ಭೋಪಾಲ್: ಮಧ್ಯಪ್ರದೇಶದ ಶಿವಪುರಿ ಮೂಲದ ವ್ಯಕ್ತಿಯೊಬ್ಬರು ಕೇವಲ 11 ಸೆಕೆಂಡುಗಳಲ್ಲಿ 100 ಮೀಟರ್ ಬರಿಗಾಲಿನಲ್ಲಿ ರಸ್ತೆಯಲ್ಲಿ ಓಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಆ ವ್ಯಕ್ತಿಗೆ ಸರ್ಕಾರದದಿಂದಲೂ ಬೆಂಬಲ ವ್ಯಕ್ತವಾಗಿದೆ.
ರಾಮೇಶ್ವರ್ ಗುರ್ಜರ್ ವೇಗದಲ್ಲಿ ಓಡಿದ ಸಾಧನೆಯನ್ನು ಮಾಡಿದ ಯುವಕನಾಗಿದ್ದಾರೆ. ಇವರು ಓಡುವ ವೀಡಿಯೋ ವೈರಲ್ ಆದ ಬಳಿಕ, ಮಧ್ಯಪ್ರದೇಶದ ಕ್ರೀಡಾ ಸಚಿವರು “ವೇಗ ಪರೀಕ್ಷೆ”ಗೆ ಇವರನ್ನು ಭೋಪಾಲ್ನ ಟಿಟಿ ನಗರ ಕ್ರೀಡಾಂಗಣಕ್ಕೆ ಆಹ್ವಾನಿಸಿದ್ದರು. ಆದರೆ ಅಲ್ಲಿ 11 ಸೆಕೆಂಡುಗಳಲ್ಲಿ 100 ಮೀಟರ್ ಓಡಲು ಇವರು ವಿಫಲರಾದರೂ, 12.9 ಸೆಕೆಂಡುಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
“ಕ್ರೀಡಾ ಸಚಿವರಿಂದ ಕರೆ ಬಂದಾಗ ನಾನು ನನ್ನ ಕಳೆದುಹೋದ ಎಮ್ಮೆಗಳನ್ನು ಹುಡುಕುತ್ತಿದ್ದೆ. ನಾನು ಟಿವಿಯಲ್ಲಿ ಉಸೇನ್ ಬೋಲ್ಟ್ ಅವರನ್ನು ನೋಡಿದ್ದೇನೆ ಮತ್ತು ಭಾರತೀಯರಿಗೆ ಅವರ ದಾಖಲೆಯನ್ನು ಏಕೆ ಮುರಿಯಲು ಸಾಧ್ಯವಿಲ್ಲ ಎಂದು ನಾನು ಯೋಚಿಸುತ್ತಿದ್ದೆ. ಸೌಲಭ್ಯಗಳು ಮತ್ತು ಸರಿಯಾದ ತರಬೇತಿ ಪಡೆದ ನಂತರ ಅವರ ದಾಖಲೆಯನ್ನು ಮುರಿಯುವ ಭರವಸೆ ನನಗಿದೆ” ಎಂದು ರಾಮೇಶ್ವರ್ ಗುರ್ಜರ್ ಹೇಳುತ್ತಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ರಾಮೇಶ್ವರ್ ಅವರ ಬರಿಗಾಲಿನ ಓಟದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜ್ಜು ಅವರಿಗೆ ಮನವಿ ಮಾಡಿ ಈ ವ್ಯಕ್ತಿಯ ಓಟದ ಕೌಶಲ್ಯಗಳನ್ನು ಹೆಚ್ಚಿಸಲು ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.
ಚೌಹಾನ್ ಅವರ ಟ್ವೀಟ್ಗೆ ರಿಜ್ಜು ಅವರು ಪ್ರತಿಕ್ರಿಯಿಸಿದ್ದು, “ದಯವಿಟ್ಟು ಯಾರಾದರೂ ಅವರನ್ನು ನನ್ನ ಬಳಿಗೆ ಕರೆ ತನ್ನಿ. ನಾನು ಅವರನನ್ನು ಅಥ್ಲೆಟಿಕ್ ಅಕಾಡೆಮಿಗೆ ಸೇರಿಸಲು ವ್ಯವಸ್ಥೆ ಮಾಡುತ್ತೇನೆ” ಎಂದಿದ್ದಾರೆ.
ಸಮರ್ಪಕವಾದ ತರಬೇತಿ ಸಿಕ್ಕರೆ ಇವರು ಭಾರತಕ್ಕೊಂದು ಕ್ರೀಡಾ ಆಸ್ತಿಯಾಗಿ ಹೊರಹೊಮ್ಮುವಲ್ಲಿ ಸಂದೇಹವಿಲ್ಲ.
India is blessed with talented individuals. Provided with right opportunity & right platform, they’ll come out with flying colours to create history!
Urge @IndiaSports Min. @KirenRijiju ji to extend support to this aspiring athlete to advance his skills!
Thanks to @govindtimes. pic.twitter.com/ZlTAnSf6WO
— Shivraj Singh Chouhan (@ChouhanShivraj) August 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.