ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಹಿಂಪಡೆದು, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜನೆ ಮಾಡಿರುವ ಕೇಂದ್ರ ಸರ್ಕಾರ, ಇದೀಗ ಕಾಶ್ಮೀರ ಕಣಿವೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ.
ಕಾಶ್ಮೀರ ಕಣಿವೆಯ ಶ್ರೀನಗರ ಮೆಟ್ರೋ ಯೋಜನೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ ಸಂಬಂಧಪಟ್ಟವರಿಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ನಿರ್ಧಾರದ ಹಿನ್ನಲೆಯಲ್ಲಿ, ಸಿವಿಲ್ ಎಂಜಿನಿಯರ್ಗಳು, ವಾಸ್ತುಶಿಲ್ಪಿಗಳು, ಸಿಗ್ನಲ್ ಎಲೆಕ್ಟ್ರಿಷಿಯನ್, ದೂರಸಂಪರ್ಕ ತಜ್ಞರು ಸೇರಿದಂತೆ ಸುಮಾರು 1,300 ಸಿಬ್ಬಂದಿಯನ್ನು ಶ್ರೀನಗರ ಮೆಟ್ರೋ ಯೋಜನೆಗೆ ನೇಮಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಈ ನಿರ್ಧಾರವು ಕೇಂದ್ರಾಡಳಿತ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧತೆಯನ್ನು ತೋರಿಸುತ್ತಿದೆ ಎಂಬ ಭರವಸೆಯನ್ನು ದೃಢಪಡಿಸಿದೆ. ಮಾತ್ರವಲ್ಲದೇ, ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ಜಮ್ಮು ಕಾಶ್ಮೀರ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಕಣಿವೆ ರಾಜ್ಯದ ಮೊದಲ ಹೂಡಿಕೆದಾರರ ಸಮಾವೇಶವಾಗಲಿದೆ.
ಶ್ರೀನಗರ ಮೆಟ್ರೊದ ಒಟ್ಟು ವೆಚ್ಚ 5,108 ಕೋಟಿ ರೂ ಎಂದು ಅಂದಾಜಿಸಲಾಗಿದ್ದು, ಈ ಮೆಟ್ರೋ ಜಾಲವು ಎರಡು ಉಪ ಕಾರಿಡಾರ್ಗಳನ್ನು ಒಳಗೊಂಡಿರುತ್ತದೆ, ಒಂದು ಇಂದಿರಾ ನಗರದಿಂದ ಎಚ್ಎಂಟಿ ಜಂಕ್ಷನ್ವರೆಗೆ ಮತ್ತು ಇನ್ನೊಂದು ಹಜುರಿಬಾಗ್ನಿಂದ ಉಸ್ಮಾನಾಬಾದ್ಗೆ ಸಂಚರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.