ತು ಪಿಎಚ್ಡಿ ಅಧ್ಯಯನವನ್ನು ಮಾಡುತ್ತಿರುವ ಸಿರಿಯಾದ 1,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಭಾರತ ನೀಡುತ್ತದೆ.
ಭಾರತದಲ್ಲಿ ಕಲಿಯುವ ಸಿರಿಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿರುವ ಕ್ರಮವು ನಿಜಕ್ಕೂ ಮಹತ್ವದ್ದಾಗಿದ್ದು, ಇದು ಭವಿಷ್ಯದಲ್ಲಿ ಆಫ್ರಿನ್ ಖಂಡದ ಯಶೋಗಾಥೆಗಳಿಗೆ ಭಾರತದ ಸಂಪರ್ಕವನ್ನು ನೀಡಬಹುದು. ಈಗಾಗಲೇ ಈ ಖಂಡದ ಹಲವಾರು ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳು, ಸಚಿವರುಗಳು ಮತ್ತು ಉಪಾಧ್ಯಕ್ಷರುಗಳು ಭಾರತದಲ್ಲಿ ವಿದ್ಯಾಭ್ಯಾಸವನ್ನು ಮತ್ತು ತರಬೇತಿಯನ್ನು ಪಡೆದುಕೊಂಡವರಾಗಿದ್ದಾರೆ.
ಸಿರಿಯಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುವ ಭಾರತದ ನಿರ್ಧಾರವನ್ನು ಭಾರತದಲ್ಲಿನ ಸಿರಿಯಾ ರಾಯಭಾರಿ ರಿಯಾಸ್ ಅಬ್ಬಾಸ್ ಅತೀವವಾಗಿ ಶ್ಲಾಘಿಸಿದ್ದಾರೆ.
“ಸಿರಿಯಾಗೆ ಭಾರತವು ಹಲವು ವಿಧಗಳಲ್ಲಿ ಸಹಾಯ ಮಾಡುತ್ತಿದೆ. ಔಷಧಿ, ಆಹಾರಗಳ ವಿಷಯದಲ್ಲಿ ಭಾರತ ನಮಗೆ ಸಹಾಯ ಮಾಡುತ್ತದೆ. ಇದೀಗ ಮೋದಿ ಸರ್ಕಾರವು ವಿದ್ಯಾರ್ಥಿವೇತನದ ಮೂಲಕ ನಮ್ಮ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ” ಎಂದಿದ್ದಾರೆ.
ಸಿರಿಯಾದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಆಗಮಿಸುತ್ತಾರೆ. ಇಂತಹ ವಿದ್ಯಾರ್ಥಿಗಳು ಮುಂದೊಂದು ದಿನ ಸಿರಿಯಾದ ನಾಯಕರುಗಳಾಗಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.