ಬೆಂಗಳೂರು: ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಗಗನಯಾತ್ರಿಗಳ ಆಯ್ಕೆ ಪ್ರಕ್ರಿಯೆಯ ಮೊದಲ ಹಂತವನ್ನು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಸಂಪೂರ್ಣಗೊಳಿಸಿದೆ ಎಂದು ಭಾರತೀಯ ವಾಯುಸೇನೆ ಶುಕ್ರವಾರ ಹೇಳಿದೆ.
ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಆಯ್ದ ಪೈಲಟ್ಗಳನ್ನು, ದೈಹಿಕ ವ್ಯಾಯಾಮ ಪರೀಕ್ಷೆಗಳು, ಲ್ಯಾಬ್ ಪರಿಶೀಲನೆಗಳು, ರೆಡಿಯೋಲಾಜಿಕಲ್ ಟೆಸ್ಟ್, ಕ್ಲಿನಿಕಲ್ ಟೆಸ್ಟ್ಗಳಿಗೆ ಒಳಪಡಿಸಲಾಗಿದೆ. ಮಾತ್ರವಲ್ಲದೇ, ಹಲವಾರು ಮಾನಸಿಕ ಪರೀಕ್ಷೆಗಳಿಗೂ ಒಳಪಟ್ಟಿದ್ದಾರೆ ಎಂದು ವಾಯುಸೇನೆ ಹೇಳಿದೆ.
“ಮಿಷನ್ ಗಗನಯಾನಕ್ಕಾಗಿ ಐಎಎಫ್ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ನಲ್ಲಿ ಭಾರತೀಯ ಗಗನಯಾತ್ರಿಗಳ ಆಯ್ಕೆಯ ಹಂತ -1 ಅನ್ನು ಪೂರ್ಣಗೊಳಿಸಲಾಗಿದೆ. ಆಯ್ದ ಟೆಸ್ಟ್ ಪೈಲಟ್ಗಳು ಮಾನಸಿಕ ಮತ್ತು ದೈಹಿಕ ಪರೀಕ್ಷೆಗಳಿಗೆ ಒಳಪಟ್ಟಿದ್ದಾರೆ. ರೆಡಿಯೋಲಾಜಿಕಲ್ ಟೆಸ್ಟ್, ಕ್ಲಿನಿಕಲ್ ಟೆಸ್ಟ್ಗಳಿಗೆ ಮತ್ತು ಮೌಲ್ಯಮಾಪನಗಳಿಗೆ ಒಳಗಾಗಿದ್ದಾರೆ” ಎಂದು ಭಾರತೀಯ ವಾಯುಸೇನೆ ಟ್ವಿಟ್ ಮಾಡಿದೆ.
2022ರ ವೇಳೆ ಮಾನವ ಸಹಿತ ಬಾಹ್ಯಾಕಾಶ ಯೋಜನೆಯನ್ನು ಭಾರತ ಹಮ್ಮಿಕೊಳ್ಳುತ್ತಿದೆ. 2018ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಈ ಯೋಜನೆಯ ಬಗ್ಗೆ ಘೋಷಣೆ ಮಾಡಿದ್ದಾರೆ. ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಯೋಜನೆಯನ್ನು ನಡೆಸಲು ಇಸ್ರೋ ಸಜ್ಜಾಗಿದೆ. ಈ ಯೋಜನೆ ಇಸ್ರೋಗೆ ದೊಡ್ಡ ಸವಾಲಿನದ್ದಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ.
ರೂ.10,000 ಕೋಟಿಗಳ ಮಾನವ ಸಹಿತ ಗಗನಯಾನದಲ್ಲಿ ಮೂವರು ಸಿಬ್ಬಂದಿಗಳು ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದ್ದಾರೆ. 6 ದಿನಗಳ ಕಾಲ ಅಲ್ಲಿ ತಂಗಲಿದ್ದಾರೆ. ಬಾಹ್ಯಾಕಾಶ ನೌಕೆಯನ್ನು 300-400 ಕಿ.ಮೀ ಕೆಳ ಭೂ ಕಕ್ಷೆಯಲ್ಲಿ ಇಡಲಾಗುತ್ತದೆ. ಗಗನಯಾನ ಕಾರ್ಯಕ್ರಮದ ಅಂಗವಾಗಿ ಎರಡು ಮಾನವರಹಿತ ವಿಮಾನಗಳು ಮತ್ತು ಒಂದು ಮಾನವಸಹಿತ ಹಾರಾಟವನ್ನು ನಡೆಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.