ಹೈದರಾಬಾದ್: ಹೈದರಾಬಾದ್ನ ಯುವಕನೊಬ್ಬ ‘ಸ್ಮಾರ್ಟ್’ ಬಳೆಯ ರೂಪದಲ್ಲಿ ಮಹಿಳಾ ಸುರಕ್ಷತೆಯ ವೃದ್ಧಿಗೆ ನವೀನ ಪರಿಹಾರವನ್ನು ಕಂಡುಹಿಡಿದಿದ್ದಾನೆ.
23 ವರ್ಷದ ಗಡಿ ಹರೀಶ್, ತನ್ನ ಸ್ನೇಹಿತ ಸಾಯಿ ತೇಜ ಅವರೊಂದಿಗೆ ಸೇರಿ ಶಾಕ್ ಅನ್ನು ಉಂಟುಮಾಡುವಂತಹ ಬಳೆಯನ್ನು ಕಂಡುಹಿಡಿದಿದ್ದಾರೆ. ಮಹಿಳೆ ಅಪಾಯದಲ್ಲಿದ್ದ ಸಂದರ್ಭದಲ್ಲಿ ಸಂಬಂಧಿಕರು ಮತ್ತು ಪೊಲೀಸರಿಗೆ ಅವರಿರುವ ಸ್ಥಳದ ಬಗ್ಗೆ ಇದು ಮಾಹಿತಿಯನ್ನು ರವಾನಿಸುತ್ತದೆ.
ಮಹಿಳೆ ತನ್ನ ತೋಳನ್ನು ನಿರ್ದಿಷ್ಟ ಕೋನದಲ್ಲಿ ತಿರುಗಿಸಿದಾಗ ಈ ‘ಸೆಲ್ಫ್ ಸೆಕ್ಯೂರಿಟಿ ಬ್ಯಾಂಗಲ್ ಫಾರ್ ವುಮೆನ್’ ಡಿವೈಸ್ ಸಕ್ರಿಯಗೊಳ್ಳುತ್ತದೆ. ಮಹಿಳೆಯು ತೋಳನ್ನು ತಿರುಗಿಸುವ ಪ್ರಕ್ರಿಯೆಯು ಈ ಡಿವೈಸ್ನಲ್ಲಿ ವಿದ್ಯುತ್ ಹರಿಯುವಂತೆ ಮಾಡಿ, ಮಹಿಳೆಯ ಕೈ ಹಿಡಿದವರಿಗೆ ಶಾಕ್ ನೀಡುತ್ತದೆ ಮತ್ತು ಅದೇ ಸಮಯದಲ್ಲಿ, ಅದು ಮಹಿಳೆಯು ಇರುವ ಸ್ಥಳದ ಮಾಹಿತಿಯನ್ನು ಅವರ ಸಂಬಂಧಿಕರು ಮತ್ತು ಹತ್ತಿರದ ಪೊಲೀಸ್ ಠಾಣೆಗಳಿಗೆ ಕಳುಹಿಸುತ್ತದೆ.
ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಗಡಿ ಹರೀಶ್ ಅವರು, “ನಾನು ಮಹಿಳೆಯರಿಗಾಗಿ ಸ್ವ-ಭದ್ರತಾ ಬಳೆ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದ್ದೇನೆ, ಈ ಸಾಧನವು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ನನ್ನ ಸ್ನೇಹಿತ ಸಾಯಿ ತೇಜ ಸಹಾಯದಿಂದ ನಾನು ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದೇನೆ ” ಎಂದಿದ್ದಾರೆ.
“ಈ ಯೋಜನೆಯ ಮುಖ್ಯ ಪರಿಕಲ್ಪನೆಯೆಂದರೆ ಮಹಿಳೆಯರಿಗೆ ಭದ್ರತೆ ನೀಡುವುದು, ಇತ್ತೀಚಿನ ದಿನಗಳಲ್ಲಿ ನಾವು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳನ್ನು ಗಮನಿಸುತ್ತಿದ್ದೇವೆ, ಇಂತಹ ಸಂದರ್ಭದಲ್ಲಿ ಈ ಸಾಧನ ಸಾಕಷ್ಟು ಪ್ರಯೋಜನಕಾರಿಯಾಗಿದೆ” ಎಂದು ಹರೀಶ್ ಹೇಳಿದ್ದಾರೆ.
ತನ್ನ ಯೋಜನೆಯನ್ನು ಸಂಪೂರ್ಣಗೊಳಿಸುವ ಸಲುವಾಗಿ, ಮಹಿಳೆಯರಿಗೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ ನನ್ನ ಕಾರ್ಯದಲ್ಲಿ ಸರ್ಕಾರ ನೆರವಿನ ಹಸ್ತ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.