ಸೂರತ್: ಈ ಬಾರಿಯ ನವರಾತ್ರಿಯನ್ನು ದೇಶದ ಉದ್ದಗಲಕ್ಕೂ ಅತ್ಯಂತ ವಿಭಿನ್ನವಾದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಭಾನುವಾರ, ಸೂರತ್ ನಗರದ ವಿಆರ್ ಮಾಲ್ನಲ್ಲಿ ತಂಡವೊಂದು ಹೆಲ್ಮೆಟ್ ಧರಿಸಿಕೊಂಡು ಗರ್ಬಾ ನೃತ್ಯ ಮಾಡಿದೆ. ಸಂಚಾರಿ ನಿಯಮದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಹೆಲ್ಮೆಟ್ ಧರಿಸಿಕೊಂಡು ವಿಭಿನ್ನವಾಗಿ ನೃತ್ಯ ಮಾಡಲಾಗಿದೆ.
“ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಧರಿಸುವುದು ನಮ್ಮ ಸ್ವಯಂ ಸುರಕ್ಷತೆಗೆ ಅತೀ ಮುಖ್ಯವಾಗಿದೆ. ಸಂಚಾರಿ ನಿಯಮವನ್ನು ಎಲ್ಲರೂ ಅನುಸರಿಸಬೇಕು. ಸರ್ಕಾರವು ಈ ನಿಯಮಗಳಿಂದ ಯಾವುದೇ ರೀತಿಯ ಪ್ರಯೋಜನ ಪಡೆಯುವುದಿಲ್ಲ, ಹೀಗಾಗಿ ಇದು ಬಲವಂತದ ಕಾರ್ಯವಾಗಿರಬಾರದು. ನಮ್ಮ ಸ್ವಯಂರಕ್ಷಣೆಗಾಗಿ ನಾವು ಅನುಸರಿಸುತ್ತಿರುವ ನಿಯಮವಾಗಿರಬೇಕು. ಜನರು ಹೆಲ್ಮೆಟ್ ಧರಿಸುವುದನ್ನು ಮತ್ತು ಸೀಟ್ ಬೆಲ್ಟ್ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಅವರು ಹೆಚ್ಚು ವರ್ಷಗಳ ಕಾಲ ಹಬ್ಬಗಳನ್ನು ಆನಂದಿಸಬಹುದು” ಎಂದು ಗರ್ಬಾ ನೃತ್ಯ ಮಾಡಿದ ತಂಡದ ಸದಸ್ಯೆಯೊಬ್ಬರು ಹೇಳಿದ್ದಾರೆ.
ಈ ನಡುವೆ, ಬಾಡಿ ಪೇಂಟ್ ಟ್ಯಾಟೂಗಳು ನವರಾತ್ರಿ ಆಚರಣೆಯ ಒಂದು ಭಾಗವಾಗುತ್ತಿವೆ. ಹಲವು ಯುವಕ, ಯುವತಿಯರು ಸಾಮಾಜಿಕ ಸಮಸ್ಯೆಗಳನ್ನು, ಪ್ರಚಲಿತ ವಿದ್ಯಮಾನಗಳನ್ನು ಪ್ರತಿಬಿಂಬಿಸುವ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ.
370ನೇ ವಿಧಿ ಮತ್ತು ಚಂದ್ರಯಾನ -2 ಬಗೆಗಿನ ಟ್ಯಾಟೂಗಳನ್ನು ಕೆಲವು ಮಹಿಳೆಯರು ತಮ್ಮ ಬೆನ್ನಿಗೆ ಹಾಕಿಸಿಕೊಂಡರೆ, ಕೆಲವರು ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಚ್ಚೆ ಹಾಕಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.