ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ)ಪಡೆಯ ಯೋಧರೊಬ್ಬರು 1997 ರ ಜನಪ್ರಿಯ ಸಿನಿಮಾ ‘ಬಾರ್ಡರ್’ನ ಖ್ಯಾತ ಹಾಡು ‘ಸಂದೇಸೆ ಆತೆ ಹೇ” ಅನ್ನು ಹಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಯೋಧನ ಕಂಠ ಮತ್ತು ಭಾವನೆಗೆ ಅನೇಕರು ಭಾವುಕರಾಗಿದ್ದಾರೆ.
ಐಟಿಬಿಪಿಪಡೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯೋಧ ಹಾಡುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, 3.37 ನಿಮಿಷಗಳ ವೀಡಿಯೋ ಭಾರೀ ವೈರಲ್ ಆಗಿದೆ. 73 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆಯಲ್ಲಿ ಕಾನ್ಸ್ಟೇಬಲ್ ಲವ್ಲಿ ಸಿಂಗ್ ಅವರ ತಮ್ಮ ಸಹ ಸೈನಿಕರಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದಾರೆ.
“ಐಟಿಬಿಪಿಯ ಕಾನ್ಸ್ಟೆಬಲ್ ಲವ್ಲಿ ಸಿಂಗ್ 73 ನೇ ಸ್ವಾತಂತ್ರ್ಯ ದಿನದಂದು ಸಹೋದ್ಯೋಗಿಗಳಿಗೆ ಹಾಡನ್ನು ಅರ್ಪಿಸಿದ್ದಾರೆ” ಎಂಬ ಒಕ್ಕಣೆಯನ್ನು ಬರೆದು ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸಿಂಗ್ ಅವರ ಹಿನ್ನಲೆ ಗಾಯನದಲ್ಲಿ ರಾಷ್ಟ್ರಧ್ವಜದೊಂದಿಗೆ ವಿಡಿಯೋವು ಪ್ರಾರಂಭವಾಗುತ್ತದೆ ಮತ್ತು ನಂತರ ಐಟಿಬಿಪಿ ಸಿಬ್ಬಂದಿಯು ಕ್ಲಿಷ್ಟಕರವಾದ ಭೂಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಇದರಲ್ಲಿ ತೋರಿಸಲಾಗಿದೆ.
ಜನಪ್ರಿಯ ಹಾಡಿನ ಹೃದಯಸ್ಪರ್ಶಿ ಚಿತ್ರಣವು ಆನ್ಲೈನ್ನಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಯೋಧನ ಸಂಗೀತ ಕೌಶಲ್ಯವನ್ನು ಅನೇಕರು ಅಭಿನಂದಿಸಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ಕೇಂದ್ರ ಸಚಿವ ಕಿರಣ್ ರಿಜ್ಜು ಅವರು ಹಂಚಿಕೊಂಡಿದ್ದಾರೆ.
‘ए गुजरने वाली हवा बता
मेरा इतना काम करेगी क्या’Constable Lovely Singh of ITBP dedicates song to colleagues on 73rd Independence Day.#IndependenceDay pic.twitter.com/FO1mnSQU5V
— ITBP (@ITBP_official) August 14, 2019
A heart touching rendition by @ITBP_official jawan Lovely Singh. I’ve worked very closely with our jawans and stayed with them in border areas. I can feel how they carry the heartbeat of the motherland🇮🇳 https://t.co/ASD9CuOJSt
— Kiren Rijiju (@KirenRijiju) August 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.