ನವದೆಹಲಿ: ಪ್ರತಿಯೊಂದು ವಹಿವಾಟಿಗೂ ಇಂದು ಪಾನ್ ಕಾರ್ಡ್ ಅತ್ಯಗತ್ಯ. ತೆರಿಗೆ ಪಾವತಿಸಲು, ಬ್ಯಾಂಕ್ ಖಾತೆ ತೆರೆಯಲು, 50 ಸಾವಿರಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆಸಲು ಪಾನ್ ಬೇಕೇ ಬೇಕು. ಆದರೆ ಪಾನ್ ಕಾರ್ಡ್ ಪಡೆಯುವ ಪ್ರಕ್ರಿಯೆ ತುಂಬಾ ಕಿರಿಕಿರಿ, ಒಂದು ಸಾಹಸ ಎಂದರೂ ಅಚ್ಚರಿಯಿಲ್ಲ. ಆದರೀಗ ಕೇವಲ ಹತ್ತು ನಿಮಿಷದಲ್ಲಿ ಪಾನ್ ಕಾರ್ಡ್ ದೊರೆಯುವಂತೆ ಮಾಡುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.
ಕೇವಲ ಹತ್ತು ನಿಮಿಷಗಳಲ್ಲಿ ರಿಯಲ್ ಟೈಂ ಆಧಾರದಲ್ಲಿ ಉಚಿತವಾಗಿ ಪಾನ್ ಕಾರ್ಡ್ ವಿತರಣೆ ಮಾಡಲು ದಾಯ ತೆರಿಗೆ ಇಲಾಖೆಯು ಕ್ರಮಕೈಗೊಂಡಿದೆ. ಇನ್ನು ಕೆಲವೇ ವಾರಗಳಲ್ಲಿ ಇ-ಪಾನ್ ವಿತರಣೆ ಸೌಲಭ್ಯ ಆರಂಭವಾಗಲಿದೆ. ಈಗಾಗಲೇ ಇ-ಪಾನ್ ಕಾರ್ಡ್ಗಳನ್ನು ಪ್ರಾಯೋಗಿಕವಾಗಿ ವಿತರಿಸಲಾಗಿದ್ದು, ಯಶಸ್ವಿಯಾಗಿದೆ. ಎಂಟು ದಿನಗಳಲ್ಲಿ 62,000 ಇ-ಪಾನ್ ಕಾರ್ಡ್ಗಳನ್ನು ವಿತರಿಸಲಾಗಿದೆ.
ಆದಾಯ ತೆರಿಗೆ ಇಲಾಖೆಯು ಆನ್ಲೈನ್ ಇನ್ಸ್ಟಾಂಟ್ ಪ್ಯಾನ್ ಕಾರ್ಡ್ (ಇಪಿಎಎನ್) ವ್ಯವಸ್ಥೆಯನ್ನು ಆರಂಭಿಸಿದೆ. ಬಳಕೆದಾರರು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಗೆ ಹೋಗಿ ಲಾಗಿನ್ ಆಗಬೇಕು. ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಬೇಕು. ಇದಕ್ಕಾಗಿ ಪ್ರತ್ಯೇಕವಾಗಿ ದಾಖಲೆಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಆಧಾರ್ ಕಾರ್ಡ್ನಲ್ಲಿರುವ ಮಾಹಿತಿಯನ್ನೇ ವ್ಯಕ್ತಿಯ ಮೂಲ ಮಾಹಿತಿಗಳಾಗಿ ಪರಿಗಣಿಸಲಾಗುತ್ತದೆ.
ಇ-ಪಾನ್ನ ಕಾರ್ಡ್ನಲ್ಲಿ ಕ್ಯುಆರ್ ಕೋಡ್ ಇರಲಿದ್ದು, ಇದು ವ್ಯಕ್ತಿಯ ಮೂಲ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಇ-ಪಾನ್ ಕಾರ್ಡ್ಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಅದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಇಲಾಖೆಯು ಇನ್ಸ್ಟ್ಂಟ್ ಇ-ಪ್ಯಾನ್ ವ್ಯವಸ್ಥೆಯನ್ನು ನಿಗದಿತ ಸಮಯಕ್ಕೆ ಮಾತ್ರ ನಿಗದಿಪಡಿಸಿದೆ.
ಇ-ಪ್ಯಾನ್ ಕಾರ್ಡ್ ಪಡೆಯಲು ಬಳಕೆದಾರರು ತಮ್ಮ ಸಹಿಯಯನ್ನು ಸ್ಕ್ಯಾನ್ ಮಾಡಿ JPEG ಮಾದರಿಯಲ್ಲಿ ಒದಗಿಸಬೇಕು. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ವೈಯಕ್ತಿಯ ತೆರಿಗೆ ಪಾವತಿದಾರರಿಗೆ ಮಾತ್ರ ಸಿಗಲಿದೆ. ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವುದರ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.