ನವದೆಹಲಿ: ಭಾರತೀಯ ಸೇನೆಯು ತನ್ನ ಹೊಸ M777 ಅಲ್ಟ್ರಾ-ಲೈಟ್ ಹೊವಿಟ್ಜರ್ಗಳನ್ನು ಪೂರ್ವ ಅರುಣಾಚಲ ಪ್ರದೇಶದಲ್ಲಿ ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ. ಪರ್ವತ ಭೂಪ್ರದೇಶದಲ್ಲಿ ನಿಖರವಾದ ಆರ್ಟಿಲ್ಲರಿ ಫೈಯರ್ ಬೆಂಬಲವನ್ನು ಹೊಂದಿರುವ ಇದು ಈ ವಲಯದಲ್ಲಿ ಗೇಮ್ ಚೇಂಚರ್ ಆಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬಲ್ಲದು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಹೆಲಿಕಾಪ್ಟರ್ಗಳಿಗೆ ಸ್ಲಿಂಗ್-ಲೋಡ್ ಮಾಡಬಹುದಾದ ಮತ್ತು ಎತ್ತರದ ಪ್ರದೇಶಗಳಲ್ಲಿ ವೇಗವಾಗಿ ನಿಯೋಜಿಸಬಹುದಾದ 155 ಎಂಎಂ / 39-ಕ್ಯಾಲಿಬರ್ ಹೊವಿಟ್ಜರ್ಗಳನ್ನು ವರ್ಷಾಂತ್ಯದ ವೇಳೆಗೆ ಸೇರ್ಪಡೆಗೊಳಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತವು 2016 ರ ನವೆಂಬರ್ನಲ್ಲಿ ಅಮೆರಿಕಾದಿಂದ 145 ಹೋವಿಟ್ಜರ್ಗಳನ್ನು ಖರೀದಿಸುವ $750 ಮಿಲಿಯನ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು.
“M777 ಗಳು ಪೂರ್ವ ವಲಯದಲ್ಲಿ ಗೇಮ್ ಚೇಂಚರ್ ಆಗಬಲ್ಲವು. ಈ ಹೆಚ್ಚು ಪೋರ್ಟಬಲ್ ಬಂದೂಕುಗಳನ್ನು ಬೋಯಿಂಗ್ ಸಿಎಚ್ -47 ಎಫ್ (ಐ) ಚಿನೂಕ್ ಹೆಲಿಕಾಪ್ಟರ್ಗಳನ್ನು ಬಳಸಿಕೊಂಡು ನಡೆಸುವ ಕಾರ್ಯಚರಣೆಗಳಲ್ಲಿ ಅತ್ಯಂತ ತ್ವರಿತವಾಗಿ ನಿಯೋಜಿಸಬಹುದು ಮತ್ತು ಮರು ನಿಯೋಜಿಸಬಹುದು. ಹೊವಿಟ್ಜರ್ಗಳು ಲಘು ಫಿರಂಗಿ ರೆಜಿಮೆಂಟ್ಗಳ ಭಾಗವಾಗಲಿವೆ ”ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೋವಿಟ್ಜರ್ಗಳು 24-30 ಕಿ.ಮೀ ರೇಂಜ್ ಅನ್ನು ಹೊಂದಿವೆ.
ಚೀನಾದೊಂದಿಗಿನ ಗಡಿ ಪ್ರದೇಶಗಳಲ್ಲಿ ಹೋವಿಟ್ಜರ್ಗಳನ್ನು ನಿಯೋಜಿಸುವುದರಿಂದ ತಾಂತ್ರಿಕ ಚಲನಶೀಲತೆ ತ್ವರಿತವಾಗಲಿದೆ, ಇದು ಉತ್ತಮ ಮೂಲಸೌಕರ್ಯಗಳ ಕಾರಣಕ್ಕಾಗಿ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಸೈನಿಕರನ್ನು ತ್ವರಿತಗತಿಯಲ್ಲಿ ಸಾಗಾಣೆ ಮಾಡಬಲ್ಲವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.