ಅಯೋಧ್ಯಾ: ‘ದೀಪೋತ್ಸವ’ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ಶನಿವಾರ ಅಯೋಧ್ಯೆಗೆ ಭೇಟಿ ನೀಡಲಿದ್ದು, ಈ ವೇಳೆ ಆ ನಗರದ ಜನರಿಗೆ ಉಡುಗೊರೆಯಾಗಿ 373.69 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ.
15 ಮೆಗಾ ಯೋಜನೆಗಳನ್ನು ಘೋಷಣೆ ಮಾಡಲಿದ್ದು, ಈ ಯೋಜನೆಗಳ ಪೈಕಿ ವೈದ್ಯಕೀಯ ಕಾಲೇಜು, ನಿರಂತರ ನೀರಿನ ಹರಿವನ್ನು ಸಕ್ರಿಯಗೊಳಿಸಲು ರಾಮ್ ಕಿ ಪೈಡಿಯನ್ನು ನಿರ್ಬಂಧಿಸುವುದು, ಗುಪ್ತಾರ್ ಘಾಟ್ನಲ್ಲಿ ಹೊಸ ಘಾಟ್ ನಿರ್ಮಾಣ, ಭಜನ್ ಸಂಧ್ಯಾ ಸ್ಥಳ್, ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಹೆರಿಗೆ ಕೇಂದ್ರ ಮತ್ತು ಅಯೋಧ್ಯೆಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಗೇಟ್ವೇಗಳ ನಿರ್ಮಾಣಗಳು ಸೇರಿವೆ.
2017ರ ಮಾರ್ಚ್ ತಿಂಗಳಿನಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಯೋಗಿ ಆದಿತ್ಯನಾಥ್ ಅವರು, ಅಯೋಧ್ಯೆಯ ಅಭಿವೃದ್ಧಿಯಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುತ್ತಿದ್ದಾರೆ.
ರಸ್ತೆಗಳನ್ನು ಅಗಲಗೊಳಿಸುವುದು, ಘಾಟ್ಗಳು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸುವುದು ಮತ್ತು ದುರಸ್ತಿ ಮಾಡುವುದು ಮತ್ತು ಪವಿತ್ರ ನಗರದಲ್ಲಿನ ವಾಂಟೇಜ್ ಪಾಯಿಂಟ್ಗಳಲ್ಲಿ ಸರಿಯಾದ ಬೆಳಕನ್ನು ಹೊಂದಿರುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಿದ್ದಾರೆ.
ಅಲ್ಲದೇ, ದೀಪೋತ್ಸವದ ಮುಖ್ಯ ಸಮಾರಂಭ ನಡೆಯುವ ರಾಮ ಕಥಾ ಉದ್ಯಾನವನದಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಭಯೋತ್ಪಾದಕ ಸಂಘಟನೆಗಳ ಇತ್ತೀಚಿನ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ವ್ಯವಸ್ಥೆಗಳ ಬಗ್ಗೆ ವಿಶೇಷ ಗಮನ ನೀಡಲಾಗುತ್ತಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಆರ್ ಕೆ ತಿವಾರಿ, ಉಪ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೃಹ ಅವನಿಶ್ ಅವಸ್ಥಿ ಮತ್ತು ಪೊಲೀಸ್ ಜನರಲ್ ಒ ಪಿ ಸಿಂಗ್ ಅವರು ನಗರದಲ್ಲಿ ಪ್ರವಾಸ ಕೈಗೊಂಡು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.