ನವದೆಹಲಿ: ಭಾರತೀಯ ವಾಯುಸೇನೆಯ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಮುಂದಿನ ವಾಯುಸೇನಾ ಮುಖ್ಯಸ್ಥರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಪ್ರಸ್ತುತ ವಾಯುಸೇನಾ ಮುಖ್ಯಸ್ಥರಾಗಿರುವ ಬೈರೇಂದರ್ ಸಿಂಗ್ ಧನೋವಾ ಅವರು 2019 ರ ಸೆಪ್ಟೆಂಬರ್ 30 ರಂದು ನಿವೃತ್ತಿಯನ್ನು ಹೊಂದುತ್ತಿದ್ದಾರೆ.
ಏರ್ ಮಾರ್ಷಲ್ ಭದೌರಿಯಾ (ಪಿವಿಎಸ್ಎಂ, ಎವಿಎಸ್ಎಂ, ವಿಎಂ, ಎಡಿಸಿ) 26 ನೇ ವಾಯುಸೇನಾ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಎರಡು ವರ್ಷಗಳ ಕಾಲ ಅವರು ಅಧಿಕಾರ ನಿರ್ವಹಣೆ ಮಾಡಲಿದ್ದಾರೆ. 62 ವರ್ಷ ಪೂರೈಸುತ್ತಿದ್ದಂತೆ ಅವರು ನಿವೃತ್ತರಾಗಲಿದ್ದಾರೆ. ಧನೋವಾ ಬಳಿಕ ಇವರೇ ವಾಯುಸೇನೆಯ ಅತ್ಯಂತ ಹಿರಿಯ ಅಧಿಕಾರಿ.
ಭದೌರಿಯಾ ಅವರು ಜುಲೈನಲ್ಲಿ ಫ್ರಾನ್ಸಿಗೆ ತೆರಳಿ ಗರುಡಾ 2019 ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದರು ಮತ್ತು ರಫೆಲ್ ಯುದ್ಧ ವಿಮಾನವನ್ನೂ ಹಾರಿಸಿದ್ದರು. ರಫೆಲ್ ಮತ್ತು ಸುಖೋಯ್ ಸು30-ಎಂಕೆಐನಲ್ಲಿ ಹಾರಾಟ ನಡೆಸುತ್ತಿರುವ ಭಾರತೀಯ ವಾಯುಸೇನೆಯೊಂದಿಗೆ ಕಾಲ್ಕೆರೆದು ಜಗಳಕ್ಕೆ ಬಂದರೆ ಪರಿಣಾಮ ನೆಟ್ಟಗೆ ಇರುವುದಿಲ್ಲ ಎಂದು ಶತ್ರುಗಳಿಗೆ ಎಚ್ಚರಿಕೆಯನ್ನೂ ನೀಡಿದ್ದರು.
ಇವರು 1980ರ ಜೂನ್ 15ರಂದು ವಾಯುಸೇನೆಯ ಫೈಟರ್ ವಿಭಾಗಕ್ಕೆ ಸೇರ್ಪಡೆಗೊಂಡ ಇವರು, ‘ಸ್ವಾರ್ಡ್ ಆಫ್ ಹಾನರ್’ ಅನ್ನೂ ಪಡೆದುಕೊಂಡಿದ್ದಾರೆ, 26 ವಿಧದ ಯುದ್ಧ ವಿಮಾನಗಳನ್ನು 4,250 ಗಂಟೆಗಳ ಕಾಲ ಹಾರಿಸಿದ ಅನುಭವ ಇವರಿಗೆ ಇದೆ. ಹಲವಾರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ ಅನುಭವವೂ ಇವರಿಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.