ನವದೆಹಲಿ: ಯುವಕರು ಮತ್ತು ಜನಸಾಮಾನ್ಯರಲ್ಲಿ ದೇಶಭಕ್ತಿಯ ಭಾವನೆಯನ್ನು ಮೂಡಿಸುವ ಸಲುವಾಗಿ ಕಾರ್ಗಿಲ್ ಯುದ್ಧದ ಕುರಿತು ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಕೇಂದ್ರ ರಕ್ಷಣಾ ಸಚಿವಾಲಯ ಆಯೋಜನೆಗೊಳಿಸಿದೆ.
ಕಾರ್ಗಿಲ್ ವಿಜಯ್ ದಿವಸ್ ಆದ ಜುಲೈ 26 ರಂದು ಪ್ರಾರಂಭವಾದ ರಸಪ್ರಶ್ನೆ ಸ್ಪರ್ಧೆಯು ಮುಂದಿನ ತಿಂಗಳು ಅಂದರೆ ಆಗಸ್ಟ್ 4 ರವರೆಗೆ ಮುಂದುವರಿಯಲಿದೆ. ಇದನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ MyGov.in ಪ್ಲಾಟ್ಫಾರ್ಮ್ನಲ್ಲಿ ನಡೆಸಲಾಗುತ್ತಿದೆ. ರಸಪ್ರಶ್ನೆಯ ಅವಧಿಯು ಐದು ನಿಮಿಷಗಳಾಗಿದ್ದು, ಈ ಸಮಯದಲ್ಲಿ ಗರಿಷ್ಠ 20 ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ.
ಅಧಿಕೃತ ಪ್ರಕಟನೆಯ ಪ್ರಕಾರ, ಈ ಸ್ಪರ್ಧೆಗೆ ಹತ್ತು ನಗದು ಬಹುಮಾನಗಳಿದ್ದು, ಅದರಲ್ಲಿ ಮೊದಲ ಬಹುಮಾನ 25 ಸಾವಿರ ರೂಪಾಯಿ, ಎರಡನೇ ಬಹುಮಾನ 15 ಸಾವಿರ ಮತ್ತು ಮೂರನೇಯ ಬಹುಮಾನ 10 ಸಾವಿರ ರೂಪಾಯಿಗಳಾಗಿದೆ.
ಅಗ್ರ 100 ವಿಜೇತರಿಗೆ ರಕ್ಷಣಾ ಸಚಿವಾಲಯದಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ ಮತ್ತು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನ ಧ್ವಜಾರೋಹಣ ಸಮಾರಂಭಕ್ಕೆ ಹಾಜರಾಗಲು ಆಹ್ವಾನ ಸಿಗಲಿದೆ. ಆದರೆ ಸ್ವಂತ ಖರ್ಚಿನಲ್ಲೇ ಅಲ್ಲಿಗೆ ತೆರಳಬೇಕು.
ರಸಪ್ರಶ್ನೆಯಲ್ಲಿ ಭಾಗವಹಿಸಲು ಇರುವ ನಿಬಂಧನೆಗಳು
⭕ 14 ವರ್ಷ ಮತ್ತು ಮೇಲ್ಪಟ್ಟ ಭಾರತೀಯ ನಾಗರಿಕರು ಮಾತ್ರ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು.
⭕ ಯಶಸ್ವಿ ವಿಜೇತರನ್ನು ಆಯ್ಕೆಮಾಡುವ ಮಾನದಂಡ “ಕಡಿಮೆ ಸಮಯದಲ್ಲಿ ಗರಿಷ್ಠ ಸರಿಯಾದ ಉತ್ತರಗಳು” ಆಗಿರುತ್ತದೆ, ಇದು 20 ಪ್ರಶ್ನೆಗಳ ಪ್ರಯತ್ನ ಮತ್ತು ಐದು ನಿಮಿಷಗಳ ಅವಧಿಯ ಷರತ್ತುಗಳಿಗೆ ಒಳಪಟ್ಟಿರುತ್ತದೆ.
⭕ ಒಬ್ಬ ವ್ಯಕ್ತಿಯು ರಸಪ್ರಶ್ನೆಯಲ್ಲಿ ಒಮ್ಮೆ ಮಾತ್ರ ಭಾಗವಹಿಸಲು ಅನುಮತಿ ಇದೆ.
⭕ ರಸಪ್ರಶ್ನೆಯಲ್ಲಿ ಭಾಗವಹಿಸಲು ಬಯಸುವ ಯಾವುದೇ ವ್ಯಕ್ತಿ ಅವನ / ಅವಳ ಹೆಸರು, ತಂದೆಯ / ತಾಯಿಯ ಹೆಸರು, ಹುಟ್ಟಿದ ದಿನಾಂಕ, ವಿಳಾಸ, ಇಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಒದಗಿಸುವ ಅಗತ್ಯವಿದೆ.
⭕ ಬೊನಾಫೈಡ್ ದಾಖಲೆಗಳು (ಗುರುತಿನ ಪುರಾವೆ, ವಯಸ್ಸು ಮತ್ತು ವಿಳಾಸ), ರಸಪ್ರಶ್ನೆಯ ಫಲಿತಾಂಶವನ್ನು ಪ್ರಕಟಿಸಿದ ನಂತರ ವಿಜೇತರು ಸಲ್ಲಿಸಬೇಕಾಗುತ್ತದೆ. ಮೇಲಿನ ಮಾಹಿತಿ / ದಾಖಲೆಗಳನ್ನು ಒದಗಿಸದಿರುವುದು ಆಯ್ಕೆಯನ್ನು ಅನೂರ್ಜಿತಗೊಳಿಸುತ್ತದೆ.
⭕ ಒಂದೇ ಮೊಬೈಲ್ ಸಂಖ್ಯೆ ಮತ್ತು ಒಂದೇ ಇಮೇಲ್ ಐಡಿ ಮೂಲಕ ರಸಪ್ರಶ್ನೆಯಲ್ಲಿ ಭಾಗವಹಿಸಬೇಕು. ಒಂದಕ್ಕಿಂತ ಹೆಚ್ಚು ಬಾರಿ ಇವುಗಳನ್ನು ಬಳಸುವಂತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.