
ನವದೆಹಲಿ: ಸತತ ಐದನೇ ದಿನವು ಮಂಗಳವಾರ ಪೆಟ್ರೋಲ್ ಬೆಲೆ ಇಳಿಮುಖವಾಗಿದೆ, ಆದರೆ ಡೀಸೆಲ್ ಬೆಲೆ ಸೋಮವಾರ ಸ್ವಲ್ಪ ಕುಸಿದಿದ್ದು, ನಂತರದಲ್ಲಿ ಯಾವುದೇ ಬದಲಾವಣೆಗಳನ್ನು ಕಂಡಿಲ್ಲ.
ದೆಹಲಿ, ಕೋಲ್ಕತಾ, ಮುಂಬಯಿ ಮತ್ತು ಚೆನ್ನೈಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ 5 ಪೈಸೆ ಇಳಿಕೆ ಕಂಡಿದೆ.
ಇಂಡಿಯನ್ ಆಯಿಲ್ ವೆಬ್ಸೈಟ್ನ ಪ್ರಕಾರ, ದೆಹಲಿಯಲ್ಲಿ ಲೀಟರ್ಗೆ 72.60 ರೂಪಾಯಿ, ಕೋಲ್ಕತಾದಲ್ಲಿ ಲೀಟರ್ಗೆ 75.32 ರೂಪಾಯಿ, ಮುಂಬಯಿಯಲ್ಲಿ ಲೀಟರ್ಗೆ 65.75 ರೂಪಾಯಿ ಮತ್ತು ಚೆನ್ನೈನಲ್ಲಿ ಲೀಟರ್ಗೆ 78.28 ರೂಪಾಯಿ ಆಗಿದೆ.
ಪರಿಷ್ಕೃತ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ. ನಿತ್ಯ ಇಂಧನ ಬೆಲೆಗಳು ಪರಿಷ್ಕರಣೆಗೊಳ್ಳುತ್ತವೆ.
ಕಳೆದ ಐದು ದಿನಗಳಿಂದ ಪೆಟ್ರೋಲ್ ಬೆಲೆ ಸತತವಾಗಿ ಇಳಿಮುಖವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


