ನವಶಕ್ತಿ ಫಿಲಂಸ್ ಸಂಸ್ಥೆಯಿಂದ ಪಿ.ಲಂಕೇಶ್ ರವರು ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದೊಂದಿಗೆ “ಎಲ್ಲಿಂದಲೋ ಬಂದವರು” ಸಿನಿಮಾವು 1980ರಲ್ಲಿ ಬಿಡುಗಡೆಗೊಳ್ಳುತ್ತದೆ. ಎಸ್.ಆರ್.ಭಟ್ ರವರ ಛಾಯಾಗ್ರಹಣವಿದ್ದು, ವಿಜಯ ಭಾಸ್ಕರ್ ರವರು ಸಂಗೀತ ನೀಡಿದ್ದಾರೆ. ಲೋಕೇಶ್, ವಿಮಲನಾಯ್ಡು, ಸುರೇಶ್ ಹೆಬ್ಳಿಕರ್ ಹಾಗೂ ಮೀನಾ ಕುಟ್ಟಪ್ಪ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಕಥೆ:
ವಿದ್ಯಾವಂತ ಯುವಕನೊಬ್ಬ (ಸುರೇಶ್ ಹೆಬ್ಳಿಕರ್) ಕೃಷಿಯಲ್ಲಿ ಆಸಕ್ತಿಯನ್ನು ಹೊಂದಿದ್ದು, ಆತ ಮದುವೆಯ ನಂತರ ಸಂಸಾರ ಸಮೇತ ಹಳ್ಳಿಯೊಂದಕ್ಕೆ ಬರುತ್ತಾನೆ. ತನ್ನ ಪಾಲಿನ ಜಮೀನಿನಲ್ಲಿ ಏನನ್ನಾದರೂ ಬೆಳೆದು ಕುಟುಂಬವನ್ನು ಪೋಷಿಸುವ ಸಂಕಲ್ಪ ಹೊಂದಿರುತ್ತಾನೆ. ಐದಾರು ಎಕರೆಯ ಜಮೀನಿನಲ್ಲಿ ಕೆಲಸ ಮಾಡಲು ನಂಬಿಕಸ್ಥ ಕೂಲಿಯಾಳುಗಳೇ ಸಿಗುವುದಿಲ್ಲ. ಇದರಿಂದಾಗಿ ಜಮೀನಿನಲ್ಲಿ ಬೆಳೆ ಬೆಳೆಯಲಾಗದೇ, ಸಾಕಿದ ಹಸುಗಳ ಹಾಲನ್ನೇ ಮಾರಿ ಸಂಸಾರದ ಜವಬ್ದಾರಿ ನಿಭಾಯಿಸುತ್ತಿರುತ್ತಾನೆ. ಒಂದೊಮ್ಮೆ ಪಟ್ಟಣಕ್ಕೆ ಹೋಗಿ ಹಾಲು ಮಾರಿ, ಸಂಜೆ ಮನೆಗೆ ಬರುವಾಗ ದಾರಿಯಲ್ಲಿ ಒಬ್ಬಾತ (ಲೋಕೇಶ್) ಬಂದು ಈತನಲ್ಲಿ ಕೆಲಸ ಕೇಳುತ್ತಾನೆ. ಜಮೀನು ಕೆಲಸಕ್ಕಾಗಿ ಒಬ್ಬ ಆಳು ಬೇಕಾಗಿದ್ದು, ಅವನನ್ನೇ ಜಮೀನಿನ ಕೆಲಸದ ಜೊತೆ ಮನೆ ಕೆಲಸವನ್ನು ಮಾಡಲು ಕೇಳಿದಾಗ, ಆತ ಒಪ್ಪುತ್ತಾನೆ.
ಬ್ಯಾಲ ಎಂಬಾತ ಜಮೀನಿನ ಕೆಲಸಕ್ಕೆ ಬಂದ ನಂತರ, ತಾನೋಬ್ಬನೇ ಶ್ರಮ ವಹಿಸಿ, ಮುತುವರ್ಜಿಯಿಂದ ಮನೆ ಹಾಗೂ ಜಮೀನಿನ ಪ್ರತಿಯೊಂದು ಕೆಲಸ ನಿರ್ವಹಿಸುತ್ತಾನೆ. ಮನೆಯ ಯಜಮಾನಿ (ವಿಮಲನಾಯ್ಡು) ಕೂಡ ಬ್ಯಾಲನ ಶ್ರದ್ಧೆ, ಕರ್ತವ್ಯ ನಿಷ್ಠೆಯನ್ನು ಗೌರವಿಸುತ್ತಾಳೆ. ಅಲ್ಲದೇ ಸಹೋದರ ವಾತ್ಸಲ್ಯದಿಂದ ಆತನ ಮಾನಸಿಕ ತಳಮಳಗಳನ್ನು ಶಮನ ಮಾಡಲು ಪ್ರಯತ್ನಿಸುತ್ತಾಳೆ ಹಾಗೂ ತನ್ನ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಅನಾಥ ಯುವತಿಯೊಂದಿಗೆ ಮದುವೆಯಾಗಲು ಆತನನ್ನು ಒಪ್ಪಿಸುತ್ತಾಳೆ. ಯಾವ ಬಂಧವೂ ಇರದ ಬ್ಯಾಲ ಹಾಗೂ ಕೆಲಸದಾಕೆಯನ್ನು ತನ್ನ ಮನೆಯವರಂತೆಯೇ ಕಾಣುವ ಮಾನವೀಯ ಗುಣ ಯಜಮಾನಿಯದ್ದು.
ಮದುವೆಯ ನಂತರ ಒಂದು ದಿನ, ಮನೆಯ ಯಜಮಾನನ ಗೆಳೆಯನ ಸೋಗಿನಲ್ಲಿ ಬರುವಾತ ಬ್ಯಾಲನ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಸುತ್ತಾನೆ. ಬ್ಯಾಲ ಒಬ್ಬ ಕೊಲೆಗಾರ, ಅವನಿಗೆ ವಾಸ ಮಾಡಲು ಅವಕಾಶ ಕಲ್ಪಿಸಿದ್ದು ಅಪರಾಧ ಎಂದು ಅವನು ವಾದಿಸುವಾಗ, ಇಬ್ಬರ ನಡುವಿನ ಘರ್ಷಣೆಯನ್ನು ಆತ ಕೊಲೆಯಾಗುತ್ತಾನೆ. ಮನೆಯ ಯಜಮಾನ ಸೆರೆಮನೆ ವಾಸ ಅನುಭವಿಸಬೇಕಾಗುತ್ತದೆ. ಮನೆಯ ಯಜಮಾನಿ ಹಾಗೂ ತನ್ನ ಹೆಂಡತಿ ಹೊರಗೆ ಕುಳಿತಿರುವಾಗ ಅಲ್ಲಿಗೆ ಬ್ಯಾಲ ಬರುತ್ತಾನೆ. ಸಿನಿಮಾ ಕೂಡ ಮುಗಿಯುತ್ತದೆ.
ಯಜಮಾನರಾಗಿದ್ದರೂ ತನ್ನ ಅಧೀನದಲ್ಲಿ ಕೆಲಸ ನಿರ್ವಹಿಸುವ ಜನಗಳನ್ನು ಮಾನವೀಯತೆಯಿಂದ ನೋಡುವ ಗುಣ ಪ್ರತಿಯೊಬ್ಬರಲ್ಲೂ ಇರಬೇಕು. ಅಹಂಕಾರ ಯಾವತ್ತಿದ್ದರೂ ಮುಂದಾಗುವ ಯಾವುದೇ ತೆರನಾದ ನಷ್ಟಕ್ಕೆ ಕಟ್ಟಿಟ್ಟ ಬುತ್ತಿ. ಶ್ರಮಪಟ್ಟು ಕೆಲಸ ಮಾಡಿದರೇ ಫಲ ಖಂಡಿತವಾಗಿ ಸಿಕ್ಕೇಸಿಗುವುದು ಎನ್ನುವುದಕ್ಕೆ ಬ್ಯಾಲ ಜಮೀನಿನಲ್ಲಿ ಭಾರಿ ಬೆಳೆದು, ಯಜಮಾನನ ಬಡತನ ನೀಗಿಸಿ, ಸಿರಿತನ ತರುವಂತೆ ಮಾಡಿದ್ದಲ್ಲಿ ಕಾಣಬಹುದು. ಸ್ವತಃ ಪಿ.ಲಂಕೇಶ್ ರವರೇ ಸಾಹಿತ್ಯ ಬರೆದ “ಕೆಂಪಾದವೋ ಎಲ್ಲಾ ಕೆಂಪಾದವೋ” ಹಾಡು ಮತ್ತು “ಎಲ್ಲಿದ್ದೇ ಇಲ್ಲಿ ತಂಕಾ, ಎಲ್ಲಿಂದಾ ಬಂದ್ಯವ್ವ” ಎಂಬ ಗೀತೆ ನಿಮ್ಮನ್ನು ಮೋಡಿ ಮಾಡದೇ ಬಿಡುವುದಿಲ್ಲ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಪ್ರಾಮಾಣಿಕವಾಗಿ ಕರ್ತವ್ಯದ ಮೌಲ್ಯತೆ.
2. ಮಾನವೀಯತೆಯ ಮೌಲ್ಯ ತಿಳಿಸುವ ಸಿನಿಮಾ.
3. ಹಸಿವು, ನೋವು, ನಲಿವು, ಬದುಕು, ಆಪ್ಯಾಯಮಾನ, ಆತ್ಮೀಯತೆ, ಬಾಂಧವ್ಯ ಇವುಗಳ ಕುರಿತು ತಿಳಿಯಲು.
4. ಜೀವನದಲ್ಲಿ ಸ್ನೇಹ, ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.