ನವದೆಹಲಿ: ಭಾರತೀಯ ಸೇನೆಯ ಇನ್ಫಾಂಟ್ರಿ ಪಡೆಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡುವ ಸಲುವಾಗಿ ಬುಧವಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯಶಸ್ವಿಯಾಗಿ ಮ್ಯಾನ್ ಪೋರ್ಟೇಬಲ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ (MPATGM) ಅನ್ನು ಆಂಧ್ರಪ್ರದೇಶದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದೆ. ಕ್ಷಿಪಣಿ ವ್ಯವಸ್ಥೆಯ ಮೂರನೇ ಯಶಸ್ವಿ ಪ್ರಾಯೋಗಿಕ ಪರೀಕ್ಷೆ ಇದಾಗಿದೆ. ಸೇನೆಯ ಮೂರನೇ ತಲೆಮಾರಿನ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಅಗತ್ಯತೆಗೆ ಅನುಗುಣವಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ.
ಟ್ರೈಪೋಡ್ ಮೂಲಕ ಮಿಸೈಲ್ ಅನ್ನು ಫೈಯರ್ ಮಾಡಲಾಗಿದ್ದು, ಕಾರ್ಯನಿರತ ಟ್ಯಾಂಕ್ ಅನ್ನು ಅನುಸರಿಸಿ ಗುರಿಯನ್ನು ಇಡಲಾಗಿತ್ತು. ಮಿಸೈಲ್ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದು, ಉನ್ನತ ದಾಳಿ ಮಾದರಿಯಲ್ಲಿ ಇದು ಗುರಿ ತಲುಪಿದೆ ಮತ್ತು ಗುರಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದೆ.
ಯುದ್ಧಭೂಮಿಯಲ್ಲಿ ಯೋಧರು ಸುಲಭವಾಗಿ ಈ ಮಿಸೈಲ್ ಅನ್ನು ಹೊತ್ತೊಯ್ಯಬಹುದಾಗಿದ್ದು, ಟ್ರೈಪೋಡ್ ಉಡಾವಣಾ ವ್ಯವಸ್ಥೆಯ ಸಹಾಯದಿಂದ ಇದನ್ನು ಉಡಾವಣೆ ಮಾಡಬಹುದಾಗಿದೆ. ಡಿಆರ್ಡಿಒ ನಡೆಸಿದ ಯಶಸ್ವಿ ಪರೀಕ್ಷೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.
ಡಿಆರ್ಡಿಒ ದೇಶೀಯವಾಗಿ ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯು ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಲ್ಲಿ ಅಲ್ಟ್ರಾ-ಮಾಡರ್ನ್ ಇಮೇಜಿಂಗ್ ಇನ್ಫ್ರಾರೆಡ್ ರಾಡಾರ್ ಸೀಕರ್ ಇಂಟಿಗ್ರೇಟೆಡ್ ಏವಿಯಾನಿಕ್ಸ್ ಇದೆ. MPATGM ಮೂರನೇ ತಲೆಮಾರಿನ ಆ್ಯಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ಆಗಿದ್ದು, ಹೆಚ್ಚಿನ ಸ್ಫೋಟಕ ವಿರೋಧಿ ಟ್ಯಾಂಕ್ (HEAT) ಸಿಡಿತಲೆಗಳ ಲೋಡ್ ಹೊಂದಿದೆ. ಈ ಕ್ಷಿಪಣಿಯ ಗರಿಷ್ಠ ವ್ಯಾಪ್ತಿಯು ಸುಮಾರು 2.5 ಕಿಲೋಮೀಟರ್ ಆಗಿದೆ.
India today successfully test fired Man Portable Anti Tank Guided Missile system from a firing range in Kurnool, Andhra Pradesh. This is the 3rd successful test firing of missile system which is being developed for Indian Army’s need for 3rd generation Anti-tank guided missile. pic.twitter.com/O5QYigZdrc
— ANI (@ANI) September 11, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.