ಬೆಂಗಳೂರು: ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರಯಾನ -2 ಆರ್ಬಿಟರ್ನಿಂದ ಬೇರ್ಪಡಿಸುವ ಕಾರ್ಯ ಸೋಮವಾರ ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ಈ ಕಾರ್ಯವು 13.15pm ಗೆ ಯಶಸ್ವಿಯಾಗಿ ನಡೆದಿದೆ. ಸೆ.7ರಂದು ಇಂದು ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ.
ವಿಕ್ರಮ್ ಲ್ಯಾಂಡರ್ ಪ್ರಸ್ತುತ 119 ಕಿಮೀ x 127 ಕಿಮೀ ಕಕ್ಷೆಯಲ್ಲಿದೆ. ಚಂದ್ರಯಾನ -2 ಆರ್ಬಿಟರ್ ಚಂದ್ರನನ್ನು ತನ್ನ ಅಸ್ತಿತ್ವದಲ್ಲಿರುವ ಕಕ್ಷೆಯಲ್ಲಿ ಸುತ್ತುತ್ತದೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಅದರಿಂದ ಪ್ರಜ್ಞಾನ್ ರೋವರ್ ಬೇರ್ಪಡಲಿದೆ. ಈ ಪ್ರಜ್ಞಾನ್ ರೋವರ್ 6 ಚಕ್ರ ಮತ್ತು ಎಐ-ಚಾಲಿತ ವಾಹನವಾಗಿದೆ. ಪ್ರಜ್ಞಾನ್ ಎಂದರೆ ಸಂಸ್ಕೃತದಲ್ಲಿ ‘ಬುದ್ಧಿವಂತಿಕೆ’ ಎಂದು ಅರ್ಥ. ಲ್ಯಾಂಡರ್ ಒಳಗೆ ಅದು ಏಕೀಕೃತಗೊಂಡಿರುತ್ತದೆ.
ಪ್ರಜ್ಞಾನ್ ರೋವರ್ ಚಂದ್ರನ ಮಣ್ಣಿನ ಬಗ್ಗೆ ಸಂಶೋಧನೆಯನ್ನು ನಡೆಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸೆ.7ರಂದು ಚಂದ್ರಯಾನ-2 ನೌಕೆ ಚಂದ್ರನ ಮೇಲ್ಮೈ ಅನ್ನು ಇಳಿಯುವ ಕೊನೆಯ 15 ನಿಮಿಷಗಳು ರೋಚಕವಾಗಿರಲಿದೆ. ಸುರಕ್ಷಿತವಾಗಿ ಮತ್ತು ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಇಳಿಸುವುದು ಇಸ್ರೋ ಪಾಲಿಗೆ ಅತ್ಯಂತ ಮಹತ್ವದ ಕ್ಷಣವಾಗಲಿದೆ.
ಜುಲೈ 22ರಂದು ಮಧ್ಯಾಹ್ನ 2.45ಕ್ಕೆ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಲ್ಲಿ ಇಸ್ರೋ ವಿಜ್ಞಾನಿಗಳು ನಭಕ್ಕೆ ಚಿಮ್ಮಿಸಿದ್ದರು.
#ISRO
Vikram Lander Successfully separates from #Chandrayaan2 Orbiter today (September 02, 2019) at 1315 hrs IST.For details please visit https://t.co/mSgp79R8YP pic.twitter.com/jP7kIwuZxH
— ISRO (@isro) September 2, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.