ನವದೆಹಲಿ: ಮುಂದಿನ ಎಪ್ರಿಲ್ ಅಥವಾ ಮೇ ತಿಂಗಳ ವೇಳೆಗೆ ಏಳು ರಫೆಲ್ ಫೈಟರ್ ಜೆಟ್ಗಳು ಭಾರತಕ್ಕೆ ಬರಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗುರುವಾರ ರಾತ್ರಿ ಫ್ರಾನ್ಸ್ನಿಂದ ಅವರು ದೆಹಲಿಗೆ ಮರಳಿದ ಬಳಿಕ ಈ ಹೇಳಿಕೆಯನ್ನು ನೀಡಿದ್ದಾರೆ.
ಮೊದಲ ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ಹಸ್ತಾಂತರಿಸುವ ಸಲುವಾಗಿ ರಕ್ಷಣಾ ಸಚಿವರು ಫ್ರಾನ್ಸ್ಗೆ ಭೇಟಿ ನೀಡಿದ್ದರು.
“ಏಪ್ರಿಲ್ ಅಥವಾ ಮೇ ವೇಳೆಗೆ ಏಳು ರಫೆಲ್ ಜೆಟ್ಗಳು ಭಾರತಕ್ಕೆ ಬರಲಿವೆ. ಈ ಯುದ್ಧ ವಿಮಾನವು 1800 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ನಾನು 1,300 ಕಿ.ಮೀ ವೇಗದಲ್ಲಿ ರಫೆಲ್ ಜೆಟ್ನಲ್ಲಿ ಹಾರಾಟ ನಡೆಸಿದ್ದೇನೆ. ಜೆಟ್ಗಳನ್ನು ಯಶಸ್ವಿಯಾಗಿ ಸ್ವಾಧೀನಪಡಿಸಿಕೊಂಡ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ “ಎಂದು ರಾಜನಾಥ್ ಸಿಂಗ್ ಹೇಳಿದರು.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ 35 ನಿಮಿಷಗಳ ಕಾಲ ಸಭೆ ನಡೆಸಿದ ಅವರು, ಫ್ರಾನ್ಸ್ ಭೇಟಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
“ಶಸ್ತ್ರ ಪೂಜೆ” ಪ್ರದರ್ಶನ ಎಂದು ಪ್ರತಿಪಕ್ಷಗಳು ಟೀಕೆ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವರು, “ಜನರು ಏನು ಬೇಕಾದರೂ ಹೇಳಲಿ. ನನಗೆ ಯಾವುದು ಸರಿ ಅನಿಸಿತ್ತೋ ಅದನ್ನು ನಾನು ಮಾಡಿದ್ದೇನೆ ಮತ್ತು ನಾನು ಮುಂದೆಯೂ ಅದನ್ನು ಮುಂದುವರಿಸುತ್ತೇನೆ. ಇದು ನಮ್ಮ ನಂಬಿಕೆ, ಆ ನಂಬಿಕೆಯಲ್ಲಿ ಸೂಪರ್ ಪವರ್ ಇದೆ, ಇದನ್ನು ನಾನು ಬಾಲ್ಯದಿಂದಲೂ ನಂಬಿದ್ದೇನೆ” ಎಂದಿದ್ದಾರೆ.
“ಎಲ್ಲಾ ಧರ್ಮದ ಜನರು ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಪ್ರಾರ್ಥನೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಬೇರೊಬ್ಬರು ಇದನ್ನು ಮಾಡಿದ್ದರೂ ನಾನು ಆಕ್ಷೇಪಿಸುತ್ತಿರಲಿಲ್ಲ. ಕಾಂಗ್ರೆಸ್ನಲ್ಲೂ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯವಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಭಾರತವು ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಯಾರನ್ನೂ ಬೆದರಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ರಫೇಲ್ ಯುದ್ಧ ವಿಮಾನವನ್ನು ಪ್ರಚೋದಿಸಿದ ನಂತರ, ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯ ಹೆಚ್ಚಾಗುತ್ತದೆ. ಹಾಗೆ ಮಾಡುವ ಮೂಲಕ ನಾವು ಯಾರನ್ನೂ ಬೆದರಿಸಲು ಬಯಸುವುದಿಲ್ಲ. ನಾವು ಯಾರಿಗೂ ಭಯಪಡುವುದಿಲ್ಲ ಅಥವಾ ಬೆದರಿಸುವುದಿಲ್ಲ” ಎಂದು ರಕ್ಷಣಾ ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.