ನವದೆಹಲಿ: ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರವನ್ನು ವಾಪಾಸ್ ಪಡೆದುಕೊಂಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಭಾರತದ ಪ್ರಮುಖ ಮುಸ್ಲಿಂ ಸಂಘಟನೆ ಜಾಮಿಯತ್ ಉಲ್ಮಾ-ಇ-ಹಿಂದ್ ಸಮರ್ಥಿಸಿಕೊಂಡಿದೆ. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಎಂದು ಹೇಳಿದೆ.
ಪ್ರತ್ಯೇಕತಾವಾದಿಗಳ ಚಟುವಟಿಕೆಯನ್ನು ವಿರೋಧಿಸಿರುವ ಅವರು, ಇಂತಹ ಕೃತ್ಯಗಳು ಅಪಾಯಕಾರಿ ಎಂದಿದೆ. ಕಾಶ್ಮೀರಿಗಳ ಉನ್ನತಿಯು ಭಾರತದ ಸಂಪೂರ್ಣ ಏಕೀಕರಣದಲ್ಲಿ ಅಡಗಿದೆ ಎಂದು ಪ್ರತಿಪಾದಿಸಿದೆ.
ಗುರುವಾರ ನಡೆದ ತನ್ನ ವಾರ್ಷಿಕ ಸಮ್ಮೇಳನದಲ್ಲಿ ಕಾಶ್ಮೀರದ ಕುರಿತ ನಿರ್ಣಯವನ್ನು ಅಂಗೀಕರಿಸಿದ ಈ ಸಂಘಟನೆಯು, “ಜಾಮಿಯತ್ ಉಲ್ಮಾ-ಇ-ಹಿಂದ್ ಜನರಲ್ ಕೌನ್ಸಿಲ್ಸ್ನ ಈ ಸಭೆ, ಅದರ ಕಾರ್ಯಕಾರಿ ಮತ್ತು ಸಾಮಾನ್ಯ ಮಂಡಳಿಗಳು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದೂ, ಎಲ್ಲಾ ಕಾಶ್ಮೀರಿಗಳು ನಮ್ಮ ಸಹಚರರು ಎಂಬ ನಿಲುವನ್ನು ಪುನರುಚ್ಚರಿಸುತ್ತದೆ” ಎಂಬ ನಿರ್ಣಯವನ್ನು ಅಂಗೀಕರಿಸಿದೆ.
“ಜಾಮಿಯತ್ ಉಲ್ಮಾ-ಇ-ಹಿಂದ್ ಯಾವಾಗಲೂ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಸ್ಥಿರವಾಗಿ ನಿಲ್ಲುತ್ತದೆ ಮತ್ತು ಅದು ಅದಕ್ಕೆ ಮಹತ್ವದ ವಿಷಯವೂ ಹೌದು. ಹೀಗಾಗಿ ಸಂಘಟನೆಯು ಪ್ರತ್ಯೇಕತಾವಾದಿ ಚಳವಳಿಯನ್ನು ಬೆಂಬಲಿಸಲು ಸಾಧ್ಯವಿಲ್ಲ, ಇಂತಹ ಚಳುವಳಿಗಳು ಭಾರತಕ್ಕೆ ಮಾತ್ರವಲ್ಲ ಕಾಶ್ಮೀರದ ಜನರಿಗೆ ಹಾನಿಕಾರಕವೆಂದು ಪರಿಗಣಿಸುತ್ತದೆ ” ಎಂದು ಹೇಳಿದೆ.
ಕಾಶ್ಮೀರಿಗಳಿಗೆ ಬೆಂಬಲವನ್ನು ನೀಡಿದ ಅದು, “ನಾವು ಕಾಶ್ಮೀರಿ ಜನರ ಆಸೆ, ಅವರ ಸ್ವಾಭಿಮಾನ ಮತ್ತು ಅವರ ಸಾಂಸ್ಕೃತಿಕ ಗುರುತನ್ನು ಕಾಪಾಡುವ ಬೇಡಿಕೆಯ ಬಗ್ಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಅವರ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವುದು ನಮ್ಮ ರಾಷ್ಟ್ರೀಯ ಕರ್ತವ್ಯವೆಂದು ನಾವು ಭಾವಿಸುತ್ತೇವೆ. ಅದೇನೇ ಇದ್ದರೂ, ಕಾಶ್ಮೀರದ ಜನರ ಕಲ್ಯಾಣವು ಭಾರತದೊಂದಿಗೆ ಸಂಯೋಜನೆಗೊಳ್ಳುವುದರಲ್ಲೇ ಇದೆ ಎಂಬುದು ನಮ್ಮ ದೃಢವಾದ ನಂಬಿಕೆಯಾಗಿದೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.