ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ತಮ್ಮ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಟ್ವೀಟ್ ಮಾಡಿರುವ ನೆತನ್ಯಾಹು, “ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು” ಎಂದಿದ್ದಾರೆ. ಇದರೊಂದಿಗೆ ತಾವು ಮತ್ತು ಮೋದಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
I wish my friend Prime Minister @narendramodi and the people of India a happy #Diwali! 🇮🇱🇮🇳 pic.twitter.com/LotQREV8bs
— Benjamin Netanyahu (@netanyahu) October 27, 2019
ಇಸ್ರೇಲ್ನ ದೀರ್ಘಕಾಲದ ನಾಯಕನಾಗಿರುವ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ಮೋದಿಯೊಂದಿಗೆ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಭಾರತದ ಪ್ರತಿ ಹಬ್ಬಕ್ಕೂ ಶುಭ ಕೋರುವ ಪದ್ಧತಿಯನ್ನು ಅವರು ರೂಢಿಸಿಕೊಂಡಿದ್ದಾರೆ.
ಭಾರತ ಮತ್ತು ಇಸ್ರೇಲ್ ಆರ್ಥಿಕ, ಮಿಲಿಟರಿ ಮತ್ತು ಕಾರ್ಯ ತಾಂತ್ರಿಕ ಸಂಬಂಧವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಲಿಷ್ಠ ಗೊಳಿಸುತ್ತೇವೆ. ಇತ್ತೀಚಿಗೆ ಇಸ್ರೇಲಿನಲ್ಲಿ ನಡೆದ ಚುನಾವಣೆಯ ಪ್ರಚಾರ ಕಾರ್ಯದ ವೇಳೆ ನೆತನ್ಯಾಹು ಅವರು ಮೋದಿಯೊಂದಿಗೆ ಇದ್ದ ಬ್ಯಾನರ್ಗಳು ಇಸ್ರೇಲ್ ನಲ್ಲಿ ರಾರಾಜಿಸಿದವು.
ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೆತನ್ಯಾಹು ಅವರು ಪ್ರಧಾನಿ ಮೋದಿಗೆ ವಿಡಿಯೋ ಸಂದೇಶವನ್ನು ನೀಡಿ, ಉಭಯ ದೇಶಗಳ ನಡುವಣ ಪ್ರಾಮಾಣಿಕ ಸಂಬಂಧದ ಬಗ್ಗೆ ಬಣ್ಣಿಸಿದ್ದರು.
ಪ್ರಸ್ತುತ ಇಸ್ರೇಲ್ ಮತ್ತು ಭಾರತದ ಸಂಬಂಧ ಉನ್ನತಮಟ್ಟಕ್ಕೆ ಏರುತ್ತಿದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ ದೇಶಕ್ಕೆ ಭೇಟಿ ನೀಡಿದ್ದರು. ಇದು ಭಾರತೀಯ ಪ್ರಧಾನಿಯೊಬ್ಬರು ನೀಡಿದ ಮೊದಲ ಇಸ್ರೇಲ್ ಭೇಟಿಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.