ನವದೆಹಲಿ: ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯೂ ಭಾರತದ ರಫ್ತು ಸಕಾರಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ, ಸೆಪ್ಟೆಂಬರ್ 2019 ಕ್ಕೆ ಕೊನೆಗೊಳ್ಳುವ ಮಧ್ಯ ಹಣಕಾಸು ವರ್ಷದಲ್ಲಿ ಒಟ್ಟಾರೆ ರಾಷ್ಟ್ರೀಯ ರಫ್ತು 267.21 ಬಿಲಿಯನ್ ಯುಎಸ್ ಡಾಲರ್ ಆಗಿದೆ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 1.93 ರಷ್ಟು ಹೆಚ್ಚಾಗಿದೆ.
ಸರಕು ಮತ್ತು ಸೇವೆಯನ್ನು ಒಳಗೊಂಡಂತೆ ಏಪ್ರಿಲ್-ಸೆಪ್ಟೆಂಬರ್ 2019 ರ ಆಮದುಗಳ ಒಟ್ಟಾರೆ ಮೌಲ್ಯ 312.16 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 3.15 ರಷ್ಟು ಕಡಿಮೆಯಾಗಿದೆ.
ವಾಣಿಜ್ಯ ಇಲಾಖೆಯು ಬುಧವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಸರಕುಗಳ ವಲಯದ ವ್ಯಾಪಾರ ಕೊರತೆಯು ಸೆಪ್ಟೆಂಬರ್ 2018 ರಲ್ಲಿ ಇದ್ದ 14.95 ಬಿಲಿಯನ್ ಯುಎಸ್ ಡಾಲರ್ ಹೋಲಿಸಿದರೆ ಈ ವರ್ಷ 10.86 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಸೇವಾ ವಲಯವು 6.24 ಬಿಲಿಯನ್ ಯುಎಸ್ ಡಿಗಳಷ್ಟು ಏರಿಕೆಯಾಗುವ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಒಟ್ಟಾರೆ ವ್ಯಾಪಾರ ಸಮತೋಲನವು 44.95 ಶತಕೋಟಿ ಡಾಲರ್ಗಳಷ್ಟಿದೆ. ಅಂಕಿ ಅಂಶಗಳ ಪ್ರಕಾರ, ಭಾರತವು ಗರಿಷ್ಠವಾಗಿ ರಫ್ತು ಮಾಡಿದ್ದು, ಇದರಲ್ಲಿ ಎಲೆಕ್ಟ್ರಾನಿಕ್ ಸರಕುಗಳು ಅಗ್ರ ಸ್ಥಾನದಲ್ಲಿವೆ, ನಂತರ ಮಸಾಲೆಗಳು, ಕಲ್ಲಿದ್ದಲು, ಸೆರಾಮಿಕ್ ಉತ್ಪನ್ನಗಳು ಮತ್ತು ಔಧಗಳು ಇವೆ. ಕನಿಷ್ಠ ಆಮದು ಎಲೆಕ್ಟ್ರಾನಿಕ್ ಸರಕುಗಳನ್ನು ಕನಿಷ್ಠವಾಗಿ ಆಮದು ಮಾಡಲಾಗಿದೆ ನಂತರ ಸಾವಯವ ಮತ್ತು ಅಜೈವಿಕ ರಾಸಾಯನಿಕಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.