ನವದೆಹಲಿ: ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಬಗ್ಗಾ ಅವರು ಆಘಾತಕಾರಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಭಾರತ ಸರ್ಕಾರವು 370 ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ ಪಾಕಿಸ್ಥಾನವು ವಿಶ್ವದಾದ್ಯಂತ ನಡೆಸುತ್ತಿರುವ ಭಾರತ ವಿರೋಧಿ ಪ್ರತಿಭಟನೆಗಳ ಅಸಲಿತನವನ್ನು ಇದು ಬಹಿರಂಗಪಡಿಸಿದೆ. ವೀಡಿಯೊದಲ್ಲಿ ತೇಜಿಂದರ್ ಬಗ್ಗಾ ಅವರು ಫ್ರಾನ್ಸ್ನಲ್ಲಿ ವಾಸಿಸುತ್ತಿರುವ ಪಾಕಿಸ್ಥಾನಿ ಮಹಿಳೆಯೊಂದಿಗೆ ನಡೆಸಿದ ಸಂಭಾಷಣೆಯನ್ನು ಇದರಲ್ಲಿ ಕೇಳಬಹುದು.
ಟ್ವಿಟ್ಟರ್ನಲ್ಲಿ ಹಂಚಿಕೆಯಾಗುತ್ತಿರುವ ಭಾರತ ವಿರೋಧಿ ಪ್ರತಿಭಟನೆಯ ಪೋಸ್ಟರ್ ಬಗ್ಗೆ ವಿಚಾರಿಸಲು ಬಗ್ಗಾ ಅವರು ಈ ಮಹಿಳೆಗೆ ವೀಡಿಯೋ ಕಾಲ್ ಮಾಡಿದ್ದಾರೆ. ಈ ವೇಳೆ ಬಗ್ಗಾ ಅವರು ತಮ್ಮನ್ನು ಪಾಕಿಸ್ಥಾನದ ‘ಅಬ್ದುಲ್’ ಎಂದು ಆಕೆಗೆ ಪರಿಚಯಿಸಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಏನಾದರು ಹಣ ನೀಡುತ್ತಾರೆಯೇ ಎಂದು ಆ ಮಹಿಳೆಯನ್ನು ಬಗ್ಗಾ ಕೇಳಿದ್ದಾರೆ. ಮೊದಲು ಅವರ ಪ್ರಶ್ನೆಗೆ ಆಕೆ ಉತ್ತರಿಸಲಿಲ್ಲ. ಬಳಿಕ ಇನ್ನಷ್ಟು ಪ್ರತಿಭಟನಾಕಾರರನ್ನು ಸೇರಿಸುತ್ತೇನೆಂದು ಬಗ್ಗಾ ಭರವಸೆ ನೀಡಿದ ಮೇಲೆ ಆಕೆ ತಮ್ಮ ಅಸಲಿತನವನ್ನು ಹೊರಹಾಕಿದಳು. ಭಾರತದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಎಲ್ಲರಿಗೂ ಒಂದಿಷ್ಟು ಹಣವನ್ನು ನೀಡಲಾಗುತ್ತಿದೆ ಎಂದು ಹೇಳಿದಳು. ಬಗ್ಗಾ ಅವರಿಗೆ $5 ನೀಡುವುದಾಗಿ ತಿಳಿಸಿದಳು. ಆಕೆಯ ಮಾತು ಪ್ರತಿಭಟನೆಯನ್ನು ನಟೋರಿಯಸ್ ಐಎಸ್ಐ ಆಯೋಜನೆಗೊಳಿಸುತ್ತಿದೆ ಎಂಬ ಅಂಶವನ್ನೂ ಬೆಳಕಿಗೆ ತಂದಿದೆ.
ಆ.15 ರಂದು ಲಂಡನ್ನಿನಲ್ಲಿ ಭಾರತೀಯ ಸಮುದಾಯ ನಡೆಸುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲೂ ಪಾಕಿಸ್ಥಾನದ ಈ ನಕಲಿ ಪ್ರತಿಭಟನಾಕಾರರು ಅಡ್ಡಿಪಡಿಸಿದ್ದರು. ಮೊಟ್ಟೆ, ಬಾಟಲಿ, ತರಕಾರಿ, ಬ್ಯಾರಿ, ಬಟಾಟೆ, ಬಿಸಿ ಕಾಫಿಗಳನ್ನು ಎರಚಿದ್ದಲ್ಲದೇ, ಸ್ಮೋಕ್ ಬಾಂಬ್ಗಳನ್ನೂ ಎರಚಿದ್ದರು. ಯುಕೆ ಪೊಲೀಸರು ನಾಲ್ವರನ್ನು ಬಂಧಿಸಿದ್ದರು. ಪ್ರತಿಭಟನಾಕಾರ ಬಳಿಯಿದ್ದ ಚಾಕುವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದ್ದವು.
ಇದೀಗ ಬಗ್ಗಾ ಅವರು ಪ್ರತಿಭಟನಾಕಾರರ ಅಸಲಿ ಮುಖವನ್ನು ಬಹಿರಂಗಪಡಿಸಿದ್ದು, ಪಾಕಿಸ್ಥಾನದ ಹೀನ ಕೃತ್ಯವನ್ನು ಜಗಜ್ಜಾಹೀರು ಮಾಡಿದ್ದಾರೆ.
Called a Pakiatani lady who is organising today’s protest in France pic.twitter.com/IIuh8Wiuqm
— Tajinder Pal Singh Bagga (@TajinderBagga) August 25, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.