ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ರೆಪೋ ದರವನ್ನು ಕಡಿತ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಐದನೇ ಬಾರಿಗೆ ರೆಪೋ ದರ ಕಡಿತವಾಗಿದೆ. ಕಳೆದ 9 ವರ್ಷಗಳಲ್ಲಿನ ಅತೀ ಕಡಿಮೆ ರೆಪೋ ದರ ಇದಾಗಿದೆ. ಆರ್ಥಿಕತೆಯನ್ನು ದೃಢಗೊಳಿಸುವ ನಿಟ್ಟಿನಲ್ಲಿ ರೆಪೋ ದರವನ್ನು ಕಡಿತ ಮಾಡಲಾಗಿದೆ.
ಆರ್ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ 5.15% ಕ್ಕೆ ಇಳಿಸಿದೆ. ರಿವರ್ಸ್ ರೆಪೊ ದರವನ್ನು 4.9% ಕ್ಕೆ ಇಳಿಸಲಾಗಿದೆ.
ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಿಂದ 5.40% ರಿಂದ 5.15% ಕ್ಕೆ ಇಳಿಸಲಾಗಿದೆ. ರಿವರ್ಸ್ ರೆಪೊ ದರವನ್ನು ಶೇ.4.90ಕ್ಕೆ ಮತ್ತು ಬ್ಯಾಂಕ್ ದರವನ್ನು ಶೇ.5.40ಕ್ಕೆ ಹೊಂದಿಸಲಾಗಿದೆ ಎಂದು ಆರ್ಬಿಐ ಹೇಳಿದೆ.
ಆರ್ಬಿಐ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರವನ್ನು ರೆಪೋ ದರ ಎಂದು ಹೇಳಲಾಗುತ್ತದೆ. ವಾಹನ ಉದ್ಯಮಕ್ಕೆ ಮತ್ತು ಉತ್ಪಾದನಾ ವಲಯಕ್ಕೆ ರೆಪೋ ದರದಿಂದ ಸಾಕಷ್ಟು ಪ್ರಯೋಜನವಾಗಲಿದೆ. ಗೃಹ ಮತ್ತು ವಾಹನದ ಮೇಲಿನ ಬಡ್ಡಿದರ ಇಳಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.