ನವದೆಹಲಿ: ಅರ್ಥಶಾಸ್ತ್ರದಲ್ಲಿ 15 ವರ್ಷಕ್ಕಿಂತ ಕಡಿಮೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರನ್ನು ‘ಉತ್ಪಾದಕತೆ ರಹಿತ ಜನಸಂಖ್ಯೆ’ ಎಂದು ಕರೆಯಲಾಗುತ್ತದೆ. ಈ ಜನಸಂಖ್ಯೆಯ ಹೆಚ್ಚಿನ ಹೊರೆ ಆರ್ಥಿಕತೆಯ ಮೇಲಿನ ಒತ್ತಡವೆಂದು ಪರಿಗಣಿಸಲಾಗಿದೆ. ವಿಜ್ಞಾನದಂತೆ ಅರ್ಥಶಾಸ್ತ್ರವು ಭಾವನಾತ್ಮಕತೆ ಇಲ್ಲದು. ಹಿರಿಯ ನಾಗರಿಕರನ್ನು ವ್ಯರ್ಥ ಎಂದು ಕರೆಯುವುದು ಅವಹೇಳನಕಾರಿಯಾದ ಭಾಷೆ. ಭಾರತದಲ್ಲಿ ಮನೆಗಳು ನಡೆಯುವುದೇ ಹಿರಿಯರ ಮಾರ್ಗದರ್ಶನದಲ್ಲಿ. ಹಿರಿಯರ ಅನುಭವ ಮತ್ತು ಜ್ಞಾನ ಕಿರಿಯರಿಗೆ ಸದಾ ಬೇಕೇ ಬೇಕು.
ಇಂದು ವಿಶ್ವ ಹಿರಿಯ ದಿನವನ್ನು ಆಚರಿಸಲಾಗುತ್ತಿದೆ. ಹಿರಿಯರಿಗೆ ವಿಶೇಷ ಗೌರವವನ್ನು ಮತ್ತು ಸಮಾಜಕ್ಕೆ ಅವರ ಅನಿವಾರ್ಯತೆಯ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಭಾರತವು ಗರಿಷ್ಠ ಯುವ ಜನತೆಯನ್ನು ಹೊಂದಿರುವ ರಾಷ್ಟ್ರ. ಹೀಗಾಗಿ ನಮ್ಮನ್ನು ವಿಶ್ವದ ‘ಕಿರಿಯ ದೇಶ’ ಎಂದು ಪರಿಗಣಿಸಲಾಗಿದೆ. ಆದರೂ ಭಾರತವು ಗಮನಾರ್ಹ ವೃದ್ಧರ ಸಂಖ್ಯೆಯನ್ನು ಹೊಂದಿದೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಯುಎನ್ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಷನ್ 2019 ರ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಶೇ.6ರಷ್ಟು ಜನರು 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು (ಒಟ್ಟು ಜನಸಂಖ್ಯೆಯ 1.36 ಬಿಲಿಯನ್). 71% ವೃದ್ಧರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ, 29% ನಗರ ಪ್ರದೇಶಗಳಲ್ಲಿದ್ದಾರೆ. ಕೇರಳವು ತನ್ನ ಜನಸಂಖ್ಯೆಯಲ್ಲಿ ವಯಸ್ಸಾದವರ ಗರಿಷ್ಠ ಪ್ರಮಾಣವನ್ನು ಹೊಂದಿದೆ (ಶೇಕಡಾ 12.6). ಭಾರತದ ಜನಸಂಖ್ಯೆಯಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರ ಪಾಲು 2050 ರಲ್ಲಿ (ಯುಎನ್) ಸುಮಾರು 20 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಊಹಿಸಲಾಗಿದೆ.
ವಯಸ್ಸಾದವರಿಗೆ ನೀತಿ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವನ್ನು 1980 ರ ದಶಕದಲ್ಲಿ ವಿಶ್ವಸಂಸ್ಥೆಯ ಮೊದಲ ವಿಶ್ವ ಅಸೆಂಬ್ಲಿಯ ನಂತರ ಅಂಗೀಕರಿಸಲಾಯಿತು. ಭಾರತದಲ್ಲೂ ಹಿರಿಯ ನಾಗರಿಕರ ಘನತೆಯುತ ಬದುಕಿಗಾಗಿ ಹಲವಾರು ಯೋಜನೆಗಳನ್ನು ತರಲಾಗಿದೆ.
ಹಿರಿಯರು ನಮ್ಮ ಕುಟುಂಬ, ದೇಶದ ಗೌರವಯುತ ಪ್ರಜೆಗಳಾಗಿದ್ದಾರೆ. ಅವರನ್ನು ಗೌರವಯುತವಾಗಿ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.