ನವದೆಹಲಿ: ಯಾವುದೇ ಭಾಷೆಯ ಹೇರಿಕೆ ಇಲ್ಲ, ಯಾವುದೇ ಭಾಷೆಗೆ ವಿರೋಧವೂ ಇಲ್ಲ ಎಂದು ಪ್ರತಿಪಾದಿಸಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯುವಂತೆ ಕರೆ ನೀಡಿದ್ದಾರೆ.
ನಾಸಾ ಮತ್ತು ಅಮೆರಿಕಾದ ಇತರ ಸ್ಥಳಗಳಿಗೆ ಭೇಟಿ ನೀಡಿ ಇತ್ತೀಚೆಗೆ ತಾಯ್ನಾಡಿಗೆ ಮರಳಿರುವ ಕರ್ನಾಟಕದ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ನಾಯ್ಡು, ಭಾರತವು ಅನೇಕ ಭಾಷೆಗಳಿಂದ ಆಶೀರ್ವದಿಸಲ್ಪಟ್ಟಿದೆ, ಇತರ ಭಾಷೆಗಳನ್ನು ಕಲಿಯುವಾಗ ಮಾತೃಭಾಷೆಯನ್ನು ಉತ್ತೇಜಿಸಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಮಹತ್ವ ನೀಡಬೇಕು ಎಂದು ಹೇಳಿದರು.
ಪ್ರಯಾಣವನ್ನು ಶಿಕ್ಷಣ ಮತ್ತು ಉತ್ತಮ ಕಲಿಕೆಯ ಅನುಭವ ಎಂದು ವಿವರಿಸಿದ ಅವರು, ಭಾರತದ ಸಂಸ್ಕೃತಿ, ಪರಂಪರೆ, ಭಾಷೆಗಳು ಮತ್ತು ಪಾಕಪದ್ಧತಿಯ ವಿವಿಧ ಅಂಶಗಳನ್ನು ತಿಳಿದುಕೊಳ್ಳಲು ಮತ್ತು ಭಾರತದ ವಿಶಿಷ್ಟ ಸಾಂಸ್ಕೃತಿಕತೆಯ ಬಗ್ಗೆ ತಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಭಾರತದ ಎಲ್ಲ ಪ್ರಮುಖ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. “ಹೊರಗೆ ಹೋಗುವ ಮೊದಲು, ಒಳಗೆ ನೋಡಿ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಿ” ಎಂದು ಅವರು ಹೇಳಿದರು.
ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ 2022 ರ ವೇಳೆಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯನ್ನು ಉಲ್ಲೇಖಿಸಿದ ನಾಯ್ಡು, ಭಾರತದ ಐತಿಹಾಸಿಕ, ಆಧ್ಯಾತ್ಮಿಕ, ರಮಣೀಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸಲು ಸಲಹೆ ನೀಡಿದರು.
“ಅಂತಹ ಭೇಟಿಗಳು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ಗತಕಾಲದ ಬಗ್ಗೆ ಒಳನೋಟವನ್ನು ನೀಡುತ್ತದೆ” ಎಂದು ಅವರು ವಿದ್ಯಾರ್ಥಿಗಳಿಗೆ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.