ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್ನಿಂದ 348 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ವಾಪಾಸ್ಸಾಗುತ್ತಿರುವ ಐಎನ್ಎಸ್ ಸುಮಿತ್ರಾ ಹಡಗು ಬುಧವಾರ ಜಿಬೌಟಿಗೆ ಬಂದು ತಲುಪಿದೆ ಎಂದು ಮೂಲಗಳು ತಿಳಿಸಿವೆ. ಜಿಬೌಟಿ ಯೆಮೆನ್ನ ಪಕ್ಕದ ರಾಷ್ಟ್ರವಾಗಿದೆ.
ಭಾರತೀಯ ನೌಕಾ ಸಿಬ್ಬಂದಿಗಳು ಮಂಗಳವಾರ ರಾತ್ರಿ ಯೆಮೆನ್ನಲ್ಲಿನ ಒಟ್ಟು 348 ಭಾರತೀಯರನ್ನು ರಕ್ಷಿಸಿದ್ದಾರೆ. ಇದರಲ್ಲಿ 101 ಮಹಿಳೆಯರು, 28 ಮಕ್ಕಳೂ ಸೇರಿದ್ದಾರೆ. ಅವರನ್ನೆಲ್ಲಾ ಹಡಗಿನಲ್ಲಿ ಕುಳ್ಳರಿಸಿ ನಿನ್ನೆ ರಾತ್ರಿಯೇ ಅಲ್ಲಿಂದ ಹೊರಟಿದ್ದಾರೆ.
ಅಡೆನ್ ಬಂದರಿನಲ್ಲಿ ಹಡಗನ್ನು ನಿಲ್ಲಿಸಲು ಭಾರತ ಸರ್ಕಾರ ಅನುಮತಿ ಪಡೆದ ಹಿನ್ನಲೆಯಲ್ಲಿ ಭಾರತೀಯರ ರಕ್ಷಣೆ ಸಾಧ್ಯವಾಗಿದೆ. ಭಾರತದ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರು ಪ್ರಸ್ತುತ ಜಿಬೌಟಿಯಲ್ಲಿಯೇ ಇದ್ದಾರೆ.
ಯೆಮೆನ್ನಲ್ಲಿ ಒಟ್ಟು 4 ಸಾವಿರ ಭಾರತೀಯರಿದ್ದಾರೆ. ಇವರೆಲ್ಲರ ರಕ್ಷಣೆಯ ಹೊಣೆಯೂ ಸರ್ಕಾರದ ಮೇಲಿದೆ. ಈಗಾಗಲೇ ಯೆಮೆನ್ಗೆ ನಾಲ್ಕು ಹಡುಗು ಮತ್ತು ನಾಲ್ಕು ವಿಮಾನಗಳನ್ನು ಕಳುಹಿಸಿಕೊಡಲಾಗಿದೆ. ಮೊದಲ ಹಂತವಾಗಿ ಐಎನ್ಎಸ್ ಸುಮಿತ್ರಾ ಭಾರತೀಯರನ್ನು ಹೊತ್ತು ಯೆಮೆನ್ನಿಂದ ಹೊರಕ್ಕೆ ಕಾಲಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.