ಸ್ಟಾಕ್ಹೋಮ್: 2024 ರ ವೇಳೆಗೆ ಸುಲಲಿತ ವ್ಯಾಪಾರ ಪಟ್ಟಿಯಲ್ಲಿ ಭಾರತವನ್ನು ಟಾಪ್ 25 ದೇಶಗಳಲ್ಲಿ ಒಂದನ್ನಾಗಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ಹೇಳಿದ್ದಾರೆ.
“ನಮ್ಮ ಮೊದಲ ಗುರಿ ಅಗ್ರ 50 ದೇಶಗಳಲ್ಲಿ ಸ್ಥಾನ ಪಡೆಯುವುದು ಮತ್ತು ನಂತರ ಅಂತಿಮವಾಗಿ ಪಟ್ಟಿಯಲ್ಲಿ ಅಗ್ರ 25 ದೇಶಗಳಲ್ಲಿ ಸ್ಥಾನ ಪಡೆಯುವುದು. ಮುಂದುವರಿದ ಆರ್ಥಿಕತೆಯನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ದೇಶಗಳು ಮಾತ್ರ ಅಗ್ರ 25 ರಲ್ಲಿ ಸೇರಿವೆ. ಭಾರತದ ಗುರಿ ಆ ಅಗ್ರ ಪಟ್ಟಿಯ ಭಾಗವಾಗುವುದು ” ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ, ದೊಡ್ಡ ಪ್ರಮಾಣದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ ಆರ್ಥಿಕ ನೀತಿಗಳನ್ನು ಸುಧಾರಿಸುವ ಅವಶ್ಯಕತೆಯನ್ನು ಅವರು ಮನಗಂಡರು, ಅದಕ್ಕೆ ಅನುಗುಣವಾಗಿ ಅವರು ಸುಧಾರಣೆಗಳನ್ನು ಎಂದು ಪಿಯೂಶ್ ಹೇಳಿದ್ದಾರೆ.
“ನಮ್ಮ ಸರ್ಕಾರದ ಮೊದಲ ಕೆಲವು ವರ್ಷಗಳಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಲಾಗಿಲ್ಲ. 2016 ರ ನಂತರ ನಾವು ಆರ್ಥಿಕತೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆವು. ವಿಶ್ವಬ್ಯಾಂಕ್ ಆ ನಿರ್ಧಾರಗಳ ಪರಿಣಾಮವನ್ನು ಬಗ್ಗೆ ನಿರ್ಣಯಿಸಲು ಪ್ರಾರಂಭಿಸಿದ ಬಳಿಕ, ಭಾರತವು ಸುಲಲಿತ ವ್ಯಾಪಾರ ಪಟ್ಟಿಯಲ್ಲಿ ಏರಿಕೆಯನ್ನು ಕಾಣಲು ಪ್ರಾರಂಭಿಸಿತು” ಎಂದಿದ್ದಾರೆ.
2014ರಲ್ಲಿ ಭಾರತವು ಸುಲಲಿತ ವ್ಯಾಪಾರ ಪಟ್ಟಿಯಲ್ಲಿ 142 ನೇ ಸ್ಥಾನದಲ್ಲಿತ್ತು, ಈಗ ಅದು 63ನೇ ಸ್ಥಾನದಲ್ಲಿದೆ. ಇದು ಮಹತ್ವದ ಜಿಗಿತ ಎಂದು ಗೋಯಲ್ ಹೇಳಿದ್ದಾರೆ.
ಪ್ರಸ್ತುತ ಕೇಂದ್ರ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸ್ವೀಡನ್ ಪ್ರವಾಸದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.