ನವದೆಹಲಿ: ಮುಂದಿನ ದಶಕದೊಳಗೆ ಭಾರತೀಯ ರೈಲ್ವೆಯನ್ನು ವಿಶ್ವದ ಮೊದಲ ಹಸಿರು ರೈಲ್ವೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಗೋಯಲ್ ಅವರು ಜುಲೈ 28 ರಂದು ರಾಜ್ಯಸಭೆಯಲ್ಲಿ ಶುದ್ಧ ಇಂಧನ ಮೂಲಗಳಿಗೆ ಬದಲಾಗುವ ಮಾರ್ಗಸೂಚಿಯನ್ನು ಹಂಚಿಕೊಂಡಿದ್ದರು, ಈ ವೇಳೆ, ಸರ್ಕಾರವು ಹಳಿಗಳ ವಿದ್ಯುದೀಕರಣ, ಜೈವಿಕ ಡೀಸೆಲ್ಗೆ ಬದಲಾವಣೆಗೊಳ್ಳುವುದು, ಪ್ರಮುಖ ಶಕ್ತಿಯ ಮೂಲಗಳಿಗಾಗಿ ಬಳಕೆಯಾಗದ ಜಮೀನುಗಳು ಮತ್ತು ಕಟ್ಟಡಗಳ ಮೇಲೆ ಸೌರಶಕ್ತಿ ಸ್ಥಾವರಗಳನ್ನು ಸ್ಥಾಪಿಸುವುದಕ್ಕೆ ಹೆಚ್ಚಿನ ಗಮನವನ್ನು ನೀಡುತ್ತಿದೆ ಎಂದಿದ್ದಾರೆ.
ಇದಲ್ಲದೆ, ಬೃಹತ್ ಪ್ರಮಾಣದಲ್ಲಿ ರೈಲು ಹಳಿಗಳನ್ನು ವಿದ್ಯುದ್ದೀಕರಿಸುವ ಮೂಲಕ ರೈಲ್ವೇಯು ಡೀಸೆಲ್ ವೆಚ್ಚವನ್ನು ಕಡಿತಗೊಳಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯರಿಗೆ ತಿಳಿಸಿದರು. “2022 ರ ಹೊತ್ತಿಗೆ ನಾವು ರೈಲ್ವೆಯನ್ನು ಸಂಪೂರ್ಣ ವಿದ್ಯುದ್ದೀಕರಣವನ್ನು ಮಾಡಲಿದ್ದೇವೆ” ಎಂದು ರೈಲ್ವೇ ರಾಜ್ಯ ಖಾತೆ ಸಚಿವ ಚನ್ನಬಸಪ್ಪ ಹೇಳಿದರು.
ಈ ವೇಳೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ಇಂತಹ ಘೋಷಣೆಗಳು ಭವ್ಯವಾದ ಘೋಷಣೆಗಳು ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೋಯಲ್, ದೊಡ್ಡ ಗುರಿಗಳನ್ನು ಇಟ್ಟುಕೊಳ್ಳದ ಹೊರತು ದೊಡ್ಡ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದರು. “ಬಹುಶಃ ಇಂದಿನಿಂದ ಮುಂದಿನ 10 ವರ್ಷಗಳೊಳಗೆ, ನಾವು ಭಾರತೀಯ ರೈಲ್ವೆಗಳನ್ನು ವಿಶ್ವದ ಮೊದಲ ಶೇಕಡಾ 100 ರಷ್ಟು ಹಸಿರು ರೈಲುಗಳನ್ನಾಗಿ ಪರಿವರ್ತನೆ ಮಾಡಲಿದ್ದೇವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.