ಶ್ರೀನಗರ: ವಾಸ್ತವ ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತದೊಳಗೆ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕಿಸ್ಥಾನಿಯರ ದುಸ್ಸಾಹಸವನ್ನು ಭಾರತೀಯ ಸೇನೆಯು ವಿಫಲಗೊಳಿಸಿದ್ದು, ಈ ಬಗೆಗಿನ ದೃಶ್ಯವುಳ್ಳ ವೀಡಿಯೋವನ್ನು ಬುಧವಾರ ಬಿಡುಗಡೆ ಮಾಡಿದೆ. ಒಳನುಸುಳುವಿಕೆಯ ಬಗ್ಗೆ ಥರ್ಮಲ್ ಇಮೇಜರ್ ಮೂಲಕ ಈ ವೀಡಿಯೋವನ್ನು ಸೆರೆ ಹಿಡಿಯಲಾಗಿದೆ.
ಪಾಕಿಸ್ಥಾನದ ಕಮಾಂಡೋ ಮತ್ತು ಉಗ್ರರನ್ನು ಒಳಗೊಂಡ ಸ್ಪೆಷಲ್ ಸರ್ವಿಸ್ ಗ್ರೂಪ್ ಮೇಲೆ ಭಾರತೀಯ ಪಡೆಯು ಬ್ಯಾರೆಲ್ ಗ್ರೆನೇಡ್ ಲಾಂಚರ್ ಬಳಸಿ ಗ್ರೆನೇಡ್ ದಾಳಿ ನಡೆಸುವ ದೃಶ್ಯವನ್ನು ಈ ವೀಡಿಯೋ ಹೊಂದಿದೆ. ಸೆ. 12 ಮತ್ತು 13 ರ ಮಧ್ಯರಾತ್ರಿಯ ವೀಡಿಯೋ ಇದಾಗಿದೆ.
ಪಿಒಕೆಯ ಹಾಜಿಪಿರ್ ಸೆಕ್ಟರ್ನಲ್ಲಿ ಸೆಪ್ಟೆಂಬರ್ 10-11 ರಂದು ಪಾಕಿಸ್ಥಾನದ ಸೈನಿಕ ಸಿಪಾಯ್ ಗುಲಾಮ್ ರಸೂಲ್ ನನ್ನು ಭಾರತೀಯ ಪಡೆಗಳು ಹತ್ಯೆ ಮಾಡಿವೆ. ರಸೂಲ್ ಪಾಕಿಸ್ಥಾನ ಸೇನೆಯ ಪಂಜಾಬ್ ರೆಜಿಮೆಂಟ್ಗೆ ಸೇರಿದವನಾಗಿದ್ದ, ಪಾಕಿಸ್ಥಾನದ ಪಂಜಾಬ್ನ ಬಹವಾಲ್ನಗರದ ನಿವಾಸಿಯಾಗಿದ್ದ. ಭಾರತೀಯ ಸೇನೆಯ ಮೂಲಗಳ ಪ್ರಕಾರ, ಸೆಪ್ಟೆಂಬರ್ 11-12 ಮತ್ತು ಸೆಪ್ಟೆಂಬರ್ 12-13ರ ಮಧ್ಯರಾತ್ರಿಯಲ್ಲಿ ಪಾಕಿಸ್ಥಾನ ಅದೇ ಪ್ರದೇಶದಲ್ಲಿ ಒಳನುಸುಳಲು ಪ್ರಯತ್ನಿಸಿದೆ. ಈ ಪ್ರದೇಶದಲ್ಲಿ ಪಾಕಿಸ್ಥಾನದ ಎಸ್ಎಸ್ಜಿ ಪಡೆಗಳಿವೆ. ಆದರೆ ಭಾರತೀಯ ಪಡೆಗಳು ಒಳನುಸುಳುಕೋರರ ಪ್ರತಿ ಪ್ರಯತ್ನವನ್ನೂ ಛದ್ರ ಛಿದ್ರ ಮಾಡಿವೆ.
ಸೆಪ್ಟೆಂಬರ್ 9 ರಂದು ಕೂಡ ಜಮ್ಮು ಮತ್ತು ಕಾಶ್ಮೀರದ ಕೇರನ್ ಸೆಕ್ಟರ್ನಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುಕೋರರು ನಡೆಸಿದ ವಿಫಲ ಪ್ರಯತ್ನದ ವಿಡಿಯೋವನ್ನು ಭಾರತೀಯ ಸೇನೆಯು ಬಿಡುಗಡೆ ಮಾಡಿತ್ತು. ವಿಡಿಯೋದಲ್ಲಿ, ಭಾರತೀಯ ಯೋಧರಿಂದ ಕೊಲ್ಲಲ್ಪಟ್ಟ ಪಾಕ್ ಯೋಧನ ಶವ ಕೆಳಕ್ಕೆ ಬಿದ್ದಿತ್ತು ಮತ್ತು ಆತನ ಬಳಿ ಶಸ್ತ್ರಾಸ್ತ್ರಗಳಿತ್ತು.
#WATCH Army sources: Infiltration or attempted BAT(Border Action Team) action by Pakistan on 12-13 Sept 2019, was seen&eliminated. In video, Indian troops can be seen launching grenades at Pak’s SSG(Special Service Group) commandos/terrorists using Under Barrel Grenade Launchers. pic.twitter.com/KOnYJPWyV8
— ANI (@ANI) September 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.