ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಜಿಬಿ ಪಂತ್ ಆಸ್ಪತ್ರೆಯ ಬಳಿಯಲ್ಲಿ ನಾಗರಿಕರು ಮುಕ್ತವಾಗಿ ಓಡಾಡುವ ದೃಶ್ಯವುಳ್ಳ ವಿಡಿಯೋವನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಅಧಿಕಾರಿ ಕಶ್ಯಪ್ ಕಡಗತ್ತೂರು ಅವರು ಬುಧವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಜನರು, ಸಾರಿಗೆ ಸಂಚಾರ ಮತ್ತು ರಸ್ತೆಬದಿಯ ತಳ್ಳುಗಾಡಿಯ ವ್ಯಾಪಾರಿಗಳು ಸಹಜವಾಗಿ ತಮ್ಮ ತಮ್ಮ ಕಾರ್ಯಗಳಲ್ಲಿ ನಿರತರಾಗಿರುವುದನ್ನು ಕಶ್ಯಪ್ ತೋರಿಸಿದ್ದಾರೆ. ಮಾತ್ರವಲ್ಲ, ಇದಕ್ಕೆ ಪೂರಕವಾಗಿ ದಿನದ ಪತ್ರಿಕೆಯ ಸುದ್ದಿಗಳನ್ನೂ ತೋರಿಸಿದ್ದಾರೆ. ಕಣಿವೆಯಲ್ಲಿ ಭಯ ಮತ್ತು ನಿಷೇಧ ಇನ್ನೂ ಮುಂದುವರೆದಿದೆ ಎಂದು ಹೇಳುತ್ತಿರುವವರಿಗೆ ಈ ವೀಡಿಯೋ ಸತ್ಯದ ದರ್ಶನ ಮಾಡಿಸಿದೆ.
ಟ್ವಿಟರಿನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಕಶ್ಯಪ್, “ಶ್ರೀನಗರದ ಜಿಪಿ ಪಂತ್ ಆಸ್ಪತ್ರೆಯ ಬಳಿಯಿಂದ ಮೊದಲ ವೀಡಿಯೋ ಅಪ್ ಡೇಟ್ ಮಾಡುತ್ತಿದ್ದೇನೆ. ಮಹಿಳೆಯರು, ಪುರುಷರು ಮತ್ತು ಮಕ್ಕಳು ಆಸ್ಪತ್ರೆಯ ಹೊರಗೆ ಕೂತಿರುವುದನ್ನು ನೀವು ಕಾಣಬಹುದು. ಸಾರಿಗೆ ಸಂಚಾರ, ಜನರ ಸೇರುವಿಕೆ ಸಾಮಾನ್ಯವಾಗಿದೆ. ಎಲ್ಲೂ ಅಡೆತಡೆಗಳಿಲ್ಲ, ತಳ್ಳು ಗಾಡಿ ವ್ಯಾಪಾರಿಗಳೂ ಕಾರ್ಯನಿರ್ವಹಿಸುತ್ತಿದ್ದಾರೆ. ವೀಡಿಯೋದಲ್ಲಿ ಇಂದಿನ ದಿನಪತ್ರಿಕೆಯನ್ನೂ ಹಂಚಿಕೊಳ್ಳಲಾಗಿದೆ” ಎಂದಿದ್ದಾರೆ.
370 ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಅಂತ್ಯಗೊಳಿಸಿದ 36 ದಿನಗಳ ನಂತರ ಸೆಪ್ಟೆಂಬರ್ 9 ರಂದು ಶ್ರೀನಗರ ಸೇರಿದಂತೆ ಕಣಿವೆಯ ಹೆಚ್ಚಿನ ಭಾಗಗಳಲ್ಲಿ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಆದರೂ, ಭಯೋತ್ಪಾದಕರ ಒಳನುಸುಳುವಿಕೆಯ ಗುಪ್ತಚರ ವರದಿಗಳಿಂದಾಗಿ ಕೆಲವು ಭಾಗಗಳಲ್ಲಿ ಬಿಗಿ ಭದ್ರತೆಗಳು ಇವೆ.
Today’s first video update from GB Pant Hospital, Srinagar. One can see men, women n kids visiting hospital on foot/vehicle, seamless movement of traffic, gathering of people, no stoppages anywhere and presence of pushcart vendors. Today’s newspaper shared in the video. #Kashmir pic.twitter.com/HWOzoYQK6h
— Kashyap Kadagattur 🇮🇳 (@iamkash_kr) September 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.