ಟೋಕಿಯೋ: ಭಾರತ, ಜಪಾನ್ ಮತ್ತು ಅಮೆರಿಕಾ ನಡುವಿನ ತ್ರಿಪಕ್ಷೀಯ ಕಡಲ ಸಮರಾಭ್ಯಾಸ ‘ಮಲಬಾರ್ 2019’ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 4 ರವರೆಗೆ ಜಪಾನ್ ಕರಾವಳಿಯಲ್ಲಿ ಜರುಗುತ್ತಿದೆ. 23ನೇ ಆವೃತ್ತಿಯ ಸಮರಾಭ್ಯಾಸ ಇದಾಗಿದೆ.
ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಎರಡು ಪ್ರಮುಖ ಭಾರತೀಯ ನೌಕಾ ಹಡಗುಗಳಾದ ಮಲ್ಟಿಪರ್ಪಸ್ ಗೈಡೆಡ್ ಮಿಸೈಲ್ ಫ್ರಿಗೇಟ್ ಸಹ್ಯಾದ್ರಿ ಮತ್ತು ASW ಕಾರ್ವೆಟ್ ಕಿಲ್ತಾನ್ ಅನ್ನು ಸಮರಭ್ಯಾಸಕ್ಕಾಗಿ ಜಪಾನಿಗೆ ಕಳುಹಿಸಿಕೊಡಲಾಗಿದೆ. ಇದರೊಂದಿಗೆ P8I ಲಾಂಗ್ ರೇಂಜ್ ಮರಿಟೈಮ್ ಪ್ಯಾಟ್ರೋಲ್ ಏರ್ಕ್ರಾಫ್ಟ್ ಅನ್ನೂ ಕಳುಹಿಸಿಕೊಡಲಾಗಿದೆ.
ಅಮೆರಿಕಾ ನೌಕಾಪಡೆಯನ್ನು USS McCampbell, ಲಾಸ್ ಏಂಜಲೀಸ್-ಕ್ಲಾಸ್ ಅಟ್ಯಾಕ್ ಸಬ್ಮರೀನ್ ಮತ್ತು a P8A ಲಾಂಗ್ ರೇಂಜ್ ಮರಿಟೈಮ್ ಪ್ಯಾಟ್ರೋಲ್ ಏರ್ಕ್ರಾಫ್ಟ್ ಪ್ರತಿನಿಧಿಸಲಿದೆ. ಜಪಾನಿನ ನೌಕಾಪಡೆಯು ತನ್ನ ಇಜುಮೋ ಕ್ಲಾಸ್ ಹೆಲಿಕಾಪ್ಟರ್ ಡೆಸ್ಟ್ರಾಯರ್ ಜೆಎಸ್ ಕಾಗಾ, ಗೈಡೆಡ್ ಮಿಸೈಲ್ ಡೆಸ್ಟ್ರಾಯರ್ ಜೆಎಸ್ ಸಮಿದಾರೆ ಮತ್ತು ಚೌಕೈ ಮತ್ತು a P1 ಲಾಂಗ್ ರೇಂಜ್ ಮರಿಟೈಮ್ ಪ್ಯಾಟ್ರೋಲ್ ಏರ್ಕ್ರಾಫ್ಟ್ನೊಂದಿಗೆ ಭಾಗವಹಿಸುತ್ತಿದೆ.
ಈ ಸಮರಾಭ್ಯಾಸವು ಮೇಲ್ಮೈ, ಉಪ-ಮೇಲ್ಮೈ ಮತ್ತು ವಾಯು ಕ್ಷೇತ್ರಗಳಲ್ಲಿನ ಸಂಕೀರ್ಣ ಕಡಲ ಕಾರ್ಯಾಚರಣೆಗಳ ತರಬೇತಿಯನ್ನು ಒಳಗೊಳ್ಳಲಿದೆ ಮತ್ತು ಜಲಾಂತರ್ಗಾಮಿ ವಿರೋಧಿ ಯುದ್ಧ, ವಾಯು-ವಿರೋಧಿ ಮತ್ತು ಮೇಲ್ಮೈ ವಿರೋಧಿ ಫೈರಿಂಗ್ಗಳು, ವಿಸಿಟ್ ಬೋರ್ಡ್ ಹುಡುಕಾಟ ಮತ್ತು ವಶಪಡಿಸಿಕೊಳ್ಳುವಿಕೆ ಸೇರಿದಂತೆ ಮ್ಯಾರಿಟೈಮ್ ಇಂಟರ್ಡಿಕ್ಷನ್ ಆಪರೇಷನ್ಸ್ (MIO) ಮತ್ತು ಸೀಝರ್ಸ್ ( ವಿಬಿಎಸ್ಎಸ್) ಕಾರ್ಯಾಚರಣೆಗಳನ್ನು ಒಳಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.