RSS ಬಾಗಲಕೋಟೆ ವತಿಯಿಂದ ನೆರೆಗೆ ಮೂಲಭೂತ ಸೌಕರ್ಯಗಳಿಗೂ ಕೊರತೆಯಾಗಿದ್ದ ಪ್ರದೇಶಗಳಿಗೆ ಅನ್ನ ನೀರು ತಲುಪಿಸುವ ಜವಾಬ್ದಾರಿಯನ್ನು ಸಂಘದ ಹಿರಿಯರು ನಮ್ಮ ತಂಡಕ್ಕೆ ವಹಿಸಿದ್ದರು. ಅದರಂತೆ ಬೆಳಿಗ್ಗೆ 75 Kg ಪಲಾವ್ ಹಾಗೂ ನೀರನ್ನು ವ್ಯವಸ್ಥೆ ಮಾಡಿಕೊಂಡು ಹೊರಟೆವು. ಸುಮಾರು ಬಾಗಲಕೋಟೆ ನಗರದಿಂದ 27 ಸ್ವಯಂಸೇವಕರು, ಗುಳೇದಗುಡ್ಡದಿಂದ 6 ಜನ ಸ್ವಯಂಸೇವಕರು ಸೇರಿಕೊಂಡು ಪ್ರಯಾಣ ಆರಂಭಿಸಿದೆವು. ಆ ಎಲ್ಲ ಸ್ವಯಂಸೇವಕರಲ್ಲಿ 70% ಎಲ್ಲರೂ ಹೊಸಬರೆ ಅಂದರೆ ಇಲ್ಲಿಯವರೆಗೂ ನೆರೆ ಸಂತ್ರಸ್ಥರ ಸದ್ಯದ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿರಲಿಲ್ಲ. ಸಂತ್ರಸ್ಥರ ಕಷ್ಟಗಳನ್ನು ಪ್ರತ್ಯಕ್ಷ ಕಾಣದೇ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ನೋಡಿದವರೆ ಹೆಚ್ಚು. ಕೆಲವರಂತೂ ಸಂಘದ ಸೇವಾ ಕಾರ್ಯಕ್ಕೆ ಕೈ ಜೋಡಿಸಲು ಬೆಂಗಳೂರು ಮತ್ತು ಬೇರೆ ಬೇರೆ ಊರುಗಳಿಂದ ಬಂದಿದ್ದರು.
ಮಧ್ಯಾಹ್ನದ ಊಟ ತಲುಪಿಸಲು ಅಶೋಕ ಲೇಲ್ಯಾಂಡ್ ಹಾಗೂ ಟಾಟಾ ಏಸ್ ವಾಹನಗಳನ್ನು ಸ್ವಯಂಸೇವಕರು ಹೊರಟೇವು. ಬಾದಾಮಿ ತಾಲೂಕಿನ ಮಂಗಳಗುಡ್ಡ, ಚಿಮ್ಮಲಗಿ ಹಾಗೂ ಕೆಲವು ಗ್ರಾಮಗಳಿಗೆ ಊಟ ನೀರಿನ ಪ್ಯಾಕೇಟ್ಗಳನ್ನು ವಿತರಿಸುವುದಕ್ಕೆ ಹೋಗುವಾಗ ಎಲ್ಲರ ಉತ್ಸಾಹ, ಹುರುಪು, ಖುಷಿ ನಮ್ಮದಾಗಿತ್ತು. ಆದರೆ ಆ ಉತ್ಸಾಹ ಕಡಿಮೆ ಮಾಡಲು ವಿಧಿಯೂ ತುಂಬಾ ಪ್ರಯತ್ನಿಸಿತು ಅನಿಸುತ್ತೆ. ಯಾಕಂದ್ರೆ ಗುಳೇದಗುಡ್ಡ ಮಾರ್ಗವಾಗಿ ರಾಮಥಾಳ ಮೂಲಕ ಐಹೋಳೆಗೆ ಹೋಗುವ ಮಾರ್ಗ ಮದ್ಯದಲ್ಲಿ ರಾಮಥಾಳ ಹಾಗೂ ಹೂವಿನಹಳ್ಳಿ ಹಳ್ಳಿಗಳ ನಡುವೆ ಇರುವ ಸೇತುವೆ ಪೂರ್ತಿ ಬರ್ತಿಯಾಗಿತ್ತು. ರಸ್ತೆ ಸಂಚಾರ ಸ್ಥಗಿತವಾಗಿತ್ತು.
ಇನ್ನೇನು ವಾಪಸ್ ನಮ್ಮೂರಿಗೆ ಹೋಗೋದಾಗುತ್ತೆ ಅಥವಾ ಬೇರೆ ಯಾವುದೋ ಮಾರ್ಗದಿಂದ ನಮ್ಮ ಪಾಯಿಂಟ್ ತಲುಪಿ ನಮ್ಮ ಜವಾಬ್ದಾರಿ ಪೂರ್ಣಗೊಳಿಸಬೇಕೆನಿಸಿತು. ಅದೇ ಸಮಯದಲ್ಲಿ ಒಬ್ಬ ಸ್ಥಾನಿಯ ವ್ಯಕ್ತಿ ನಿಮ್ಮ ವಾಹನ ಎತ್ತರ ಇದೆ ಈ ನೀರಲ್ಲಿ ಪಾಸ್ ಆಗುತ್ತೆ ಹಾಗೇ ಚಲಾವಣೆ ಮಾಡ್ಕೊಂಡು ಹೋಗಿ ಅಂದ ಆ ಒಂದೆ ಕಾರಣಕ್ಕೆ ನಾವು ನೀರಿನ ಆಳ ನೋಡದೇ ವಾಹನ ಚಲಾಯಿಸಿದ ಪರಿಣಾಮ ಟಾಟಾ ಏಸ್ ವಾಹನ ನೀರಿನ ಮಧ್ಯದಲ್ಲಿ ಬಂದಾಗಿ ನಿಂತಿತು ಎಷ್ಟೂ ಸಾರಿ ಒತ್ತಿದರೂ(ದೂಕಿದರು) ವಾಹನ ವಾಪಸ್ ಸ್ಟಾರ್ಟ್ ಆಗಲೇ ಇಲ್ಲ. ಮೊದಲು ಸೇವಾಕಾರ್ಯ ಮುಗಿಸಿ ಆಮೇಲೆ ವಾಹನ ಹೇಗಾದರೂ ಮಾಡಿ ಒಯ್ದರಾಯ್ತು ಅಂತ ಎಲ್ಲರೂ ಆ ಅಶೋಕ ಲೇಲ್ಯಾಂಡ್ ವಾಹನದಲ್ಲೆ ಕುರಿ ಹಿಂಡು ತುಂಬಿದ ಹಾಗೆ ತುಂಬ್ಕೊಂಡು, ತಯಾರಿಸಿದ ಪಲಾವ್ ಬೋಗಾಣಿಯ ಬಿಸಿಯನ್ನು ಸಹಿಸಿಕೊಂಡೆ ಹೊರಟೆವು.
ಆವಾಗ ಮತ್ತೊಂದು ಕಂಟಕ ಎದುರಾಗಿತ್ತು. ಐಹೋಳೆ ಮೂಲಕ ಹೋಗುವ ದಾರಿ ಕೂಡ ನೀರಿನಿಂದ ಆವೃತವಾಗಿ ನಮ್ಮ ಸೇವೆಗೆ ತಣ್ಣಿರೆರಚಿತು ಅಂತ ಅನಿಸಿದಾಗ. ಆವಾಗ ದೇವರಂತೆ ಬಂದ ಐಹೋಳೆ ಸ್ವಯಂಸೇವಕರೊಬ್ಬರು (ತುಂಬಾ ಹಿರಿಯರು) ನಾನು ನಿಮಗೆ ಬೇರೆ ದಾರಿಯನ್ನು ತೋರಿಸ್ತಿನಿ ಏನೇ ಆಗಲಿ ಇವತ್ತು ನಿಮ್ಮ ಸೇವೆ ಪೂರ್ಣವಾಗಲಿ ಎಂದಾಗ ಸತತ ನಿರಾಸೆಯಿಂದ ಕಂಗಾಲಾಗಿದ್ದ ನಮಗೆ ಆ ಹಿರಿಯ ಸ್ವಯಂಸೇವಕರ ಮಾತು ನೂರು ಪಟ್ಟು ನಮ್ಮ ಉತ್ಸಾಹ ಹೆಚ್ಚಾಯಿತು. ಗುಡೂರು ಮೂಲಕ ನಮ್ಮ ಪಾಯಿಂಟ್ ಮುಟ್ಟಬೇಕಾದಾಗ ಸಾಕಷ್ಟು ದಾರಿಯಲ್ಲಿ ತೊಂದರೆಗಳಾದರೂ ಉತ್ಸಾಹವನ್ನು ಕುಗ್ಗಿಸಿಕೊಳ್ಳದ ಪರಿಣಾಮವಾಗಿ ನಮ್ಮ ಹಿರಿಯರು ನೀಡಿದ ಪಾಯಿಂಟ್ಗೆ ತೆರಳಿ ಅಲ್ಲಿ ತಯಾರು ಮಾಡಿದ ಪಲಾವ್ ನೀಡಿ ಧನ್ಯತಾ ಭಾವದಿಂದ ಬೀಗಿ ಸೇವಾಕಾರ್ಯ ಮುಗಿತು.
ವಾಪಸ್ ಕತ್ತಲಾಗುವುದರೊಳಗೆ ಊರು ತಲುಪಬೇಕೆನ್ನುವಷ್ಟರಲ್ಲಿ ನಮ್ಮ ಜೊತೆಗೆ ಬಂದಿದ್ದ ಒಬ್ಬರು ಮಂಗಳಗುಡ್ಡದಲ್ಲಿ ಮಿಸ್ಸಾದರು (ತಪ್ಪಿಸಿಕೊಂಡರು). ಅವರನ್ನು ಹುಡುಕಿ ತಂದು ಎಲ್ಲರೂ ನಮ್ಮ ಮಧ್ಯಾಹ್ನದ ಊಟ ಮುಗಿಯುವುದರೊಳಗೆ ಇಳಿಕತ್ತಲಾಯಿತು. ನಾವು ವಾಪಸ್ ಬಂದಾಗಿದ್ದ(ಸ್ಟಾಪ್) ವಾಹನ ತೆಗೆದುಕೊಂಡು ಬಾಗಲಕೋಟೆಗೆ ಹೋಗಬೇಕೆನ್ನುವ ಸಮಯದಲ್ಲಿ ಎಲ್ಲರೂ ತುಂಬಾ ಭಯ ಬೀತರಾಗಿದ್ದೇವು ಯಾಕಂದರೆ ನಮ್ಮ ಬಂದ್ ಆಗಿದ್ದ ಸೇತುವೆಯಲ್ಲಿ ಪೂರ್ತಿ ನೀರು ಬಂದು ವಾಪಸ್ ದಾರಿ ಇರದಿದ್ರೆ ನಮಗೂ ವಸತಿಗೆ ಸಹಿತ ಸಮಸ್ಯೆ ಆಗುತ್ತೆ ಅಂತ ಭಯರಾಗಿದ್ದಾಗ ದೈವ ಇಚ್ಚೇಯೋ ಅಥವಾ ನಮ್ಮ ಅದೃಷ್ಟವೋ ಗೊತ್ತಿಲ್ಲ ಆ ಸೇತುವೆ ಸಂಪೂರ್ಣ ನೀರು ಮುಕ್ತವಾಗಿ ಸಂಚಾರ ಸಲಿಸಾಗಿ ನಡೆಯುತ್ತಿತ್ತು. ಆವಾಗ ನಮ್ಮ ಬಂದಾಗಿದ್ದ ವಾಹನಕ್ಕೆ ಹಗ್ಗ ಕಟ್ಟಿಕೊಂಡು ಎಳೆದು ತರುವಾಗ ವಿಧಿ ಲಿಖಿತವೋ ಏನೋ ಮತ್ತೊಂದು ಅವಘಡ ಘಟಿಸಿತು. ಏನೇಂದರೆ ಚೆನ್ನಾಗಿರುವ ಅಶೋಕ ಲೇಲ್ಯಾಂಡ್ ವಾಹನವೂ ಸಹಿತ ಟೈಯರ್ದಲ್ಲಿ ಏರ್ ಬಂದು ಟೈಯರ್ನ ಪದರು ಕಿತ್ತಕೊಂಡಿತು. ಸ್ಟೇಪ್ನಿ ಬದಲಾಯಿಸಲು ಸಮಯ ಹಿಡಿತು ಆವಾಗಲೂ ಮಳೆ ಕಾಡಿತು. ಬಾಗಲಕೋಟೆ ಸಮೀಪಿಸುತ್ತಿದ್ದಂತೆ ಮತ್ತೆ ಮಳೆರಾಯ ನಮ್ಮನ್ನು ತೊಯಿಸದೇ ಬಿಡಲಿಲ್ಲ ಒಂದ ಕಡೆ ಮೈ ಒದ್ದೆ ಮತ್ತೊಂದು ಕಡೆ ಗಾಳಿ ಅದನ್ನು ಅನುಭವಿಸಿದವರಿಗೆ ಗೊತ್ತು. ಇಷ್ಟೇಲ್ಲ ಕಷ್ಟಗಳಾಗಿದ್ದರೂ ಹಿರಿಯರಿಗೆ ತಿಳಿಸೋಣವೆಂದರೆ ಯಾರ ಪೋನನಲ್ಲಿ ನೆಟ್ವರ್ಕ್ ಇರಲಿಲ್ಲ. ಕೆಲವೋಮ್ಮೆ ನೆಕ್ವರ್ಕ ಬಂದಾಗಲೂ ಹಿರಿಯರಿಗೆ ನಮ್ಮ ಕಷ್ಟ ಹೇಳಿ ಸಂತ್ರಸ್ಥರ ಕಡೆಯ ಗಮನ ಕಡಿಮೆ ಆಗದಿರಲಿ ಅಂತ ಹೇಳಲಿಲ್ಲ.
ಅಬ್ಬಬ್ಬಾ ಎಷ್ಟು ಕಷ್ಟ ಬರುತ್ತೆ ಬರಲಿ ಎಂದು ಎಲ್ಲ ಗಟ್ಟಿತನದಿಂದ ಆಗಿದ್ದಾಗಲಿ ಅಂತ ನಿಂತಾಗ ಸರಳವಾಗಿ ನಮ್ಮ ವಾಹನ ಬಾಗಲಕೋಟೆ ತಲುಪಿತು. ಕೆಟ್ಟೋಗಿದ್ದ ವಾಹನ ಗ್ಯಾರೇಜ್ಗೆ ಬಿಟ್ಟು ಉಳಿದ ಇನ್ನೊಂದು ವಾಹನವನ್ನು ಮಾಲಿಕರಿಗೆ ತಲುಪಿಸಲು ಸರಿಯಾಗಿ 11.00 ಗಂಟೆ ಆಯ್ತು. ಗಟ್ಟಿತನವನ್ನು, ಸೇವಾ ಮನೋಭಾವನೆಯನ್ನು ಪರೀಕ್ಷಿಸಲು ಈ ತರಹ ಕಷ್ಟಗಳು ಬಂದೆ ಬರುತ್ತವೆ. ಇಷ್ಟೆಲ್ಲ ಕಷ್ಟವಾದರೂ ಎಲ್ಲ ಸ್ವಯಂಸೇವಕರು ಏನೂ ಆಗಿಯೇಯಿಲ್ಲ ಅನ್ನುವಂತೆ ಬಾಗಲಕೋಟೆಯಲ್ಲಿ ಕಂಡರು. ಹೋಗುವಾಗ ಅಣ್ಣ ನಾಳಿನ ಸೇವಾಕಾರ್ಯದ ಯೋಜನೆ ಹಿರಿಯರಿಗೆ ಕೇಳು ಅಣ್ಣ ಅಂದಿದ್ದು ಮಾತ್ರ ಇನ್ನು ಕಿವಿಯಲ್ಲಿ ಗುಯ್ ಗುಟ್ತಿದೆ. ಈ ಲೇಖನದಲ್ಲಿ ಬರೆದಿರೋದು ಅನುಭವಿಸಿರೋರಿಗೆ ಗೊತ್ತು ಅದರ ಗಮ್ಮತ್ತು. ಅಕ್ಷರ ರೂಪದ್ದು ಅನುಭವದ ಸಾರ ಅಡಗಿದ್ದಂತು ಸುಳ್ಳಲ್ಲ. ಅತಿಶಯೋಕ್ತಿ ಅಂತ ಭಾವಿಸೋದು ತಮ್ಮ ವಿವೇಚನೆಗೆ ಬಿಟ್ಟಿದ್ದು. ಅನುಭವಿಸಿದ್ದನ್ನು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದಿನಿ. ಅಬ್ಬಬ್ಬಾ ದೇವರು ಹೀಗೂ ಪರೀಕ್ಷಿಸುತ್ತಾನಾ ಅಂತ ಪ್ರಶ್ನಾರ್ಥಕ ಲಹರಿಗೋಯ್ತು ಮನ.
✍ ಆರ್ಎಸ್ಎಸ್ ಸ್ವಯಂಸೇವಕ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.